ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:09 PM

ದ ಡ್ರೀಮ್...

Posted by ekanasu

ಮಹಿಳಾ ದಿನದ ವಿಶೇಷ ಲೇಖನ
ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕನಸು ಯಾವಾಗಲಾದರೊಮ್ಮೆ ಬದ್ದಿರಲೇ ಬಹುದಲ್ಲವೇ... ಕನಸು ಬೀಳುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ...ಎಂಬ ಪ್ರಶ್ನೆ ಎಲ್ಲರ ಮನಸ್ಸನ್ನು ಕಾಡುತ್ತಿರಬಹುದು. ನಾವು ಮನಃಶಾಸ್ತ್ರದ ಮೂಲಕ ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಸೋಣ. ಮನಃಶಾಸ್ತ್ರದ ಖ್ಯಾತ ಸೈಕೋ ಅನಾಲಿಸ್ಟ್ ಓರ್ವರು ಈ ಮಾತನ್ನು ಹೇಳಿದ್ದಾರೆ." ಡ್ರೀಮ್ಸ್ ಆರ್ ದಿ ರಾಯಲ್ ರೋಡ್ ಟು ಅನ್ ಕಾನ್ಶಿಯಸ್". ನಮ್ಮ ಜೀವನದಲ್ಲಿ ಎಷ್ಟೋ ಆಸೆ ಆಕಾಂಕ್ಷೆಗಲು ಇದ್ದೇ ಇರುತ್ತವೆ. ಎಲ್ಲಾ ಆಸೆ ನಿಜವಾಗುವುದಿಲ್ಲ. ಹಲವು ಬಾರಿ ಅವು ಆಸೆಯಾಗಿಯೆ ಉಳಿದುಬಿಡುತ್ತವೆ. ಇದೆಲ್ಲಾ ನಮ್ಮ ಅನ್ ಕಾನ್ಶಿಯಸ್ ಮೈಂಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿರುತ್ತದೆ.ಹೀಗೆ ನಮ್ಮ ಅನ್ ಕಾನ್ಶಿಯಸ್ ಮೈಂಡ್ ನಲ್ಲಿ ಸಂಗ್ರಹಗೊಂಡ ಆಸೆ, ಭಯ, ಮೊದಲಾದವುಗಳು ನಿದ್ದೆಯ ಸಂದರ್ಭದಲ್ಲಿ ಕನಸಿನ ರೂಪದಲ್ಲಿ ಹೊರಹೊಮ್ಮುತ್ತದೆ. ಅದು ಕೆಲವೊಮ್ಮೆ ಉತ್ತಮ ಕನಸಾಗಿರಬಹುದು.ಅಥವಾ ಕೆಟ್ಟ ಕನಸಾಗಿ ಕಾಡಿರಲೂ ಬಹುದು. ಕನಸು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ಮನುಷ್ಯನೇ ತನ್ನ ಅನುಭವದ ಮೂಲಕ ನಿರ್ಧರಿಸುತ್ತಾನೆ.


ಕನಸು ಎಂಬುದು ಮನುಷ್ಯನ "REM" ನಿದ್ದೆಯಲ್ಲಿ ಆಗುವ ಕ್ರಿಯೆ. "REM" ಎಂದರೆ "Rapid Eye Movement" . ಈ ಮಟ್ಟದಲ್ಲಿ ಮನುಷ್ಯನ ಕಣ್ಣ ಗುಡ್ಡೆಗಳು ಚಲನೆಯಿಂದ ಕೂಡಿರುತ್ತದೆ. ಆದರೆ ಅದು ಕಣ್ಣು ಮುಚ್ಚಿಯೇ ಇರುತ್ತದೆ. ಆದ್ದರಿಂದ ಮನುಷ್ಯನಿಗೆ ಸ್ವಲ್ಪ ಮಟ್ಟಿಗೆ ಕನಸು ನೆನಪಿಡಲು ಸಾಧ್ಯವಾಗುತ್ತದೆ. ನೆನಪಿಡುವಾಗ ಎಲ್ಲಾ ಅಂಶಗಳು ನೆನಪಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಕೆಲವು ಅಂಶಗಳು ಮಾತ್ರ ಮರುದಿನ ನೆನಪಿಗೆ ಬರುತ್ತದೆ. ಆದ್ದರಿಂದ ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆ ಆಕಾಂಶೆಗಳು , ಭಯಹೊರಹಾಕದಿದ್ದರೆ ಅದು ನಮ್ಮ "ಕನಸಿನ" ಮೂಲಕ ಖಂಡಿತವಾಗಿಯೂ ಹೊರಬರುತ್ತದೆ.
ಇವೆಲ್ಲವನ್ನು ನೋಡುವಾಗ ನಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಕಾಡಬಹುದು. ಅದು ಏನೆಂದರೆ ನೈಜ ಜೀವನಕ್ಕೆ ಮತ್ತು ಕನಸಿಗೆ ಸಂಬಂಧವಿದೆಯಾ?ಒಂದು ಸಣ್ಣ ಉದಾಹರಣೆಯೊಂದಿಗೆ ಇದಕ್ಕೆ ಉತ್ತರ ಹುಡುಕುವ ಪ್ರಯತ್ನಕ್ಕೆ ಕೈಯಿಕ್ಕೋಣ...

