ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಕಾರ್ಕಳ: ಶೈಕ್ಷಣಿಕ ಕಲಿಕಾ ಹೊರೆಯಿಂದ ದಣಿದಿರುವ ವಿದ್ಯಾರ್ಥಿಗಳ ಮನಸ್ಸಿಗೆ ಮುದ ನೀಡಲು ವಿದ್ಯಾರ್ಥಿಗಳ ಮೂರುದಿನಗಳ ರಾಜ್ಯಮಟ್ಟದ ಅಂತರ್ಕಾಲೇಜು ಸಾಂಸ್ಕತಿಕ ಹಾಗೂ ಲಲಿತ ಕಲೆಗಳ ಉತ್ಸವ, ಆನಂದೋತ್ಸವ - 12ನ್ನು ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾರ್ಚ್ 8, 9 ಮತ್ತು 10 ರಂದು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸಿ, ಅವರ ಜ್ಞಾನದ ತಿಳಿವನ್ನು ಹಂಚಿ ಕೊಳ್ಳಲು ವೇದಿಕೆ ಒದಗಿಸುವುದು ಈ ಉತ್ಸವದ ಉದ್ದೇಶ.


ಸುಮಾರು 50 ತಾಂತ್ರಿಕ ಕಾಲೇಜುಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಾಂಸ್ಕತಿಕ ಉತ್ಸವದಲ್ಲಿ ಕಲೆತು ತಮ್ಮ ಪೂರಕ ಚಟುವಟಿಕೆಗಳಲ್ಲಿನ ಸಾಮಥ್ರ್ಯವನ್ನು ಪ್ರದರ್ಶಿಸಲಿದ್ದಾರೆ. ಈ ಅಂತರ್ಕಾಲೇಜು ಸಾಂಸ್ಕತಿಕ ಹಾಗೂ ಲಲಿತ ಕಲೆಗಳ ಉತ್ಸವವನ್ನು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ರಾದ ಅನಂತಕೃಷ್ಣಅವರು ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್.ವೈ. ಕುಲಕರ್ಣಿ ಯವರು ವಹಿಸಲಿದ್ದಾರೆ. ಅಂತ್ಯಾಕ್ಷರಿ, ನೃತ್ಯ, ಹಾಡು, ಮೂಕಾಭಿನಯ, ರಸಪ್ರಶ್ನೆ, ಪೈಂಟಿಂಗ್, ಚಿತ್ರರಚನೆ, ಮುಖವರ್ಣಿಕೆ, ವ್ಯಂಗ್ಯಚಿತ್ರ ರಚನೆ, ಪ್ರಬಂಧ, ರಂಗೋಲಿ, ಚರ್ಚೆ , ಆವೆಮಣ್ಣಿನ ಮಾದರಿ ರಚನೆ, ಹೂ ಜೋಡಣೆ, ಒಲೆರಹಿತ ಅಡುಗೆ ಮುಂತಾದ ಸ್ಪರ್ಧೆಗಳು ನಡೆಯಲಿವೆ.
ಆನಂದೋತ್ಸವದ ಅಂಗವಾಗಿ ತಾ. 8 ರಂದು ಸಂಜೆ ವಿದ್ಯಾಲಯದ ಆವರಣದಲ್ಲಿ ಕುದ್ರೋಳಿ ಗಣೇಶ್ ಅವರಿಂದ ವಿಸ್ಮಯ ಜಾದು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

0 comments:

Post a Comment