ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:36 PM

ಅದೊಂದು ಕಲೆ!

Posted by ekanasu

ವೈವಿಧ್ಯ
ಹೌದು... ಅದೊಂದು ಕಲೆ...ಅದ್ಯಾವ ಕಲಾವಿದನೂ ಕಲಿಸಿದ ಕಲೆಯಲ್ಲ...ವಿಧ್ಯೆಯೂ ಅಲ್ಲ... ಬದಲಾಗಿ ಅದೊಂದು ವೈಚಿತ್ರ್ಯ. ಈ ಪ್ರಕೃತಿಯೇ ಹಾಗೆ...ತನ್ನೊಳಗಿರುವ ಪ್ರತಿಯೊಂದು ಜೀವರಾಶಿಯಲ್ಲೂ ಒಂದಿಲ್ಲೊಂದು ವೈಶಿಷ್ಟ್ಯತೆಯನ್ನು ಮೂಡಿಸಿರುತ್ತದೆ. ಪುಟ್ಟದಾದ ಕಡ್ಡಿಗಳನ್ನಿಟ್ಟು ರಚಿಸುವ ಗೂಡೆಂಬ ಕಲಾಕೃತಿ ಎಂತಹ ಕಲಾವಿದರನ್ನೂ ಮೋಡಿ ಮಾಡದಿರದು.


ಹೌದು ಹಕ್ಕಿಗಳ ಗೂಡು ನೋಡಲು ಬಲು ಸುಂದರ. ಪ್ರತಿಯೊಂದು ಪ್ರಬೇಧದ ಪಕ್ಷಿಯೂ ಅದರದ್ದೇ ಆದ ರೀತಿಯಲ್ಲಿ ಗೂಡು ರಚಿಸುತ್ತದೆ. ಕೆಲವೊಂದು ತೆರೆದ ಗೂಡಾದರೆ ಇನ್ನು ಕೆಲವು ಅತ್ಯಂತ ಸುಂದರವಾದ ಸೂರನ್ನೊಳಗೊಂಡ ಗೂಡು. ಮತ್ತೆ ಕೆಲವು ಮರದ ಪೊಟರೆಯನ್ನೇ ಗೂಡಾಗಿ ಪರಿವರ್ತಿಸಿದರೆ ಇನ್ನು ಕೆಲವು ಹಕ್ಕಿಗಳು ಮರದಲ್ಲೆಲ್ಲಾ ಉದ್ದುದ್ದಕ್ಕೆ ಗೂಡು ಕಟ್ಟಿ ನೇತುಹಾಕಿಬಿಡುತ್ತವೆ. ಸುಂದರವಾಗಿ ಅಷ್ಟೇ ವ್ಯವಸ್ಥಿತವಾಗಿ ವೈರಿಗಳಿಂದ ರಕ್ಷಿಸಲು ವಿಶೇಷ ರೀತಿಯ ಗೂಡುಗಳನ್ನು ಕಟ್ಟುವ ಹಕ್ಕಿಗಳೂ ಇವೆ.ಸಣ್ಣ ಸಣ್ಣ ಮರದ ಟೊಂಗೆಗಳು, ಮುಳಿಹುಲ್ಲು, ಮರದ ನಾರು, ಒಣಎಲೆ, ಅಂಟಾಗಿರುವ ವಸ್ತುಗಳನ್ನು ಉಪಯೋಗಿಸಿ ರಚಿಸಿದ ಸುಂದರ ಗೂಡುಗಳು ಎಂತಹವರನ್ನೂ ಮೋಡಿ ಮಾಡದಿರದು.ಹಕ್ಕಿಗಳ ಗೂಡುಗಳೇ ಒಂದು ಆಕರ್ಷಕವಾದವು. ಸಾಮಾನ್ಯವಾಗಿ ತನ್ನ ವೈರಿಗಳಿಂದ ರಕ್ಷಿಸುವ ಸಲುವಾಗಿ ಹಕ್ಕಿಗಳು ಎತ್ತರದ ಮರದಲ್ಲಿ, ಫಕ್ಕನೆ ಗೋಚರಿಸದ ಮಾದರಿಯಲ್ಲೇ ಗೂಡು ಕಟ್ಟುತ್ತವೆ.
ಚಿತ್ರ ಕೃಪೆ: ಅಂತರ್ಜಾಲ

0 comments:

Post a Comment