ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಉಡುಪಿ: ಸಿರ್ಸಿ ಸಮೀಪದಲ್ಲಿರುವ ಸೋಂದಾ ಕ್ಷೇತ್ರದಲ್ಲಿ ಶ್ರೀ ರಮಾತ್ರಿವಿಕ್ರಮ ದೇವರ ಮಹಾರಥೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಪ್ರಾರಂಭಗೊಂಡಿದೆ. ಮಾರ್ಚ್ 2ರಂದು ಮೃತ್ತಿಕಾಹರಣ ಪೂರ್ವಕ ಅಂಕುರಾರೋಹಣದೊಂದಿಗೆ ಪ್ರಾರಂಭಗೊಡಿದೆ.3 ರಿಂದ 9 ರ ತನಕ ಏಳು ದಿನಗಳ ಉತ್ಸವಗಳು ನಡೆಯಲಿವೆ.ಮಾ.7 ರಂದು ಶ್ರೀ ಭೂತರಾಜರ ದಂಡೆಬಲಿ ಪೂಜೆ,8 ರಂದು ಬ್ರಹ್ಮರಥೋತ್ಸವ ಹಾಗೂ9ರಂದು ಶ್ರೀ ರಮಾತ್ರಿವಿಕ್ರಮ ದೇವರ ಕಲ್ಯಾಣೋತ್ಸವ, ಅವಭೃತಸ್ನಾನಗಳು ನಡೆಯಲಿವೆ.11ರಂದು ಶ್ರೀ ವಾದಿರಾಜರ ಆರಾಅಧನಾ ಮಹೋತ್ಸವವು ನಡೆಯಲಿದೆ. ಅಂದು ಶ್ರೀ ವಾದಿರಾಜರ ಕಾವಿಶಾಟಿ, ಮುತ್ತಿನ ಕಿರೀಟ ಛತ್ರ ಚಾಮರಗಳನ್ನು ಭಕ್ತ ಜನತೆಯ ವೀಕ್ಷಣೆಗೆ ಇಡಲಾಗುವುದು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಭಾಗವಹಿಸಲಿದ್ದಾರೆ.

0 comments:

Post a Comment