ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
"ಹವ್ಯಕ"ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ.
ಹವ್ಯಕರ ಆಡುಭಾಶೆ "ಹವ್ಯಕ ಭಾಶೆ". ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.
ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು - ಹವ್ಯಕ ಪಂಗಡದಿಂದ ಬಂದವರಿದ್ದಾರೆ.ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ನಾಲ್ಕು ವರುಷಗಳಿಂದ ತನ್ನ ಸಾಹಿತ್ಯ ಕಾರ್ಯವನ್ನು ಮಾಡುತ್ತಿದೆ.

http://oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಗಿ ಸರಕಾರೀ ಮಾನ್ಯತೆ ಪಡೆದಿದೆ.
ಈಗಾಗಲೇ ಹವ್ಯಕಭಾಷಾ ಸಾಹಿತ್ಯದ ದೃಷ್ಟಿಯಲ್ಲಿ ಅಪಾರ ಕೊಡುಗೆ ಕೊಡುತ್ತಿರುವ ಪ್ರತಿಷ್ಠಾನ, ಮುಂದಿನ ದಿನಗಳಲ್ಲಿ ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ವ್ಯಾಪ್ತಿವಿಸ್ತಾರವನ್ನು ಹೆಚ್ಚಿಸುವ ಯೋಜನೆಗಳು ಇವೆ.

ಈ ಯುಗಾದಿಯ ಪರ್ವಕಾಲದಲ್ಲಿ ಹೊಸ ಆಶಯಗಳ ಚಿಗುರುಗಳಲ್ಲಿ ಮೊದಲನೇ ಹೆಜ್ಜೆ “ವಿಷು ವಿಶೇಷ ಸ್ಪರ್ಧೆ – 2012”
ಬನ್ನಿ, ಭಾಗವಹಿಸಿ, ನಿಮ್ಮ ಮಿತ್ರರಿಂಗೂ ತಿಳಿಸಿ…

ವಿಷು ವಿಶೇಷ ಸ್ಪರ್ಧೆ – 2012 ವಿವರಗಳು:

ಪ್ರಬಂದ
ವಿಷಯ – “ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ”
750 ಶಬ್ದಗಳಿಗೆ ಸೀಮಿತಗೊಳಿಸಿ
ಕಥೆ
ವ್ಯಾಪ್ತಿ: "ಸಾಮಾಜಿಕ ಸಾಮರಸ್ಯ"
750 ಶಬ್ದಗಳಿಗೆ ಸೀಮಿತಗೊಳಿಸಿ
ಕವಿತೆ

30 ಸಾಲುಗಳಿಗೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
ಫೋಟೋ ಸ್ಪರ್ಧೆ
ಪ್ರಕೃತಿ- ಮನುಷ್ಯನ ಬಾಂಧವ್ಯವನ್ನು ಪ್ರತಿಬಿಂಬಿಸುವ ಚಂದದ ಫೊಟೋಕ್ಕೆ ಸೂಕ್ತ ಶೀರ್ಷಿಕೆಯನ್ನೂ ಕೊಟ್ಟು ಕಳುಹಿಸಬೇಕು.
ಫೋಟೋದ ಗಾತ್ರ: ಅಂಚೆಯಲ್ಲಿ ಕಳುಹಿಸುವುದಾದರೆ 5×7 ಅಳತೆಯಲ್ಲಿ..
ಮಿಂಚಂಚೆಯಲ್ಲಿ ಕಳುಹಿಸುವುದಾದರೆ – 1MB ಮಿತಿಯಿರಲಿ.
ಲಘುಬರಹ
ಸದಭಿರುಚಿಯ ನೆಗೆಬರಹ ಈ ವಿಭಾಗಕ್ಕೆ ಬರಲಿ
500 ಶಬ್ದಗಳಿಗೆ ಮಿತಿಗೊಳಿಸಿ.


ನಿಯಮಗಳು:

ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಯಲ್ಲಿ ಇರಬೇಕು.
ಹವ್ಯಕ ಪರಂಪರೆ - ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
ಸ್ಪರ್ಧೆಗೆ ಬರುವ ಯೇವದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
ಸ್ಪರ್ಧೆಗೆ ಬಂದ ಎಲ್ಲಾ ಬರಹ / ಫೋಟೋಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
ಸ್ಪರ್ಧೆಯ ವಿಚಾರದಲ್ಲಿ ಸಂಘಟಕರ ತೀರ್ಮಾನವೇ ಅಂತಿಮ.
ಪ್ರತಿ ವಿಭಾಗಲ್ಲಿಯು ಪ್ರಥಮ ಮತ್ತೆ ದ್ವಿತೀಯ ಎರಡು ಬಹುಮಾನಗಳು ಇರುತ್ತವೆ.
ಭಾಗವಹಿಸಲು ಕೊನೆಯ ದಿನಾಂಕ 04-04-2012
ನಿಮ್ಮ ಬರಹ/ಫೋಟೋವನ್ನು ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ ಸಹಿತ, ಈ ವಿಳಾಸಕ್ಕೆ ಕಳುಹಿಸಿಕೊಡಿ:
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
“ಅನುಗ್ರಹ”, ಶಿವಗಿರಿ ನಗರ, ಕುಳಾಯಿ,
ಹೊಸಬೆಟ್ಟು, ಮಂಗಳೂರು.
575019
ಮಿಂಚಂಚೆ ವಿಳಾಸ:
editor@oppanna.com

0 comments:

Post a Comment