ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪುಸ್ತಕ ಪರಿಚಯ
ಜಗತ್ತು ಬಹಳ ಸುಂದರ. ಇಂತಹ ಸುಂದರ ಪ್ರಪಂಚವನ್ನು ನೋಡಲು ನೇತ್ರಗಳು ಅತ್ಯಗತ್ಯ. ಅನೇಕ ಭಾವನೆಗಳನ್ನು ನಮ್ಮ ಕಣ್ಣೇ ಹೇಳುತ್ತದೆ.

ಇಂತಹ ಅತ್ಯಮೂಲ್ಯ ಕಣ್ಣುಗಳ ಕುರಿತಾಗಿ ಪ್ರಕಟವಾದ ಕವನ ಸಂಕಲನವೇ ದೃಷ್ಟಿ - ಸೃಷ್ಟಿ. ಶಿರಸಿಯ ಸುಪ್ರಸಿದ್ದ ಕಣ್ಣಿನ ತಜ್ಞ ಡಾ. ಶಿವರಾಮ ಕೆ.ವಿ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಅನೇಕ ಯುವ ಕವಿಗಳು ಹಾಗೂ ಪ್ರಸಿದ್ದ ಚಿಂತಕರುಗಳು ಬರೆದಿರುವ ಕವಿತೆಗಳು ಹಾಗೂ ಚುಟುಕುಗಳಿವೆ. ಈ ಎಲ್ಲ ಕವನಗಳೂ ಕೂಡಾ ದೃಷ್ಟಿ, ಕುರುಡು ಮತ್ತು ನೇತ್ರಗಳಿಗೆ ಸಂಬಂಧಪಟ್ಟದ್ದಾಗಿವೆ.

ನಯನಗಳೇ ನಿಮಗಿದೋ, ಪುನರ್ದೃಷ್ಟಿ, ಜೀವನದೀಪ, ದೀಪದಾರಿಗಳು, ವಿಶ್ವ ದೃಷ್ಟಿ ದಿನಾಚರಣೆ, ಕಣ್ಣೆಂದರೇ, ಹೊರಗಣ್ಣು ಒಳಗಣ್ಣು, ಆಶಾಕಿರಣ, ಕಣ್ಣಿನ ಮಿಡಿತ ಪ್ರಸಿದ್ದಿ ಪಡೆದಿರುವ ಕವನಗಳಾಗಿದೆ. ದೃಷ್ಟಿ, ಬೆಳಕಿನಂಬಾರಿ, ಸಾರ್ಥಕ ಬದುಕು, ಬೆಳಕು, ನಯನಗಾನ, ಸ್ಪಂದನ, ದೃಷ್ಟಿದಾನ, ಭಾವಬಿಂದು ಇನ್ನು ಮುಂತಾದ ಕವನಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

ನಾ ಸತ್ತ ಮೇಲೂ ನನ್ನ ನಯನಗಳು
ಚಿತ್ತದಲೇ ಇರಲಿ
ನಾ ಕೊಟ್ಟ ಕಣ್ಣು ಹಲವರ
ಕಣ್ಣು ತೆರೆಸಲಿ

ಮೇಲಿನ ಚುಟುಕನ್ನು ಪ್ರಶಾಂತ್ ಹೆಗಡೆ ವಂದೂರು ಈ ಪುಸ್ತಕದಲ್ಲಿ ಬರೆದಿದ್ದಾರೆ. ನೇತ್ರದಾನದ ಮಹತ್ವವನ್ನು ಅರ್ಥಪೂರ್ಣವಾಗಿ ಈ ಸಾಲುಗಳು ತಿಳಿಸುತ್ತವೆ. ಸತ್ತಮೇಲಾದರೂ ನೇತ್ರದಾ ಮಾಡಿದರೆ ಅನೇಕರ ಬಾಳು ಬೆಳಗಿದಂತಾಗುತ್ತದೆ. ಒಟ್ಟಾರೆ 13 ಅಕ್ಟೋಬರ್ 2011ರ ವಿಶ್ವ ದಿನವನ್ನು ಮುಖ್ಯವಾಗಿರಿಸಿಕೊಂಡು ಈ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.

ಈ ಪುಸ್ತಕ ಪ್ರಕಟಣೆಗೆ ಶಿರಸಿಯ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ಗಣೇಶ ನೇತ್ರಾಲಯ ಹಾಗೂ ಮಹಾಲಕ್ಷ್ಮೀ ಮೆಮೊರಿಯಲ್ ಆಸ್ಪತ್ರೆಯ ಸಹಾಯ ಮಾಡಿವೆ. 56+4 ಪುಟಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಯಾವುದೇ ಬೆಲೆಯಿಲ್ಲ. ಆಸಕ್ತ ಕವಿಗಳಿಗೆ ಹಾಗೂ ಕಣ್ಣುಗಳ ಮೇಲೆ ಕಾಳಜಿಯುಳ್ಳವರಿಗೆ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ.

- ದರ್ಶನ್ ಬಿ.ಎಂ

2 comments:

Ranga said...

ನೀವು ಸತ್ತ ಮೇಲು ಸುಂದರ ಹುಡುಗ / ಹುಡಗಿರನ್ನ ನೋಡಬೇಕಾದರೆ ನಿಮ್ಮ ಕಣ್ಣುಗಳನ್ನು ದಾನಮಾಡಿ....
ಕಣ್ಣುಗಳ ಕಾಳಜಿ ಮತ್ತು ದಾನದ ಅರಿವು ಮೂಡಿಸುವ "ದೃಷ್ಟಿ - ಸೃಷ್ಟಿ" ಪುಸ್ತಕ ಚೆನ್ನಾಗಿದೆ.

Anonymous said...

ha ha ha ha ha ha..........

Post a Comment