ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ
ಹೌದು... ಪ್ರೇಮ ಕವಿ ಇದೀಗ ಹೊಸತೊಂದು ಕಾದಂಬರಿ ಬರವಣಿಗೆಯಲ್ಲಿ ಮಗ್ನ.ಅಂತಿಂಥ ಕಾದಂಬರಿ ಅದಲ್ಲ...ರಾಷ್ಟ್ರೀಯ ವಿಚಾರಧಾರೆಯ ದೃಷ್ಟಿಕೋನವನ್ನೊಳಗೊಂಡ ಮಹೋನ್ನತ ಕಾದಂಬರಿ...ಬರವಣಿಗೆ ಕೆಲಸ ಪ್ರಗತಿಯಲ್ಲಿದೆ.

ದೇಶದ ವ್ಯವಸ್ಥೆಯ ಮತ್ತೊಂದು ಮುಖದ ದರ್ಶನ ಕಾದಂಬರಿಯ ಮೂಲಕ ಅನಾವರಣಗೊಳ್ಳಲಿದೆ...ಜನಸಾಮಾನ್ಯ ಹಾಗೂ ವ್ಯವಸ್ಥೆಯ ನಡುವಣ ಸಂವೇದನೆಯ ಹಂದರವನ್ನೊಳಗೊಂಡಿದೆ....ಕಾದಂಬರಿಯ ಆರಂಭದಿಂದ ಕೊನೆಯ ತನಕವೂ ಅಲ್ಲಲ್ಲಿ ಕಂಡುಬರುವ ಪ್ರೀತಿಯ ವಿಚಾರ... ಒಟ್ಟಿನಲ್ಲಿ ವಿಭಿನ್ನ ನಲೆಗಟ್ಟಿನಲ್ಲಿ ಕಾದಂಬರಿ ಮೂಡಿಬರಲಿದೆ. ಹೆಸರು ಇನ್ನೂ ನಿಗಧಿಯಾಗಿಲ್ಲ...ಇದು "ಪ್ರೇಮಕವಿ" ಖ್ಯಾತಿಯ ಕೆ.ಕಲ್ಯಾಣ್ ಅವರ ಜೊತೆಗಿನ ಇಪ್ಪತ್ತು ನಿಮಿಷಗಳ ಮಾತಿನ ಪ್ರಮುಖ ಅಂಶ.

ಕನ್ನಡ ಚಿತ್ರರಂಗದ ಗೀತ ಸಾಹಿತಿ ಕೆ.ಕಲ್ಯಾಣ್ ಒಂದು ಸಾವಿರ ಸಿನೆಮಾ ಹಾಡುಗಳನ್ನೊಳಗೊಂಡ ಪುಸ್ತಕವೊಂದನ್ನು ಹೊರತರುವ ಕೆಲಸದಲ್ಲಿದ್ದಾರೆ. ಜೊತೆಗೆ ಟಿ.ಎಸ್.ನಾಗಾಭರಣ ನಿರ್ದೇಶನದ ಕಂಸಾಳೆ ಕೈಸಾಳೆ ಸಿನೆಮಾ, ಉಪೇಂದ್ರ ಅಭಿನಯದ ಗಾಡ್ ಫಾದರ್ ಚಿತ್ರ, ಕರೋಡ್ ಪತಿ, ಸೇರಿದಂತೆ ಹತ್ತಾರು ಸಿನೆಮಾಗಳಿಗೆ ಗೀತ ಸಾಹಿತ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಒಟ್ಟಿನಲ್ಲಿ "ಬ್ಯುಸಿ ಶೆಡ್ಯೂಲ್". ಈ ನಡುವೆ ಒಂದಷ್ಟು ಬಿಡುವು ಮಾಡಿಕೊಂಡು "ಈ ಕನಸು.ಕಾಂ"ನೊಂದಿಗೆ ಮಾತಿಗಳಿದ್ದಿದ್ದಾರೆ.

