ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಹಾಡು ಹಳೆಯದಾದರೇನು ಭಾವ ನವನವೀನ ಎಂಬಂತೆ ಹಳೆಯ ಹಾಡುಗಳಿಗೆ ತಲೆದೂಗುವ ಎಷ್ಟೋ ಜನರನ್ನ ಇಂದು ನಾವು ಕಾಣಬಹುದು. ಚಿತ್ರಗೀತೆಗಳು, ಭಾವಗೀತೆಗಳು, ಜಾನಪದಗೀತೆಗಳು, ಭಕ್ತಿಗೀತೆಗಳು, ಹೀಗೆ ಎಲ್ಲ ಗೀತೆಗಳಿಗೂ ಅದರದ್ದೇ ಆದಂತಹ ಕೇಳುವ ವರ್ಗವಿದೆ.ಆದರೆ ಆ ಹಾಡುಗಳು ಯಾವ ಸಂದರ್ಭದಲ್ಲಿ ಹುಟ್ಟಿವೆ ಎಂಬುದು ಯಾರಿಗೂ ಸಹ ತಿಳಿದಿರುವುದಿಲ್ಲ. ಹಾಡು ಯಾವ ಸಂದರ್ಭದಲ್ಲಿ ಏಕೆ ಹುಟ್ಟಿವೆ ಎಂದು ಆ ಹಾಡಿನ ಜೊತೆಗೆ ತಿಳಿಸಲು ಪ್ರಯತ್ನಿಸಿದವರು ಎ.ಆರ್ ಮಣಿಕಾಂತ್.


ಕನ್ನಡದ ಪ್ರಸಿದ್ದ ಪತ್ರಕರ್ತ, ಅಂಕಣಕಾರ ಎ.ಆರ್ ಮಣಿಕಾಂತ್ ತಮ್ಮ "ಹಾಡು ಹುಟ್ಟಿದ ಸಮಯ" ಪುಸ್ತಕದ ಮೂಲಕ ಈ ಒಂದು ಪ್ರಯತ್ನಕ್ಕೆ ಕೈ ಇಟ್ಟಿದ್ದಾರೆ. ಒಟ್ಟು 51 ಹಾಡುಗಳ ಕುರಿತಾಗಿರುವ ಈ ಪುಸ್ತಕದಲ್ಲಿ ಹಳೆಯ ಹಾಡುಗಳೊಂದಿಗೆ ಹೊಸ ಕೆಲ ಹಾಡುಗಳೂ ಸಹ ಸೇರಿಕೊಂಡಿವೆ. ಪ್ರತಿಯೊಂದು ಗೀತೆಯ ಹಿಂದೆಯೂ ಕೂಡಾ ಒಂದು ಪುಟ್ಟ ಕಥೆ ಇರುತ್ತದೆ ಎಂಬುದು ಈ ಪುಸ್ತಕದಲ್ಲಿ ಮಣಿಕಾಂತ್ ಬಹಳ ಸೊಗಸಾಗಿ ನಿರೂಪಿಸಿದ್ದಾರೆ.

ಜಿ.ವಿ ಅಯ್ಯರ್, ಟಿ.ಜಿ ಲಿಂಗಪ್ಪ, ಜಿ.ಕೆ ವೆಂಕಟೇಶ್, ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ, ಗೀತಪ್ರಿಯ, ದೊಡ್ಡರಂಗೇಗೌಡ, ಆರ್.ಎನ್ ಜಯಗೋಪಾಲ್, ಚಿ.ಸದಾಶಿವಯ್ಯ, ಚಿ.ಉದಯಶಂಕರ್, ಜಯಂತ್ ಕಾಯ್ಕಿಣಿ, ವಿಜಯನಾರಸಿಂಹ, ಗೋಪಾಲ ಯಾಜ್ಞಿಕ್, ಕೆ.ಕಲ್ಯಾಣ್, ಸಿ.ವಿ ಶಿವಶಂಕರ್ ಹೀಗೆ ಅನೇಕರು ಚಲನಚಿತ್ರಗೀತೆಗಳಿಗೆ ಬರೆದ ಹಾಡಿನ ರಹಸ್ಯವನ್ನು ಸ್ವಾರಸ್ಯಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನ ನೀಲಿಮಾ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. 230+16 ಪುಟಗಳನ್ನು ಹೊಂದಿರುವ ಈ ಪುಸ್ತಕದ ಬೆಲೆ 125 ರೂಪಾಯಿಗಳು. ಎಲ್ಲರೂ ಓದಲೇ ಬಹುದಾದ ನೆನಪಿನಲ್ಲಿ ಉಳಿಯುವಂತಹ ಈ ಪುಸ್ತಕ ಕನ್ನಡ ಪುಸ್ತಕ ಲೋಕಕ್ಕೆ ಉತ್ತಮ ಕೊಡುಗೆಯಾಗಿದೆ.

- ದರ್ಶನ್ ಬಿ.ಎಂ

0 comments:

Post a Comment