ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವಿಟ್ಲ ದೇಗುಲದ ಜೀರ್ಣೋದ್ಧಾರ ಕಾರ್ಯದ ಪ್ರಗತಿ ವೀಕ್ಷಣೆ

ವಿಟ್ಲ: ಒಂಭತ್ತು ಕೋಟಿ ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳತ್ತಿರುವ ವಿಟ್ಲ ಸೀಮೆಯ ಇತಿಹಾಸ ಪ್ರಸಿದ್ಧ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯದ ಪ್ರಗತಿಯನ್ನು ವೀಕ್ಷಿಸಿದರು.


ದೇವಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಲ್. ಎನ್.ಕೂಡೂರು ದಂಪತಿ ಶ್ರೀಗಳವರನ್ನು ಹಾರ ಹಾಕಿ ಸ್ವಾಗತಿಸಿದರು. ಬಳಿಕ ಅವರು ಗರ್ಭಗುಡಿಯ ಒಳಗಿನ ಮತ್ತು ಹೊರಗಿನ ರಚನೆಯನ್ನು ವೀಕ್ಷಿಸಿ, ಗಣಪತಿ ಗುಡಿಯ ನಿರ್ಮಾಣ ಪ್ರಗತಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.


ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅನನ್ಯವಾಗಿದೆ. ಈ ಅಭೂತಪೂರ್ವ ಯೋಗ ಈ ತಲೆಮಾರಿಗೆ ಮತ್ತೆ ಸಿಗಲಾರದು. ಹಿಂದಿನ ತಲೆಮಾರಿಗೂ ಮುಂದಿನ ಪೀಳಗೆಗೂ ಸಿಗದ ಈ ಮಹತ್ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬನೂ ಭಾಗ್ಯಶಾಲಿ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಶ್ಲೇಷಿಸಿದರು.


ಈ ಹಿಂದೆಯೇ ವಿಟ್ಲ ಅರಮನೆ, ದೇವಸ್ಥಾನ ಮತ್ತು ಶ್ರೀಮಠಕ್ಕೂ ಸಮಾಗಮವಾಗಿದೆ. ಆದರೆ ಇಂದು ಕಾಣುತ್ತಿರುವುದು ಹಿಂದಿನ ದೇಗುಲವಲ್ಲ. ಸಂಪೂರ್ಣ ಬದಲಾಗಿದೆ. ನಿಜ ಅರ್ಥದ ಸೀಮೆ ದೇಗುಲದ ವ್ಯೆಭವ ಮೇಳೈಸುತ್ತಿದೆ. ಕಾಮಗಾರಿಯನ್ನು ಸಿಮೆಂಟ್ ಬಳಸದೇ ಸ್ಥಳೀಯರೇ ನಿರ್ಮಿಸಿದ ಸಾಧನೆ ಶ್ಲಾಘನೀಯವಾದುದು.ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಗುಲ ನಿರ್ಮಾಣವಾಗಿದೆ. ಎಲ್ಲರ ಮನಸ್ಸಲ್ಲೂ ಬ್ರಹ್ಮಕಲಶೋತ್ಸವ ಶೀಘ್ರವಾಗಿ ನಡೆಯಲಿ ಎಂಬ ಆತುರವಿದೆ. ಅದಕ್ಕೆ ಭಗವಂತನ ಅಪ್ಪಣೆಯಿದ್ದಾಗ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಎಲ್.ಎನ್.ಕೂಡೂರು ಮತ್ತು ಸಿರಿ ಎಲ್.ಎನ್.ಕೂಡೂರು ಅವರು ಶ್ರೀಗಳನ್ನು ಬರಮಾಡಿಕೊಂಡರು. ಮಂಗಳೂರು ಹವ್ಯಕ ಮಂಡಲ ಕಾರ್ಯದರ್ಶಿ ಸೇರಾಜೆ ಸುಬ್ರಮಣ್ಯ ಭಟ್, ವಿಟ್ಲ ಗ್ರಾ.ಪಂ.ಅದ್ಯಕ್ಷ ರಮನಾಥ ವಿಟ್ಲ, ಸೀಮೆ ಗುರಿಕಾರ ನೆಡ್ಲೆ ಈಶ್ವರ ಭಟ್, ಸದಾಶಿವ ಆಚಾರ್ಯ ಕೈಂತಿಲ, ಎಂ. ನಿತ್ಯಾನಂದ ನಾಯಕ್ , ಉದ್ಯಮಿ ರಾಧಾಕೃಷ್ಣ ನಾಯಕ್, ದಯಾನಂದ ಆಳ್ವ ಕಡಂಬು, ವಿಠಲ ವಿದ್ಯಾ ಸಂಘದ ಉಪಧ್ಯಕ್ಷ ಕ.ಶಿ.ವಿಶ್ವನಾಥ, ನ್ಯಾಯವಾದಿ ನಟೇಶ್ ವಿಟ್ಲ ಹವ್ಯಕ ವಲಯದ ಗುರಿಕ್ಕಾರರು, ಮಹಿಳಾ ವಿಭಾಗದ ಪ್ರತಿನಿಧಿಗಳು ಭಕ್ತಾದಿಗಳು ಮಹಿಳೆಯರು ಉಪಸ್ಥಿತರಿದ್ದರು.

ವರದಿ: ಜ್ಯೋತಿ ಪ್ರಕಾಶ್ ಪುಣಚ

0 comments:

Post a Comment