ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ದಾವಣಗೆರೆ: ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮವನ್ನು ಐತಿಹಾಸಿಕ ಗ್ರಾಮ ಎಂದೇ ಹೇಳಬಹುದು. ಏಕೆಂದರೆ ಇಲ್ಲಿ ನಮಗೆ ಅನೇಕ ಐತಿಹಾಸಿಕ ಸ್ಮಾರಕಗಳು ಕಾಣ ಸಿಗುತ್ತವೆ. ಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಉಡೇವು (ಕೋಟೆ), ಇಷ್ಟಲ್ಲದೇ ತುಂಬಾ ಹಳೇ ಕಾಲದ ಶಂಕರಲಿಂಗೇಶ್ವರ ಹಾಗೂ ಸಿದ್ದೇಶ್ವರ ದೇವರ ಕಲ್ಲಿನ ದೇವಸ್ಥಾನವಿದೆ.

ಇಷ್ಟೆಲ್ಲಾ ಇತಿಹಾಸಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಇಂತಹ ಅಪೂರ್ವ ಸ್ಮಾರಕಗಳನ್ನು ರಕ್ಷಣೆ ಮಾಡುವವರು ಯಾರು? ಎಂಬ ಪ್ರಶ್ನೆ ಇಂದು ಮೂಡಿದೆ. ಈ ಸ್ಮಾರಕಗಳು ಇಂದು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವುದು ದುರಂತದ ಸಂಗತಿ. ಮೊದಲು ಈ ದೇವಸ್ಥಾನ ಸಂಪೂರ್ಣವಾಗಿ ಮಣ್ಣಿನಲ್ಲಿ ಮುಚ್ಚಿಹೋಗಿತ್ತು. ಕೇವಲ ಒಳಗೆ ಹೋಗಲು ಮಾತ್ರ ಬಾಗಿಲು ತೆರೆದಿತ್ತು. ಕೆಲ ವರ್ಷಗಳ ಹಿಂದೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ಆ ಮಣ್ಣನ್ನೆಲ್ಲಾ ತೆಗೆಸಿ ಸ್ವಚ್ಚ ಮಾಡಿದ್ದಾರೆ. ಹಲವಾರು ಭಕ್ತಾದಿಗಳು ಒಟ್ಟಾಗಿ ದಾಸೋಹ ಕೊಠಡಿ ಸೇರಿದಂತೆ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ದಿ ಪಡಿಸಿದ್ದಾರೆ.

ಇಲ್ಲಿ ಸಮುದಾಯ ಭವನವನ್ನು ನಿರ್ಮಿಸುವ ಉದ್ದೇಶದಿಂದ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ ಅವರ ಸಂಸದರ ಅನುದಾನದಲ್ಲಿ 2 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. 2004 - 05ನೇ ಸಾಲಿನಲ್ಲಿ ಬಿಡುಗಡೆಯಾದ ಈ ಹಣ ದುರುಪಯೋವಾಗುತ್ತಾ ಬಂದಿದೆ. ಇಂದು ಈ ಕಾಮಗಾರಿ ಶೇ.30 ರಷ್ಟು ಆಗಿದೆ ಅಷ್ಟೆ. ಈ ಎಲ್ಲಾ ವಿಷಯಗಳು ಇಂತಹ ಸ್ಮಾರಕಗಳ ಅವನತಿಗೆ ಕಾರಣವಾಗುತ್ತಿವೆ.


ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಈ ದೇವಾಲಯದ ಮಣ್ಣನ್ನು ತೆಗೆಯುವಂತಹ ಸಂದರ್ಭದಲ್ಲಿ ಸಿಕ್ಕ ಅನೇಕ ಶಾಸನಗಳನ್ನು, ವಿಗ್ರಹಗಳನ್ನು ಹೇಗೆ ಬೇಕೋ ಹಾಗೆ ಬಿಸಾಡಲಾಗಿದೆ.


ಈ ವಿಷಯದ ಕುರಿತಾಗಿ ರಾಜ್ಯ ಹಾಗೂ ಕೇಂದ್ರ ಪ್ರಾಚ್ಯವಸ್ತು ಇಲಾಖೆಯನ್ನು ಸಂಪರ್ಕಿಸಲಾಗಿದೆ. ಆದರೆ ಅವರು ಈ ದೇವಾಲಯ, ಉಡೇವು (ಕೋಟೆ) ಹಾಗೂ ಆ ಶಾಸನ ಕಲ್ಲುಗಳು ಯಾವುದೂ ಕೂಡಾ ನಮ್ಮ ಇಲಾಖೆಯ ದಾಖಲೆಗಳಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ಈ ಸ್ಮಾರಕಗಳು ಯಾರ ಸುಪರ್ದಿಗೆ ಬರುತ್ತವೆ? ಇವುಗಳನ್ನು ರಕ್ಷಣೆ ಮಾಡುವವರು ಯಾರು?


ಭಾರತದ ಪ್ರತಿಯೊಂದು ಹಳ್ಳಿಗಳ ಹಿಂದೆ ಒಂದೊಂದು ಇತಿಹಾಸ ಅಡಗಿದೆ. ಸ್ಮಾರಕಗಳಿರುವ ಇಂತಹ ಗ್ರಾಮಗಳನ್ನಾದರೂ ಅಭಿವೃದ್ದಿಪಡಿಸಿ ರಕ್ಷಿಸಬೇಕಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಸ್ಮಾರಕಗಳನ್ನು ಸಂರಕ್ಷಿಸಬೇಕಿದೆ.

- ದರ್ಶನ್ ಬಿ.ಎಂ

2 comments:

Raymond Cardoza said...

Sir namma sarakara ke avara kelsa sari madlike pursoth illa, swalpa pursath idaru lancha mathu hana maduva kelsa dalli busy aguthare mathe e namma ithihasa da murthi, kote, hale bangle kapododhakke avage time eli siguthe ...... adhe murthi, kote bangale badalige vajra vaidurya, bangara idhare bere vishaya ......

Anonymous said...

Ur exactly right sir.. but still they should maintain that.. Archology dept is there right.. avru idella nodle beku...
thanks for ur comment..

DarshaN..

Post a Comment