ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:30 PM

ಶ್ರಮವಿರಲಿ...

Posted by ekanasu

ಯುವಾ
ಇಂದಿನ ದಿನಗಳಲ್ಲಿ ಯಾರಲ್ಲಾದರೂ `ನಾನು ಪತ್ರಿಕೋದ್ಯಮ ವಿದ್ಯಾರ್ಥಿ ' ಎಂದು ಹೇಳಿದರೆ ತಕ್ಷಣಕ್ಕೆ ಅವರ ಬಾಯಿಂದ ಬರುವ ಉತ್ತರವೆಂದರೆ ಮುಂದೆ ನಿನಗೆ ಒಳ್ಳೆ ಫ್ಯೂಚರ್ ಇದೆ ಕಣಯ್ಯ ಎಂಬುದು. ಹೋಗಿ ಮಿಡೀಯಾದಲ್ಲಿ ದೊಡ್ಡ ಹೆಸರು ಮಾಡಬಹುದು ಎಂಬ ಮುಫ್ತ ಸಲಹೆಗಳ ಮಹಾಪೂರವೇ ಹರಿದು ಬರುತ್ತದೆ.

ಆದರೆ ಅವರಿಗೇನು ಗೊತ್ತು ಇಲ್ಲಿ ನಿರಂತರವಾಗಿ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂದು ಮಹಾದಾಸೆಯುಳ್ಳ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಕ್ಲಾಸ್ ಎನ್ನುವುದು ಕನಸಿನ ಕೋಣೆ!.


ನಮ್ಮ ಭಾವಿ ಪತ್ರಕರ್ತರ ಫ್ಯಾಕ್ಟರಿಯಲ್ಲಿ ನಿರಂತರವಾಗಿ ಒಬ್ಬ ವಿದ್ಯಾರ್ಥಿ ನಾನು.. ವಿಶ್ವೇಶ್ವರ್ ಭಟ್ ತರಹ ಒಳ್ಳೆ ಲೇಖನಗಳನ್ನು ಬರೆಯಬೇಕು. ಪ್ರತಾಪ್ ಸಿಂಹ ತರಹ ಎಲ್ಲರಲ್ಲಿ ಸೈ ಎನಿಸಿಕೊಳ್ಳುವಂತಹ ಲೇಖನ ಬರೆದು ಒಳ್ಳೆ ಹೆಸರು ಪಡೆದುಕೊಳ್ಳಬೇಕು. ಹಮೀದ್ ಪಾಳ್ಯ ತರಹ ಪಾಲಿಟೀಶಿಯನ್ಗಳಿಗೆ ನಿಷ್ಟುರವಾಗಿ ಪ್ರಶ್ನೆಗಳನ್ನು ಕೇಳಬೇಕು, ರಂಗನಾಥ್ ತರಹ ಪಬ್ಲಿಕ್ ಒಪಿನಿಯನ್ ಲೀಡರ್ ಆಗಬೇಕು. ರವಿ ಬೆಳಗೆರೆಯಂತೆ ಯುವ ಮನಸ್ಸುಗಳಿಗೆ ಮುದ ನೀಡುವಂತಹ ಹಾಗೂ ಸೀರಿಯಸ್ ಇಶ್ಯೂ ಬಗ್ಗೆ ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಬೇಕು ಎಂಬ ಕಲ್ಪನೆ ಇದೆ. ಅದರೆ ಅದಕ್ಕೆ ತಕ್ಕಂತಹ ಹೋಮ್ ವರ್ಕ್ ಮಾತ್ರ ಶೂನ್ಯ!.

ಇಂದಿನ ದಿನಗಳಲ್ಲಿ ನೂತನ ಮಾಧ್ಯಮಗಳ ಪ್ರಭಾವ ಹೇಗಾಗಿದೆ ಎಂದರೆ ಪ್ರತಿಯೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಟಿ.ವಿ ಮುಂದೆ ಕೂತುಕೊಂಡರೆ ಸಾಕು ನಾನು ಅವರ ತರಹ ಮಾತನಾಡಬಲ್ಲೆ, ನಾನು ಅವರ ತರಹ ಬರೆಯಬಲ್ಲೆ ಎಂಬ ಹುಂಬತನ! ಇದು ಆಗುವ ಮಾತೆ. ನಿರಂತರವಾಗಿ ಅನೇಕ ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಇಂದು ಒಪಿನಿಯನ್ ಲೀಡರ್ಗಳಾಗಿರುವ ದಿಗ್ಗಜರಿಗೆ chase ಮಾಡಲಿಕ್ಕೆ ಸಾಧ್ಯವೇ?. ಆದರೆ ಇಂತಹ ಒಂದು ಹುಂಬತನವನ್ನು ಮಾತ್ರ ಬೆಳೆಸುವಲ್ಲಿ ಸಾಧ್ಯ ಆದರೆ ಜ್ಞಾನವನ್ನಲ್ಲ ಎನ್ನುವುದು ಮಾತ್ರ ನಿಜಾಂಶ.

