ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರುಚಿ ವೈವಿಧ್ಯ
ದಿನಕ್ಕೊಂದು ರುಚಿ...ವ್ಹಾವ್...ಏನು ಸಿಹಿ... ಚುರ್ ಎಂಬ ಹೊಟ್ಟೆಗೆ ಘಮ ಘಮಿಸುವ ರುಚಿ ವೈವಿಧ್ಯ ಹಿತವೆನಿಸದಿರಲಾದರು. ಹೌದು...ಇದು ಹವ್ಯಕ ಸಮುದಾಯ ಹೆಚ್ಚಾಗಿ ಮಾಡುವ ತಿಂಡಿ...ಹೆಸರು ಗೆಣಸಲೆ... ರುಚಿಯೂ ಅಷ್ಟೇ ...


ನೋಡುತ್ತಿರುವಾಗಲೇ ಬಾಯಲ್ಲಿ ನೀರೂರಿಸುವಂತಹದು...ಹೌದು...ಬಿಸಿ ಬಿಸಿಯ ಗೆಣಸಲೆಯಿಂದ ಹೊರಬರುವ ಹಬೆಯ ಪರಿಮಳವೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇನ್ನು ತುಪ್ಪ ಸೇರಿಸಿ ಸವಿಯ ಹೊರಟರಂತೂ ಹೊಟ್ಟೆ ತುಂಬಿದ್ದೇ ತಿಳಿಯದು...ಆ ರೀತಿಯ ರುಚಿ ಈ ಗೆಣಸಲೆಗಿದೆ.


ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟನ್ನು ಬಾಳೆಲೆಯಲ್ಲಿ ಹರವಿ ಬೆಲ್ಲ - ತೆಂಗಿನ ಕಾಯಿ ತುರಿಯನ್ನು ಹಾಕಿ ಹಬೆಯಲ್ಲಿ ಬೇಯಿಸಿದರೆ ಗೆಣಸಲೆ ರೆಡಿ... ಹಬ್ಬದ ಸಂದರ್ಭದಲ್ಲಿ ಗೆಣಸಲೆ ಬೇಕೇ ಬೇಕು... ಸಂಜೆಯ ಹೊತ್ತಲ್ಲೂ ಗೆಣಸಲೆ ಸವಿ ಸವಿಯುವುದು ಹವ್ಯಕ ಸಮುದಾಯದಲ್ಲಿ ರೂಢಿ. ನೀವೂ ಮಾಡಿನೋಡಿ...ಈ ಗೆಣಸಲೆಯ ಸವಿ ಸವಿಯಿರಿ...

0 comments:

Post a Comment