ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:43 PM

ವಾರಸುದಾರೆ...

Posted by ekanasu

ಸಾಹಿತ್ಯ
ತಲೆ ತಲಾಂತರದಿಂದ ಬಂದ ಕಾಯಿದೆಗಳಿಗೆ
ನಾನು ವಾರಸುದಾರೆ
ನನ್ನ ತಾತ-ಮುತ್ತಾತಂದಿರ ಹಠಗಳಿಗೆ
ನಮ್ಮಜ್ಜಿ ಅವರಜ್ಜಿ ಕೇಳುಗರು

ನನ್ನಪ್ಪನ ಕೈಂಕರ್ಯಗಳಿಗೆ
ನನ್ನಮ್ಮ ಮೂಕ ಪ್ರೇಕ್ಷಕಿ
ಆದರೆ ನಾನು ತಲೆ ತಲಾಂತರದಿಂದ ಬಂದ
ಕಾಯಿದೆಗಳಿಗಳನ್ನು ಕಾಪಿಡುವ
ಭವಿಷ್ಯದ ಕೊಂಡಿ.

ಸಾವಿರಾರು ವರ್ಷಗಳ ಮನೆತನದ
ಮಾನ-ಮರ್ಯಾದೆಗಳಿಗೆ ಸಾಕ್ಷಿಯಿರದಿದ್ದರು
ಅದನ್ನು ಬೆಳೆಸಿಕೊಂಡು ಹೋಗುವ
ನೂರಾರು ಸಲಹೆಗಳಿಗೆ ನಾನು ಸಾಕ್ಷಿಯಾಗಿರುವೆ
ಮನಸಿರದಿದ್ದರೂ....

ಏಕೆಂದರೆ ತಲೆ ತಲಾಂತರದಿಂದ ಬಂದದ್ದೆಲ್ಲವಕ್ಕೂ
ನಾನು ವಾರಸುದಾರೆ...!

- ಸೌಮ್ಯ ಆದೂರು.

1 comments:

Anonymous said...

nimma kavana channagide
venkatesh.t.malhar
yadgir

Post a Comment