ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಕರಾವಳಿ ಸೇರಿದಂತೆ ಇಡೀ ಕರ್ನಾಟಕದಲ್ಲಿ ಹವಾ ವೈಪರೀತ್ಯ ಕಳೆದ ಒಂದು ವಾರದಿಂದ ಉಂಟಾಗಿದೆ. ಇದರಿಂದಾಗಿ ತೀವ್ರ ತೊಂದರೆಗಳು ಕಾಣತೊಡಗಿದೆ. ರಾತ್ರಿಯಾಗುತ್ತಿದ್ದಂತೆಯೇ ಸಣ್ಣಗೆ ಚಳಿ ಹವೆ.ಬೆಳಗಾಗುತ್ತಿದ್ದಂತೆಯೇ ಚಳಿಯ ಪ್ರಭಾವ ಹೆಚ್ಚಾಗುತ್ತಿದೆ. ಬೇಸಗೆಯಲ್ಲೂ ಚಳಿಯ ಕಾಟ ಪ್ರಾರಂಭಗೊಂಡಿದೆ. ಗಂಟೆ ಹತ್ತಾಗುವುದರೊಳಗಾಗಿ ಸೆಖೆಯ ತೀವ್ರತೆ ಏರಿಕೆಯಾಗುತ್ತಿದೆ. ಬಿಸಿಲ ಝಳ - ರಾತ್ರಿ ಚಳಿಯ ವಾತಾವರಣ ಈ ರೀತಿಯ ಹವಾ ವೈಪರೀತ್ಯದಿಂದಾಗಿ ಜನತೆ ದಿಕ್ಕೆಟ್ಟು ಹೋಗಿದ್ದಾರೆ. ವಾತಾವರಣದ ಈ ಬದಲಾವಣೆ ಜನಜೀವನದ ಆರೋಗ್ಯದ ಮೇಲೆ ತೀವ್ರ ಹೊಡೆತ ನೀಡಲಾರಂಭಿಸಿದೆ.

ಹೆಚ್ಚಿದ ಅನಾರೋಗ್ಯ

ಹವಾ ವೈಪರೀತ್ಯದಿಂದ ಆರೋಗ್ಯ ಹದಗೆಡುವುದು ಸಾಮಾನ್ಯ. ಇದೀಗ ಶೀತ, ಕೆಮ್ಮು, ಕಫ, ಗಂಟಲು ಕೆರೆತ, ಅಲರ್ಜಿ, ತುರಿಕೆ, ಕಾಲು - ಮೈ ತ್ವಚೆ ಒಣಗಿಂತಾಗುವುದು, ಕಾಲಿನ ಪಾದದ ಹಿಮ್ಮಡಿ ಒಡೆಯುವುದು , ಬಿಡದೆ ಕಾಡುವ ನೆಗಡಿ , ಶ್ವಾಸ ಕೋಶದ ತೊಂದರೆ, ವೈರಪ್ ಜ್ವರ ಮಾಮೂಲಿಯಾಗಿದೆ.
ವಾತಾವರಣದಲ್ಲಿನ ಏರು ಪೇರಿನಿಂದಾಗಿ ಮಾನವ ದೇಹ ಈ ತೊಂದರೆಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ.

ಆಸ್ಪತ್ರೆಗಳು ಫುಲ್ ...ಫುಲ್..ಬದಲಾದ ಹವೆಗೆ ತೊಂದರೆಗೊಳಗಾಗಿ ಆಸ್ಪತ್ರೆ/ವೈದ್ಯರ ಮೊರೆ ಹೋಗುವವರ ಸಂಖ್ಯೆ ಇದೀಗ ಅಧಿಕವಾಗಿದೆ. ಯಾವ ಆಸ್ಪತ್ರೆಯನ್ನು ನೋಡಿದರೂ ಸಾಮಾನ್ಯವಾಗಿ ಈಗ ರೋಗಿಗಳಿಂದ ತುಂಬಿ ತುಳುಕುವ ದೃಶ್ಯ ಗೋಚರಿಸುತ್ತಿದೆ. ಚಿಕ್ಕ ಮಕ್ಕಳಿಂದ ತೊಡಗಿ ವಯೋ ವೃದ್ಧರ ತನಕವೂ ಈ ಸಾಮಾನ್ಯ ಕಾಯಿಲೆಗೆ ತುತ್ತಾಗಿ ತೊಂದರೆ ಅನುಭವಿಸುವ ಮಂದಿ ಕಾಣಸಿಗುತ್ತಾರೆ.

ಮುನ್ನೆಚ್ಚರಿಕೆ ವಹಿಸಿ...
ಹವಾ ವೈಪರೀತ್ಯದಿಂದ ಬರಬಹುದಾದ ಖಾಯಿಲೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಉತ್ತಮ.

* ಮುಂಜಾನೆ ಹೊರಗೆ ಹೋಗುವ ಸಂದರ್ಭದಲ್ಲಿ ಕಿವಿಗಳಿಗೆ ಹತ್ತಿಯನ್ನಿಟ್ಟುಕೊಳ್ಳುವುದು ಉತ್ತಮ
* ದ್ವಿಚಕ್ರ ವಾಹನದಲ್ಲಿ ತೆರಳುವ ಸಂದರ್ಭ ಹೆಲ್ಮೆಟ್ ಧರಿಸುವುದು ಉತ್ತಮ
* ದ್ವಿಚಕ್ರ ವಾಹನದ ಹಿಂಬದಿ ಸವಾರರು ಸ್ಕಾರ್ಫ್ ಧರಿಸುವುದು ಒಳ್ಳೆಯದು.
* ಡಸ್ಟ್ ಅಲರ್ಜಿಯಿಂದ ಪಾರಾಗಲು ಮಾಸ್ಕ್ ಧರಿಸುವುದು ಉತ್ತಮ.
* ಮಂಜು ಬೀಳುತ್ತಿರುವ ಸಂದರ್ಭದಲ್ಲಾದರೆ ತಲೆಗೆ ರುಮಾಲು ಸುತ್ತುವುದು ಅಥವಾ ಉಲ್ಲನ್ ಕ್ಯಾಪ್ ಧರಿಸುವುದು ಅತೀ ಅಗತ್ಯ.
* ಕಾಲಿನ ಹಿಮ್ಮಡಿ ಒಡೆಯದಂತೆ ರಾತ್ರಿ ಮಲಗುವ ಮುನ್ನ ಕಾಲನ್ನು ಚೆನ್ನಾಗಿ ತೊಳೆದು ಕೊಬ್ಬರಿ ಎಣ್ಣೆ ಹಚ್ಚುವುದು ಲೇಸು.
* ತ್ವಚೆಯ ಸೌಂದರ್ಯ ಕಾಪಾಡಲು ಎಣ್ಣೆ ಹಚ್ಚಬಹುದು.
* ತಣ್ಣನೆಯ ಪದಾರ್ಥದ ಬದಲಾಗಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಉತ್ತಮ.

0 comments:

Post a Comment