ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:49 PM

ಅಳಲು

Posted by ekanasu

ಸಾಹಿತ್ಯ
ಹೂವಾಗಿ ಅರಳಿ
ನಕ್ಕು ನಲಿದು
ನೆಮ್ಮದಿಯಿಂದ ನಾನಿದ್ದಾಗ
ಎಲ್ಲಿಂದ ಹಾರಿ ಬಂದೆ, ನೀ ಪತಂಗ...

ಬಣ್ಣದ ವೇಷದಿಂದೆನ್ನ ಆಕರ್ಷಿಸಿ
ಪರಾಗವನ್ನೂ ಸ್ಪರ್ಷಿಸಿ
ಹಾರಿಯೇ ಬಿಟ್ಟೆಯಲ್ಲ ಹೀರಿ ನನ್ನೆಲ್ಲ ಜೇನ....

ನಾನು ಅಚಲ
ನೀನು ಚಂಚಲ
ಹೂವು ಕಾಯಾಗಿ
ನಾನೀಗ ಏಕಾಂಗಿ...

ಬೆಳೆಯುತಿಹುದು ನಮ್ಮ ಸ್ನೇಹದ ಪ್ರತಿಫಲ
ಲೋಕದ ಕಣ್ಣಿಗೆ ನಾನೊಂದು ಕುತೂಹಲ!
ಹಿಂದಿರುಗಿ ಬಾ...ಓ....ಪತಂಗ ತೋರಿ ಕಿಂಚಿತ್ತು ಕರುಣೆ
ನಾನೊಬ್ಬಳೇ ಹೊರಲಾರೆ ಕಾ(ತಾ)ಯಿಯ ಹೊಣೆ

ಜಿ.ಎನ್ ದಿವ್ಯ ರಾವ್

0 comments:

Post a Comment