ಯಾಕೆಂದರೆ ಪತ್ರಿಕೋದ್ಯಮ ಎನ್ನುವುದು ಒಂದು ವಿಶಾಲವಾದ ಅಧ್ಯಯನದ ವಿಷಯ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕಲಿಯಲು ಸಾಧ್ಯವೇ? ಸಾಧ್ಯವೇ ಇಲ್ಲ. ಇದನ್ನು ನಿರಂತರ ಅನುಭವಿಸಬೇಕು. ಅನೇಕ ದಿಗ್ಗಜರ ಸಾಹಿತ್ಯವನ್ನು ಓದಿ ಭಾಷಾ ಪಾಂಡಿತ್ಯವನ್ನು ಪಡೆದು ಸೈ ಎನಿಸಿಕೊಂಡಿರಬೇಕು. ಹಾಗೂ ಕೇವಲ ಕನ್ನಡಕ್ಕೆ ಅಂಟಿಕೊಂಡಿರದೆ ಇಂಗ್ಲಿಷ್ ಅನ್ನು ಕರಗತ ಮಾಡಿಕೊಳ್ಳದೇ ನಾನು ಪತ್ರಿಕೋದ್ಯಮಿಯಾಗುತ್ತೇನೆ ಎಂದು ಹುಚ್ಚು ಕುದುರೆಯ ರೀತಿ ಓಟಕ್ಕೆ ನಿಂತರೆ ಸಾಧ್ಯವೇ?. ಇಲ್ಲ ಸಾಧ್ಯವಿರದ ಮಾತು. ಆದ್ದರಿಂದ ಕೇವಲ ಸಿಲೆಬಸ್ನ್ನೇ ನೆಚ್ಚಿಕೊಂಡು, ಕೋಣೆಯೊಳಗೆ ನೀಡಿದಂತಹ assignment ಗಳನ್ನು netಗಳಲ್ಲಿ ಕದ್ದು ಬರೆದರೆ ಪತ್ರಿಕೋದ್ಯಮಿ ಯಾಗಬಹುದೇ ಎನ್ನುವ ಪ್ರಶ್ನೆಯನ್ನು ಮೊದಲು ತಮ್ಮೊಳಗೆ ತಾನು ಹಾಕಿಕೊಳ್ಳಬೇಕು.
ಆದರೂ ಉತ್ತರಗಳನ್ನು ಪಡೆಯಲಿಕ್ಕಾಗಲಿಲ್ಲ ಎಂದರೆ ಮೊದಲು ಅನೇಕ ಪತ್ರಿಕೋದ್ಯಮ ದಿಗ್ಗಜರ ಇತಿಹಾಸ ತಿಳಿದುಕೊಳ್ಳಿ ಅವರು ಜೀವನದಲ್ಲಿ ಕಂಡುಕೊಂಡಂತಹ ಏರಿಳಿತಗಳನ್ನು ಓದಿನಲ್ಲಿಯೇ ಅನುಭವಿಸುವದಕ್ಕೆ ರೂಢಿ ಮಾಡಿಕೊಳ್ಳಿ. ಹಾಗೂ ಅತಿಹೆಚ್ಚು ಸಾಹಿತ್ಯವನ್ನು ಓದಿ. ಆಗಲಾದರೂ ಪತ್ರಿಕೋದ್ಯಮದಲ್ಲಿ ನಾನು survive ಆಗಬಲ್ಲೆನಾ? ಎನ್ನುವ ಪ್ರಶ್ನೆ ಹಾಕಿಕೊಂಡು ಮುಂದಿನ ಹೆಜ್ಜೆ ಇಡಬೇಕೆನ್ನುವುದು ಉದ್ದೇಶ .
ಹೈಮದ್ ಹುಸೇನ್ ದಂಡ್.
ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗ
ಮಾನಸಗಂಗೋತ್ರಿ, ಮೈಸೂರು.

3 comments:

Ranga said...

husen ಅವರೇ ನಿಮ್ಮ ಮಾತು ೧೦೦ ರಷ್ಟು ನಿಜ ಪತ್ರಿಕೋದ್ಯಮವನ್ನು ಕೇವಲ ಕ್ಲಾಸ್ ರೂಂ ನಲ್ಲಿ ಕಳೆಯಲು ಸಾಧ್ಯವಿಲ್ಲ....

ashok said...

your opinion super friend

ashok said...

your opinion super friend

Post a Comment