ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:35 PM

ಚುನಾವಣೆ ಜರೂರು...!!!

Posted by ekanasu

ವಿಶೇಷ ವರದಿ

ಕಾರ್ಕಳ: ಚಿಕ್ಕಮಗಳೂರು - ಉಡುಪಿ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದೇ ವ್ಯಾಪ್ತಿಗೊಳಪಡುವ ಪ್ರದೇಶದ ರಸ್ತೆ ಹದಗೆಟ್ಟು ಇಷ್ಟು ದಿನಗಳಾದ ನಂತರ ಇದೀಗ ಚುನಾವಣೆಯ ರಣಕಹಳೆ ಮೊಳಗಿದ ತಕ್ಷಣ ರಸ್ತೆ ರಿಪೇರಿ ಕಾರ್ಯ ಭರದಿಂದ ಸಾಗುತ್ತಿದೆ.

ಹೇಗಿದೆ ನೋಡಿ ಜನರ ಮನ ಗೆಲ್ಲುವ ಪರಿ!ಜನತೆ ಹಿಡಿ ಶಾಪ ಹಾಕುತ್ತಾ ಸಾಗುವಂತಾದ ರಸ್ತೆಯನ್ನು ನೋಡಿಯೂ ನೋಡದಂತಹ ರಾಜಕೀಯ ಪಕ್ಷದ ಪ್ರಮುಖರು, ಇದೀಗ ಚುನಾವಣೆ ಬಂದಾಕ್ಷಣ ಬಾಲಕ್ಕೆ ಬೆಂಕಿ ಹಿಡಿದಂತೆ ಕಾಮಗಾರಿ ಚುರುಕುಗೊಳಿಸಲು ಒತ್ತಡ ಹೇರಿರುವು ವಿಪರ್ಯಾಸ...

ವಿಶೇಷ ವರದಿ - ಚಿತ್ರ: ವಿಜಯ್ ಬೆಳುವಾಯಿ

0 comments:

Post a Comment