ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:31 PM

ಮರೆಯಲಿ ಹ್ಯಾಂಗ?!

Posted by ekanasu

ಮಹಿಳಾ ದಿನದ ವಿಶೇಷ ಲೇಖನ

ಬಿಸಿಲು, ಬಿರು ಬಿಸಿಲು, ಈ ಎರಡು ಅಕ್ಷರಗಳನ್ನು ನಾನು ಹೇಳಿದರೆ ಬಹುಶಃ ನನ್ನ ಗೆಳೆಯ ಗೆಳತಿಯರೆಲ್ಲ ನಗಬಹುದು. ಏಕೆಂದರೆ ನಾನು ಮೂಲತಃ ಉತ್ತರ ಕರ್ನಾಟಕದವಳು. ಅಲ್ಲಿ ನಮಗೆ ಬಿಸಿಲೆಂದರೆ ಬಿಸಿಲಿಷ್ಟೇನಾ! ಎನ್ನುವ ಉಡಾಫೆ ಆದರೆ. ಬಿಸಿಲುಗಾಲ ಬಂದರೆ ಸಾಕು ಮುಖ ಕಿವುಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಿಸಿದ ದಕ್ಷಿಣ ಕರ್ನಾಟಕಕ್ಕೆ ನಮೋ ನಮಃ.

ಗಂಗೋತ್ರಿ ಹಸಿರು ನೆಲೆಯ ಸೊಗಸು, ಹಾಗು ತಣ್ಣನೆಯ ವಾತಾವರಣದ ಒಂದು ಮಿನಿ ಸ್ವರ್ಗ. ಇಲ್ಲಿ ಪ್ರತಿ ಗಿಡಗಳು ಸಹ ಒಂದು ಮುದವನ್ನು ನೀಡುತ್ತದೆ. ಅದನ್ನು ಪ್ರತ್ಯೇಕವಾಗಿ ನೋಡು ನೋಡುತ್ತಲೇ ಸ್ನಾತಕೋತ್ತರ ಪದವಿ ಮುಗಿಯುವುದು ಸಹ ಅಷ್ಟೇ ನಿಜ.

ಮನುಷ್ಯ ಹುಟ್ಟಿನಿಂದ ಹಿಡಿದು ಅವನು ಕೊನೆಯಾಗುವವರೆಗಿನ ಸಂಪೂರ್ಣವೃತ್ತಾಂತವನ್ನು ಒಂದು ದಿನಕ್ಕೆ ಹೋಲಿಸಿದರೆ; ಅದೇ ಮನುಷ್ಯನ ಬದುಕು ಒಂದು ಮರಕ್ಕೆ ಹೋಲಿಸಿದರೆ; ಅವನು ಮಳೆಗಾಲದಲ್ಲಿ ಚಿಗುರಿ, ಚಳಿಗಾಲದಲ್ಲಿ ಎಲೆ ಉದುರಿಸುತ್ತಾ ಹಾಗೂ ಹೂ ಕಾಯಿಗಳನ್ನು ಬಿಡುತ್ತಾ,ಬಿಸಿಲುಕಾಲದಲ್ಲಿ ತನ್ನ ಜೀವನವನ್ನು ಕೊನೆಗಾಣಿಸುವ ರೀತಿ... ಅನೇಕ ಮರಗಳು ಹೀಗಾಗುತ್ತಲೇ ಇರುತ್ತವೆ. ಇಂತಹ ಸ್ಥಿತಿಯನ್ನು ನೋಡುತ್ತಾ ಸಾಗಿದರೆ ಬಹುಶಃ ಮನ ಕಲಕುವಂತೆ ಮಾಡುವಂತು ನಿಜ.


ಈಗ ಗಂಗೋತ್ರಿಯ ಎಲ್ಲಾ ಮರಗಳು ಎಲೆ ಉದುರಿಸಿಕೊಂಡು ಬಣಗೊಳ್ಳುತ್ತಿವೆ. ಆದ್ದರಿಂದ ಬಹುಶಃ ಹೊರಗಡೆ ಸುತ್ತಾಡಲಿಕ್ಕೆ ಒಂದು ಬೇಜಾರು. ಆದರೂ ಇಂತಹ ಬೇಜಾರಿನಲ್ಲಿಯೂ ಸಹ ಒಂದು ಕಳೆಯನ್ನು ನೀಡಲು ನಿಂತಿವೆ ಎಲೆ ಉದುರಿಸಿ ಕೇವಲಕ ಹಳದಿ ಹೂವುಗಳನ್ನು ಹೊತ್ತು ನಿಂತ ಗಿಡಗಳು. ನಿಜಕ್ಕೂ ಮಾನವ ತನ್ನ ಕೊನೆಗಾಲದಲ್ಲಿ ಎಲ್ಲರಿಗೂ ಸಹಾಯ ಮಾಡುವ ಉದ್ದೇಶದಿಂದ ಅನೇಕ ಕಾರ್ಯಗಳನ್ನು ಮಾಡಿ ಮಡಿಯುವ ರೀತಿ ಈ ಹಳದಿ ಹೂವಿನ ಮರವು ತನ್ನ ಕೊನೆಗಾಲದಲ್ಲಿ ಎದೆ ಝಲ್ಲೆನ್ನುವ ಹಾಗೆ ಪ್ರಕೃತಿ ಪ್ರಿಯರಿಗೆ ಸೊಬಗು ನೀಡಿ ನಿರ್ನಾಮವಾಗಲು ಅಣಿಯಾಗುತ್ತಿವೆ ಎನ್ನಬಹುದು.


ಇಂತಹ ಹಳದಿ ಪುಷ್ಪಗಳ ಮರಗಳು ನಿರಂತರವಾಗಿ ಚಳಿಗಾಲದಲ್ಲಿ ತನ್ನ ಎಲ್ಲಾ ಎಲೆಗಳನ್ನು ಉದುರಿಸಿ ಕೇವಲ ಹಳದಿ ಹೂವುಗಳನ್ನು ಹೊತ್ತು ಮಹಾ ಎಂದರೆ 15 ದಿನಗಳು ನಿಲ್ಲಬಹುದು. ನಂತರ ಬೋಳು ಬೋಳು.
ನಿರಂತರ ಹಸಿರಾಗಿ ಮುದ ನೀಡುವ ಅನೇಕ ಗಿಡ ಮರಗಳಿಗಿಂತ ಬಂದೆನ್ನುವದಕ್ಕಿಂತ ಮುಂಚೆಯೇ ಮರೆಯಾಗಿ ಹೋಗುವ ಈ ಹಳದಿ ಹೂವುಗಳಿಗೊಂದು ಸಲಾಮ್. ಸಮಯ ಸಿಕ್ಕಾಗ ಒಂದು ಘಳಿಗೆ ಈ ಮರಗಳ ಕೆಳಗೆ ತಮ್ಮ ಪ್ರೀತಿ ಪಾತ್ರರೊಡನೆ ನಿಮ್ಮ ಸಮಯವನ್ನು ಕಳೆಯಲು ಈ ಮರದ ಬುಡದಲ್ಲೊಂದು ರೌಂಡ್ ಹೋಗಿಬನ್ನಿ...

- ಸ್ನೇಹಾ ಉಜ್ವಲ
ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗ
ಮಾನಸಗಂಗೋತ್ರಿ ಮೈಸೂರು.

1 comments:

shivu said...

congrats.......
lekhan tumba chenngide

from Shivraj holeppanavar
Dept of MJMC
gulberg university

Post a Comment