ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗುರುವಾಯನಕೆರೆ:ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ - ಶ್ರೀ ರಾಮಚಂದ್ರಾಪುರಮಠ,ಹೊಸನಗರ ಇಲ್ಲಿನ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಗುರುವಾಯನಕೆರೆ "ನಮ್ಮ ಮನೆ"ಹವ್ಯಕಭವನಕ್ಕೆ ಚಿತ್ತೈಸಿದರು.


ನಮ್ಮ ಮನೆ ಹವ್ಯಕಭವನದಲ್ಲಿ ಶ್ರೀದುರ್ಗಾತ್ರಿಕಾಲಪೂಜೆ,ಶ್ರೀ ಗುರುಪಾದಪೂಜೆ,ಭಿಕ್ಷಾದಿ ಸೇವೆಗಳು,ಶ್ರೀ ಗಣಾಧೀಶ್ವರಹೋಮ, ದೀಪಾರಾಧನೆ,ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವತಾ ಪೂಜೆ, ಗೋಪೂಜೆ,ಅಷ್ಟಾವಧಾನ ಸೇವೆಗಳು ನಡೆದವು.ಮಾರ್ಚ್ 19ರಂದು ಶ್ರೀರಾಮಸಾಮ್ರಾಜ್ಯಾಭಿಷೇಕ, ವೇಣೂರು ಮತ್ತು ಉಜಿರೆ ವಲಯಗಳ ವಾರ್ಷಿಕೋತ್ಸವ, ಉಂಡೆಮನೆ ಪ್ರಶಸ್ತಿ ಪ್ರದಾನಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ಚಿತ್ರರಂಗದ ಗೀತ ಸಾಹಿತಿ ಕೆ.ಕಲ್ಯಾಣ್ ದಂಪತಿ ಗುರುವಾಯನಕೆರೆ "ನಮ್ಮ ಮನೆ ಹವ್ಯಕ ಭವನ"ಕ್ಕೆ ಭೇಟಿ ನೀಡಿ ಶ್ರೀ ಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಶ್ರೀ ಮಠದ ವಿವಿಧ ಕಾರ್ಯಯೋಜನೆ, ಸೇವಾ ಯೋಜನೆಗಳಬಗ್ಗೆ ಹರ್ಷ ವ್ಯಕ್ತಪಡಿಸಿದರು.
0 comments:

Post a Comment