ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಅಷ್ಟಮಂಗಲ ಪ್ರಶ್ನೆಯನ್ನು ಪ್ರಶ್ನಿಸುವವರಿಗೆ ಶ್ರೀಕ್ಷೇತ್ರ ಬನಾರಿಯಲ್ಲಿ ಉತ್ತರ.... ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ.

ಮಂಗಳೂರು: ೭೫೦ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇಂದು ಪ್ರತಿಷ್ಟಾಪನೆಗೊಂಡಿದೆ.ಒಂದು ದೇವಸ್ಥಾನ ನಿರ್ಮಾಣಗೋಳ್ಳಬೇಕಾದರೆ ಪ್ರಾಕಾರವು ಬೇಕು ಮತ್ತು ಆಗಮ ಶಾಸ್ತ್ರವೂ ಬೇಕು.


ಚಕ್ರತೀರ್ಥ ಮತ್ತು ಎಡ ಕಾಲಿನ ನಾಟ್ಯ ಭಂಗಿಯ ಶಿಲಾಮೂರ್ತಿ ದೇಗುಲದ ಭವ್ಯ ಇತಿಹಾಸವನ್ನು ಸಾರುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು.

ಅವರು ಬನಾರಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ನಾದ ದೇವತೆ ಶ್ರೀ ಕೃಷ್ಣ. ಇಲ್ಲಿ ಅವನು ಗೋಪಾಲಕೃಷ್ಣ.

ಭಗವಂತ ಗೋಪಾಲನೆಯ ಮೂಲಕ ಗೋವಿನ ಮಹತ್ವವನ್ನು ಸಾರಿದ್ದಾನೆ ಎಂದು ಹೇಳಿದರು.ವೇ.ಬ್ರ ಶ್ರೀಕುಂಟುಕೂಡೆಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಈ ಬ್ರಹ್ಮಕಲಶೋತ್ಸವ ನಡೆದಿದೆ.

ಚಿತ್ರ - ವರದಿ: ಗೌತಮ ಬಿ.ಕೆ.

0 comments:

Post a Comment