ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಾ.31ರಂದು ಹರಿನಿಲಯ ಮನೆಯಂಗಳದಲ್ಲಿ ನಾವೆಲ್ಲಾ ಭೇಟಿಯಾಗೋಣ...

ಮೂಡಬಿದಿರೆ: "ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ " ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವನ್ನು ವೇಣೂರು ವಲಯ ವ್ಯಾಪ್ತಿಯ ಮನೆ ಮನೆಗಳಲ್ಲಿ ಮಾಡುವ ಮೂಲಕ ಸಂಚಲನ ಮೂಡಿಸಿದ , ತನ್ಮೂಲಕ ಸಾಹಿತ್ಯಾಸಕ್ತಿಯನ್ನು ಮನೆ ಮನಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾದ ಆಸಕ್ತರ ವೇದಿಕೆ ಆಶ್ರಯದ ವರ್ಷ ಕ್ರಿಯೇಷನ್ಸ್ ಇದೀಗ ಮನೆಯಂಗಳದಲ್ಲಿ ಎರಡು ಕಾರ್ಯಕ್ರಮ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.


ಆರ್ಥಿಕ ವರ್ಷಾಂತ್ಯವಾದ ಮಾರ್ಚ್ 31 ಶನಿವಾರದಂದು ಬೆಳ್ತಂಗಡಿ ತಾಲೂಕಿನ ಪೆರಿಂಜೆಯ ಹರಿನಿಲಯ ಮನೆಯಂಗಳದಲ್ಲಿ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯಲೋಕಕ್ಕೆ ತನ್ನ ಸಾಹಿತ್ಯ ಕೃಷಿಯ ಮೂಲಕ ಕೊಡುಗೆ ನೀಡಿದ ಎಲೆಮರೆಯ ಸಾಧಕಿ ಸುಮತಿ ಕೆ.ಸಿ.ಭಟ್ ಆದೂರು ಅವರ ಚೊಚ್ಚಲ ಕೃತಿ "ತಂಬೂರಿ" ಬಹುಮಾನಿತ ಕಥೆಗಳ ಸಂಕಲನ ಬಿಡುಗಡೆ ಹಾಗೂ ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಈ ಕನಸು.ಕಾಂ ಇದರ ಚೊಚ್ಚಲ ಪ್ರಶಸ್ತಿ " ಈ ಕನಸು.ಕಾಂ ವಾರ್ಷಿಕ ವಿದ್ಯಾರ್ಥಿ ಪ್ರಶಸ್ತಿ" ಪ್ರದಾನ .

ಈ ಎರಡು ಕಾರ್ಯಕ್ರಮಗಳು ಮನೆಯಂಗಳದಲ್ಲಿ ನಡೆಯಲಿದೆ ಎಂದು ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಸಾಹಿತಿ ವೈದೇಹಿ ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ. ತಂಬೂರಿ ಕೃತಿಯ ಕುರಿತಾಗಿ ಸಾಹಿತಿ ಅರವಿಂದ ಚೊಕ್ಕಾಡಿ, ಡಾ.ಧನಂಜಯ ಕುಂಬ್ಳೆ, ಉಷಾ ಬಿ.ಶೆಟ್ಟಿ ಅಭಿಪ್ರಾಯ ಮಂಡಿಸಲಿದ್ದಾರೆ.
ಸರಿಯಾದ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಎರಡೂವರೆ ಗಂಟೆಗಳ ಅವಧಿಯ ಕಾರ್ಯಕ್ರಮ ಇದಾಗಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

1 comments:

Sham Kotoor said...

Sumathi K.C bhat avarige Shubhashayagalu,

Haagu ekanasu.com na sadhanege metchugegalu

Post a Comment