ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮೂಡಬಿದ್ರೆ:ಎನ್.ಡಿ.ಟಿ.ವಿ - ಇಂಡಿಯಾ ಕ್ಯಾನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬ್ರಾಡ್ ಕಾಸ್ಟ್-2012 ಮಾಧ್ಯಮ ಕಾರ್ಯಗಾರವು ಆಳ್ವಾಸ್ ಕಾಲೇಜಿನ ಶಿವರಾಮಕಾರಂತ ವೇದಿಕೆಯಲ್ಲಿ ಗುರುವಾರ ನಡೆಯಿತು.ಕಾರ್ಯಗಾರವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವರವರು ಉದ್ಘಾಟಿಸಿದರು.
ಇಂದು ಮಾಧ್ಯಮ ಕ್ಷೇತ್ರವೂ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದು, ಅದು ಎತ್ತ ಕಡೆ ಸಾಗುತ್ತಿದೆ ಎಂದು ಊಹಿಸುವುದು ಕಷ್ಟದ ಕೆಲಸವಾಗಿದೆ.ಮಾಧ್ಯಮ ಎನ್ನುವುದು ಸಮಾಜದ ಕನ್ನಡಿ. ಸಮಾಜವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಬೇಕಾದ ಕೆಲಸ ಮಾಧ್ಯಮದಿಂದ ಆಗಬೇಕಾಗಿದೆ.

ಇದರ ಜೊತೆಗೆ ಮಾನವೀಯ ಮೌಲ್ಯವನ್ನು ಉಳಿಸಬೇಕಾದದ್ದು ಮಾಧ್ಯಮದ ಕರ್ತವ್ಯವಾಗಿದೆ. ಸಮಾಜವನ್ನು ವಿನಾಶಕ್ಕೆ ಕೊಂಡೊಯ್ಯುವ ಕೆಲಸ ಮಾಧ್ಯಮದಿಂದ ಆಗಬಾರದು ಎಂದು ಅಬಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕುರಿಯನ್, ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶೋಭಾ ಸಿ.ವಿ, ಮಾನಿಷ್ ಕೆ. ಮೋಕ್ಷಗುಂಡಂ, ಕನಸು ನಾಗತಿಹಳ್ಳಿ ಉಪಸ್ಥಿತರಿದ್ದರು.

ರೇಣುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ,ಎ.ವಿ ಬಾಳಿಗ ಕಾಲೇಜು, ಬ್ರಹ್ಮಾವರ, ಪ್ರಥಮದರ್ಜೆ ಕಾಲೇಜು ಬೆಳ್ಳಾರೆ, ಎಸ್ ಡಿ ಎಂ ಕಾಲೇಜು ಉಜಿರೆ, ಮಾಧವ ಪೈ ಮೆಮೋರಿಯಲ್ ಕಾಲೇಜು ಮತ್ತು ಆಳ್ವಾಸ್ ಕಾಲೇಜು ಮಾಡಬಿದ್ರೆ ಸಂಸ್ಥೆಗಳ 171 ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದರು.

ವರದಿ: ಯಶೋಧರ ಬಂಗೇರ
ಚಿತ್ರ: ಶ್ರೇಯಸ್

0 comments:

Post a Comment