ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂದ ಪಟ್ಟ ಕಾಯಿಲೆ ತೊಂದರೆಗಳು ಬಹಳಷ್ಟು ಕಂಡು ಬರುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ, ಹೃದಯದಲ್ಲಿ ನೋವು, ಹೃದಯ ಬಡಿತದ ವ್ಯತ್ಯಾಸ, ನಿತ್ರಾಣ, ಬೆವರುವುದು ವಾಂತಿ ಇತ್ಯಾದಿ.


ಹೃದಯದ ಆರೋಗ್ಯಕ್ಕೆ ದಕ್ಕಾಯಾಗುವ ಕಾರಣಗಳು

- ಹೃದಯದ ಸ್ನಾಯುಗಳು ಪಂಪಿನಂತೆ ಕೆಲಸಮಾಡಿ, ಸದಾಕಾಲವು ಶರೀರದ ಎಲ್ಲಾ ಭಾಗಗಳಿಗೂ ರಕ್ತವನ್ನು ಸರಬರಾಜು ಮಾಡುತ್ತದೆ. ಇಂತಹ ಹೃದಯ ರಕ್ತನಾಳಗಳು ಮುಚ್ಚಿ ಹೋಗಿ ರಕ್ತ ಸಂಚಾರ ನಿಂತು ಹೋದಲ್ಲಿ ಹೃದಯಾಘಾತವಾಗುತ್ತದೆ.
- ಹೃದಯಕ್ಕೆ ಸಮರ್ಪಕವಾಗಿ ರಕ್ತಸಂಚಾರವಾಗದೆ ಇರುವ ಕಾರಣ
- ದೂಮಾಪಾನ ಹಾಗು ಅತಿಯಾದ ಮದ್ಯಪಾನ
- ಹೆಚ್ಚಿನ ಕೊಲೆಸ್ಟ್ರಲ್
- ಹೆಚ್ಚಿನ ರಕ್ತದೊತ್ತಡ
- ಸ್ಟೂಲಕಾಯ ಶರೀರ
- ಅತಿಯಾದ ಮಧುಮೇಹ
- ಪದೇ ಪದೇ ಒತ್ತಡಕ್ಕೆ ಒಳಗಾಗುವುದು. ಇತ್ಯಾದಿ ಕಾರಣಗಳು.

ಹೃದಯದ ಆರೋಗ್ಯಕ್ಕೆ ಈ ಮೇಲೆ ತಿಳಿಸಿದ ಸಮಸ್ಯೆಗಳ ಹತೋಟಿಗೆ ನಮ್ಮ ಬಾರತೀಯ ಸಂಸ್ಕೃತಿ ಕಲೆಯಾದ ಯೋಗ ಪ್ರಾಣಯಾಮ ಧ್ಯಾನ ಹಾಗು ಸರಳ ವ್ಯಾಯಮಗಳು ಬಹಳಷ್ಟು ಸಹಕಾರಿಯಾಗುತ್ತದೆ. ಆದರೆ ಯೋಗವನ್ನು ಗುರುಮುಖೇನವೇ ಕಲಿತು ಅಭ್ಯಾಸ ನಡೆಸಬೇಕು.


ಯಾರಿಗೆ ಈಗಿನ ಕೆಲಸಗಳನ್ನು ದೈಹಿಕ ವ್ಯಾಯಾಮದ ಕೊರತೆ ಇದೆಯೋ ಅಂಥವರು ದಿನಕ್ಕೆ ಕಡಿಮೆ ಪಕ್ಷ ಕೇವಲ ಅರ್ಧ ತಾಸುಗಳ ಕಾಲ 15ರಿಂದ 20 ಆಸನಗಳನ್ನು ಶಿಸ್ತು ಬದ್ಧವಾಗಿ ಕ್ರಮ ಪ್ರಕಾರವಾಗಿ ಉಸಿರಿನ ಗತಿಯೊಂದಿಗೆ ಮಾಡಿದರೆ ಧಾರಾಳ ಸಾಕು. ಯೋಗಾಭ್ಯಾಸದಿಂದ ಪ್ರತಿಯೊಂದು ಅಂಗವೂ ಪ್ರಚೋದನೆ ಪಡೆದು, ಸ್ಪೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತವೆ.

ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ರಕ್ತ ಶುದ್ಧಿಯಾಗುವುದು, ರಕ್ತದೊತ್ತಡದ ಏರಿಳಿತಗಳು ಹಿಡಿತಕ್ಕೆ ಬರುತ್ತವೆ. ಅಲ್ಲದೆ ರಕ್ತದ ಸಕ್ಕರೆ ಅಗತ್ಯದಷ್ಟೇ ಮಿತಿಯಲ್ಲಿರುತ್ತದೆ. ಖಾಯಿಲೆಗಳನ್ನು ಸುಲಭವಾಗಿ ಮಂಡಿನೋವು, ಕಾಲು ಸೆಳೆತ, ಮಾನಸಿಕ ಒತ್ತಡ ಮತ್ತು ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಯೋಗಾಸನವನ್ನು ಅಭ್ಯಾಸ ಮಾಡುವುದು ಜೀವನ ಸುಖಕ್ಕಾಗಿ.

ಹೃದಯದ ಆರೋಗ್ಯ ರಕ್ಷಣೆಗಾಗಿ ಇರುವ ಯೋಗಗಳ ಸಂಕ್ಷಿಪ್ತ ಪಟ್ಟಿ

ಆರೋಗ್ಯ ಪಾಲನೆಗಾಗಿ ಇರುವ ಪ್ರಾಮುಖ್ಯವಾದ ಆಸನಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಆದರೆ ಯೋಗಾಸನಗಳನ್ನು ಯಾವತ್ತು ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ವಿನ್ಯಾಸಗಳನ್ನು ಬಿಟ್ಟು ಅಭ್ಯಾಸ ಮಾಡಬಾರದು.
- ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ
- ಕುತ್ತಿಗೆ ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)
- ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು
- ತುಸು ವಿಶ್ರಾಂತಿ.

ಅಗತ್ಯದ ಯೋಗಾಸನಗಳ ಸಂಕ್ಷಿಪ್ತ ಪಟ್ಟಿ

ತಾಡಾಸನ, ಅರ್ಧ ಚಕ್ರಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ಬದ್ಧ ಕೋಣಾಸನ, ಪದ್ಮಾಸನ, , ವಜ್ರಾಸನ, ಶಶಾಂಕಾಸನ, ಅರ್ಥಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ಮಕರಾಸನ, ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ.( ಹೃದಯದ ಸಮಸ್ಯೆ ಇದ್ದವರು ದಿನಕ್ಕೆ 3 ಬಾರಿ ಶವಾಸನ ಅಭ್ಯಾಸ ಮಾಡಬೇಕು.

ಯೋಗ ಎಂದರೇನು?
ಪತಂಜಲಿ ಯೋಗ ಸೂತ್ರದಲ್ಲಿ ಯೋಗ : 'ಚಿತ್ತವೃತ್ತಿ ನಿರೋಧಃ' ಎಂದು ತಿಳಿಸುತ್ತದೆ. ಚಿತ್ತದ ವೃತ್ತಿಗಳನ್ನು ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.


ಲೇಖನ: 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment