ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಇದೀಗ ಮಾವಿನ ಕಾಯಿ ಉಪ್ಪಿನಕಾಯಿ ಸೀಸನ್... ಎಲ್ಲೆಡೆ ಮಾವಿನ ಮಿಡಿಗಾಗಿ ಹುಡುಕಾಟ...ಅಲೆದಾಟ...ಕಾರ್ಯಕ್ರಮದಲ್ಲಿ ಹೋದರಂತೂ ಮಹಿಳೆಯರು " ಹೇ ನಿಮ್ಗೆ ಎಷ್ಟು ಮಾವಿನಕಾಯಿ ಸಿಕ್ಕಿತು...ಹೇಗಿದೆ...ಸೊನೆಯಾಗಿದ್ಯಾ...ಹುಳಿಯಾಗಿದ್ಯಾ...?...ಪರಿಮಳ ಇದ್ಯಾ..., ಕಳೆದ ಬಾರಿ ಸಿಕ್ಕಷ್ಟು ಮಾವಿನ ಮಿಡಿ ಈ ಬಾರಿ ಸಿಕ್ಕಿಲ್ಲ..." ಈ ಮಾತುಗಳಂತೂ ಸರ್ವೇ ಸಾಮಾನ್ಯ...


ಹೌದು...ಇದು ಮಾವಿನ ಸೀಸನ್. ಪ್ರತಿ ಮನೆಯಲ್ಲೂ ಉಪ್ಪಿನಕಾಯಿಯ ತಯಾರಿ... ಸಾಸಿವೆ ತಂದು ಒಣಗಿಸಿ ಇಡುವುದು... ಊರ ಮೆಣಸು ತಂದು ಅದನ್ನು ಉಪ್ಪಿನ ಕಾಯಿಗಾಗಿ ರೆಡಿಮಾಡಿಡುವುದು...ಎಲ್ಲಿ ಮಾವಿನ ಮಿಡಿ ಸಿಗುತ್ತದೋ ಎಂಬ ಚಾತಕ ಪಕ್ಷಿಯ ಕಾಯುವಿಕೆ...ಇದು ಮಾವಿನ ಸೀಸನ್ ಸಂದರ್ಭ ಪ್ರತಿ ಮನೆಯ ಸಾಮಾನ್ಯ ನೋಟ...


ಈ ಬಾರಿ ಮಾವಿನಕಾಯಿಯ ಹೇಳುವಂತಹ ಬೆಳೆ ಕಾಣುತ್ತಿಲ್ಲ. ಮರಗಳಲ್ಲಿ ವಿರಳವಾಗಿ ಮಾವಿನ ಮಿಡಿ ಗೋಚರಿಸುತ್ತಿವೆ... ಕಳೆದ ಬಾರಿಯಂತೆ ಅಬ್ಬರದ ಮಾವು ಈ ಬಾರಿಯಿಲ್ಲ...ಇದರಿಂದಾಗಿ ಮಾವಿನ ಮಿಡಿಯೂ ಬೇಕಾದಷ್ಟು ಸಿಗದೆ ಮಹಿಳೆಯರು ಕೊಂಚ ಬೇಸರದಲ್ಲಿದ್ದಾರೆ.ಕಾಡಿನಲ್ಲಿರುವ ಮಾಮರಗಳಲ್ಲಿ ಒಂದಷ್ಟು ಮಾವಿನಮಿಡಿಗಳು ಗೋಚರಿಸಿವೆ. ಅದನ್ನು ಕೊಯ್ದು ತಂದು ಸಂತೆಯಲ್ಲಿ ಮಾರಾಟ ಮಾಡುವುದು ಕಾಣಸಿಗುತ್ತದೆ. ಇದೀಗ ಒಂದು ಮಾವಿನ ಮಿಡಿಗೆ ಒಂದು ರುಪಾಯಿಯಂತೆ ಮಾರಾಟಮಾಡಲಾಗುತ್ತದೆ. ಅಷ್ಟರ ಮಟ್ಟಿಗೆ ಮಾವು ಇಂದು "ಬೆಲೆ"ಹೆಚ್ಚಿಸಿಕೊಂಡಿದೆ.


ಮಾವಿನ ಮಿಡಿ ಉಪ್ಪಿನಕಾಯಿಯಂತೂ ಬಹಳ ರುಚಿ. ಬಾಯಲ್ಲಿ ನೀರೂರಿಸುವ ಮಿಡಿಉಪ್ಪಿನಕಾಯಿ... ಮಳೆಗಾಲದಲ್ಲಿ ಧೋ ಎಂದು ಮಳೆ ಸುರಿಯುತ್ತಿರಬೇಕಾದರೆ; ಇತ್ತ ಗಟ್ಟಿಮೊಸರು, ಕುಸಲಕ್ಕಿ ಅನ್ನದೊಂದಿಗೆ ಸೇರಿಸಿ ಊಟಮಾಡುವುದೇ ಒಂದು ಮಜಾ...

0 comments:

Post a Comment