ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಳ್ತಂಗಡಿ:ಲೋಕ ಕಲ್ಯಾಣಾರ್ಥ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕೈಗೊಳ್ಳುತ್ತಿರುವ ವಿವಿಧ ಸೇವೆಗೆ ಇಡೀ ದೇಶವೇ ತಲೆಬಾಗಬೇಕು.


ಗೋ ಸಂರಕ್ಷಣೆ, ಗೋ ತಳಿ ಅಭಿವೃದ್ಧಿ, ಗವ್ಯ ಉತ್ಪನ್ನಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಇಡೀ ದೇಶವೇ ಎಚ್ಚೆತ್ತುಕೊಳ್ಳುವಂತೆ ಕ್ರಾಂತಿ ಮಾಡಿದ ಶ್ರೀ ಗುರುಗಳ ಮಹತ್ಕಾರ್ಯ ಒಂದು ಮಾದರಿ ಎಂದು ಕನ್ನಡ ಚಿತ್ರರಂಗದ ಗೀತ ಸಾಹಿತಿ ಕೆ.ಕಲ್ಯಾಣ್ ಹೇಳಿದರು.ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನಕ್ಕೆ ಆಗಮಿಸಿ ಶ್ರೀ ಗುರುಗಳನ್ನು ಭೇಟಿಮಾಡಿದ ಕಲ್ಯಾಣ್ "ಈ ಕನಸು.ಕಾಂ"ನೊಂದಿಗೆ ಅಭಿಪ್ರಾಯ ಹಂಚಿಕೊಂಡರು.ಗವ್ಯ ಉತ್ಪನ್ನಗಳ ಮೂಲಕ ಸುಖೀ ಸಮಾಜ ನಿರ್ಮಾಣ, ಆರೋಗ್ಯ ಭಾಗ್ಯದ ಯೋಜನೆಗಳನ್ನು ಪರಿಚಯಿಸುವ ಮೂಲಕ ಆಯುರ್ವೇದ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಹೊಸತೊಂದು ಆಯಾಮವನ್ನು ಪರಿಚಯಿಸಿದ ಕೀರ್ತಿ ಶ್ರೀ ಗುರುಗಳದ್ದು ಎಂದು ಕಲ್ಯಾಣ್ ಅಭಿಪ್ರಾಯಿಸಿದರು.ಶ್ರೀ ಗುರುಗಳನ್ನು ಭೇಟಿಮಾಡುವ ಭಾಗ್ಯ ನನಗೆ ಒದಗಿಬಂದದ್ದು ನಮ್ಮ ಪಾಲಿನ ಅದೃಷ್ಟ ಎಂದ ಕಲ್ಯಾಣ್ ಈ ದಿನ ಸುದಿನ.ಎಂದೆಂದಿಗೂ ಮರೆಯಲಾರದ ಮರೆಯಬಾರದ ದಿನ ಎಂದರು.
ಈ ಸಂದರ್ಭದಲ್ಲಿ ಹನುಮಾಜೆ ಬಾಲಕೃಷ್ಣ ಭಟ್ ಜೊತೆಗಿದ್ದರು.

0 comments:

Post a Comment