ನನಗೆ ಕಾರ್ ಡ್ರೈವಿಂಗ್ ಕಲಿಯಲು ಬಹಳ ಆಸೆಯಿತ್ತು. ಆದರೆ ತುಂಬಾ ಸಲ ಆ ಆಸೆ ಆಸೆಯಾಗಿಯೇ ಉಳಿಯುತ್ತಿತ್ತು. ಆದರೆ ಆ ಆಸೆ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಹೀಗಿದ್ದಾಗ ನನಗೆ ಆಗಾಗ ನನ್ನ ಕನಸಿನಲ್ಲಿ ನಾನೇ ಡ್ರೈವಿಂಗ್ ಮಾಡುವ ರೀತಿ ಗೋಚರವಾಗುತ್ತಿತ್ತು.ನಾನು ನೈಜ ಜೀವನದಲ್ಲಿ ಮಾಡಲಾಗದ್ದನ್ನು ಕನಸಿನ ಮೂಲಕ ಸಾಕಾರಪಡಿಸುವಲ್ಲಿ ಯಶಸ್ವಿಯಾಗಿದ್ದೆ!ಇದು ನನ್ನ ಸ್ವಂತ ಅನುಭವ.


ನಾವು ಎಷ್ಟು ನಮ್ಮ ಅನ್ ಕಾನ್ಶಿಯಸ್ ಮೈಂಡ್ ನಲ್ಲಿ ಅಥವಾ ಅರಿವಿಲ್ಲದ ಮನಸ್ಸಿನಲ್ಲಿ ವಿಷಯವನ್ನು ಸಂಗ್ರಹಿಸುತ್ತೇವೆಯೋ ಅಷ್ಟೂ ವಿಷಯಗಳು ನಮ್ಮ ಕನಸಿನ ಮೂಲಕ ವ್ಯಕ್ತವಾಗುತ್ತವೆ. ಇದರಿಂದ ನಮ್ಮ ನೈಜ ಜೀನವಕ್ಕೆ ಮತ್ತು ಕನಸಿಗೆ ಸಂಬಂಧವಿದೆ ಎಂಬುದು ತಿಳಿಯುತ್ತದೆ.
ಕೆಲವೊಂದು ಸಲ ಕನಸು ನಮಗೆ ಉತ್ತೇಜನ ಕೊಡುತ್ತದೆ. ಕೆಲವೊಮ್ಮೆ ಜನರು ಕನಸನ್ನು ಮೂಢ ನಂಬಿಕೆಯ ಜೊತೆ ತಾಳೆಹಾಕುತ್ತಾರೆ.ಇದರಿಂದ ಅವರ ಜೀವನಕ್ಕೆ ಪರಿಣಾಮವಾಗುವ ಸಂದರ್ಭ ಹೆಚ್ಚು.ಎಷ್ಟೋ ಬಾರಿ ತಪ್ಪು ಕಲ್ಪನೆಗೆ ಒಳಗಾಗಿ ತೊಂದರೆಗೆಸಿಲುಕಿಹಾಕುವ ಸಂದರ್ಭಗಳೂ ಇಲ್ಲದ್ದಿಲ್ಲ.

ನಿಜವಾಗಿಯೂ ಇವೆಲ್ಲಾ ಆಗುವುದು ಒಂದೇ ಒಂದು ಕಾರಣದಿಂದ . ಅದೇ ನಮ್ಮ ಅರಿವಿಲ್ಲದ ಮನಸ್ಸಿನಲ್ಲಿ ಎಷ್ಟು ವಿಷಯ ತುಂಬಿರುತ್ತವೆಯೋ ಅವೆಲ್ಲಾ ಒಂದಲ್ಲಾ ಒಂದು ದಿನ ಕನಸಿನ ರೂಪದಲ್ಲಿ ಗೋಚರಿಸಲ್ಪಡುತ್ತದೆ.

- ನಿಷಾ ಚೌಟ.
ಮನಃಶಾಸ್ತ್ರ ಉಪನ್ಯಾಸಕಿ.

2 comments:

nishwithchowta said...

excellent job..

shivu said...

lekhan chenngide................

Post a Comment