ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ

ಗ್ರಾಮೀಣ ಹಾಗೂ ಕೃಷಿ ಪತ್ರಿಕೋದ್ಯಮದಲ್ಲಿ ಬಹಳಷ್ಟು ಹೆಸರು ಮಾಡಿದವರು ಶಿವಾನಂದ ಕಳವೆ. ಗ್ರಾಮೀಣ ಜನರ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯಲ್ಲಿ ಕೃಷಿ ಮಾಡುತ್ತಾ, ಪತ್ರಿಕೆಗಳಿಗೆ ಬರೆಯುತ್ತಾ ಸಮಾಜಕ್ಕೆ ಒಂದಷ್ಟು ಸೇವೆ ಸಲ್ಲಿಸುತ್ತಿರುವ ಇವರು ಉತ್ತರ ಕನ್ನಡ ಜಿಲ್ಲೆಯ ವನವಾಸಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಇಟ್ಟುಕೊಂಡು ಬರೆದಿರುವಂತಹ ಪುಸ್ತಕವೇ ಒಡಲ ನೋವಿನ ತೊಟ್ಟಿಲ ಹಾಡು.ಅತೀ ಚಿಕ್ಕ ಪ್ರಾಯದಲ್ಲಿ ಮದುವೆ. ಮನೆತುಂಬ ಮಕ್ಕಳಿರುವ ಈ ಮಹಿಳೆಯರಿಗೆ ಕಾಡೇ ಸರ್ವಸ್ವ. ಶಾಲೆಯ ಮುಖ ಕಾಣದ ಇಲ್ಲಿನ ಮಕ್ಕಳನ್ನು ನೋಡಿದರೆ ಮನಸ್ಸಿಗೆ ನೋವುಂಟಾಗುತ್ತದೆ. ರಸ್ತೆಯೇ ಇಲ್ಲದ ಊರುಗಳ ತುಂಬಿದ ಬಸುರಿಯರು ಟಾರ್ ರಸ್ತೆಗೆ ನಡೆದು ಬರುವಾದ ಅಸುನೀಗುತ್ತಿರುವುದರ ಬಗ್ಗೆ ಈ ಪುಸ್ತಕ ವಿವರಿಸುತ್ತದೆ. ಬಾಣಂತಿ ಸನ್ನಿ ಕಾಯಿಲೆಗೆ ನೇಣು ಚಿಕಿತ್ಸೆ, ಅಭಿವೃದ್ದಿ ಹೆಸರಿನಲ್ಲಿ ಅನೇಕ ಕೋಟಿ ರೂಪಾಯಿಗಳನ್ನು ಮೈಮೇಲೆ ಹಾಕಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಬಚ್ಚಿಟ್ಟ ಸತ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಪುಸ್ತಕದ ಮತ್ತೊಂದು ವಿಶೇಷ ಎಂದರೆ, ಅನೇಕ ಕಾಯಿಲೆಗಳಿಂದ ಬಳಲುತ್ತಿರುವ 30 ಬುಡಕಟ್ಟು ಮಹಿಳೆಯರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಹೀಗೆ ಅನೇಕ ಸಮಸ್ಯೆಗಳತ್ತ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ಬೆಂಗಳೂರಿನ ಮಿತ್ರ ಮಾಧ್ಯಮ ಪ್ರಕಾಶನದವರು ಪ್ರಕಟಿಸಿರುವ ಈ ಪುಸ್ತಕ 36+2 ಪುಟಗಳನ್ನು ಹೊಂದಿದೆ. ಈ ಬಡ ಗ್ರಾಮೀಣ ಬದುಕಿನ ನೈಜ ಛಾಯ ಚಿತ್ರಗಳನ್ನು ಹೊಂದಿರುವ ಈ ಪುಸ್ತಕದ ಬೆಲೆ 24 ರೂಪಾಯಿಗಳು.

ದರ್ಶನ್ ಬಿ.ಎಎಂ.

0 comments:

Post a Comment