ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:08 PM

ಬರೆಯಲೇಬೇಕು...

Posted by ekanasu

ಸಾಹಿತ್ಯ

ಬರೆಯಬೇಕು ನಾ ಕುಳಿತೆ ಕವನ
ನನಗೆ ಹೊಳೆಯಲಿಲ್ಲ ಯಾವುದೇ ವಚನ
ಪೆನ್ನು ಮುಂದೆ ಸಾಗಲಿಲ್ಲ
ಚಿತ್ತ-ಬಿತ್ತಿಯೂ ಸಂತೃಪ್ತಿಯಿಂದಿರಲಿಲ್ಲ

ಯಾರದೋ ಒತ್ತಾಯಕ್ಕೆ ಬರೆಯುತ್ತಿಲ್ಲ
ನಾ ನನ್ನ ಮನದ ಭಾವವನ್ನು
ವ್ಯಕ್ತಪಡಿಸಬೇಕೆಂದು ಗೀಚುತ್ತಿರುವೆ
ಯಾರಿಗೂ ಸಂತೋಷಪಡಿಸಬೇಕೆಂಬ

ಮಹದಾಸೆಯೂ ಎನ್ನಲಿಲ್ಲ
ಅಥವಾ ಪ್ರಕಟವಾಗುವುದೆಂಬ
ಭ್ರಮೆಯಿಂದಲೂ ಅಲ್ಲ..
ಆದರೂ ಬರೆಯಲೇಬೇಕು...
ಬರಹದ ಹುಚ್ಚುಹೊಳೆಯಲ್ಲಿ...

- ಮಲ್ಲಿಕಾ ಭಟ್ ಪರಪ್ಪಾಡಿ.

0 comments:

Post a Comment