ಕೆ.ಕಲ್ಯಾಣ್ ಅವರದ್ದು ಸರಳ ವ್ಯಕ್ತಿತ್ವ. ನಡೆ - ನುಡಿ ಎರಡೂ ಸರಳ.ಈತ "ಸಾಧಕ" ಎಂಬುದನ್ನು ಕ್ಷಣಾರ್ಧದಲ್ಲಿ ಅರಿಯಬಹುದು.ಕಲ್ಯಾಣ್ ಅವರು 2,500ಕ್ಕೂ ಮಿಕ್ಕಿದ ಹಾಡುಗಳನ್ನು ರಚಿಸಿದ್ದಾರೆ. 16ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿರಿಸಿದ ಇವರು ಏರಿದ ಎತ್ತರ ಊಹೆಗೂ ನಿಲುಕದ್ದು. ಇವರ ಸಾಧನೆಗೆ ಮೂರು ಬಾರಿ ರಾಜ್ಯಪ್ರಶಸ್ತಿ , ಎರಡು ಬಾರಿ ಫಿಲಂಫೇರ್ ಪ್ರಶಸ್ತಿ, 7ಬಾರಿ ಆರ್ಯಭಟ ಪ್ರಶಸ್ತಿ,ಸೇರಿದಂತೆ 300ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.

ಹೆಸರಾಂತ ಸಿನೆಮಾ ನಿರ್ದೇಶಕ, ಗೀತ ನಿರ್ದೇಶಕರೊಂದಿಗೆ ಕೆಲಸಮಾಡಿದ ಅನುಭವ ಇವರದ್ದು. ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಚಂದ್ರಮುಖಿ ಪ್ರಾಣ ಸಖಿ, ಅಪ್ಪು, ಆಕಾಶ್, ಆ ದಿನಗಳು...ಮೊದಲಾದ ಸಿನೆಮಾಗಳಿಗೆ ಇವರು ಬರೆದ ಗೀತಸಾಹಿತ್ಯ ಜನಮನ ಗೆದ್ದಿದೆ. ಆ ರೀತಿ ಕನ್ನಡಿಗರ ಮನಗೆದ್ದ ಕೆ.ಕಲ್ಯಾಣ್ , ಕನ್ನಡಿಗರ, ಅಭಿಮಾನಿಗಳ ಪಾಲಿನ "ಪ್ರೇಮಕವಿ".

- ಹರೀಶ್ ಕೆ.ಆದೂರು.

1 comments:

belur photo said...

ಎಲ್ಲರಿಗೂ ನಮಸ್ಕಾರ - ನಾನು ಬೇಲೂರು ರಾಮಮೂರ್ತಿ
ನಾನು ಇತ್ತೀಚೆಗೆ ಬರೆಯುತ್ತಿರುವ ಪುಸ್ತಕ ಹೆಂಡತಿ ಹೇಳದ ಹತ್ತು ಸತ್ಯಗಳು. ಇದರಲ್ಲಿ ಸುಖೀ ದಾಂಪತ್ಯದಲ್ಲಿ ಸಮಯ ಸಂದರ್ಭಗಳಿಗನುಗುಣವಾಗಿ, ಗಂಡನ ಮನೋಭಾವವನ್ನನುಸರಿಸಿ, ಇಡೀ ಕುಟುಂಬದ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಹೆಂಡತಿಯಾದವಳು ಕೆಲವು ಸತ್ಯಗಳನ್ನು ಗಂಡನಿಂದ ತಾತ್ಕಾಲಿಕವಾಗಿ ಮುಚ್ಚಿಡಬೇಕಾಗುತ್ತದೆ.ಅಂತಹ ಸಂದರ್ಭಗಳು ಯಾವುವು, ಹೆಂಡತಿ ಹೇಳದ ಸತ್ಯಗಳಿಂದ ಏನಾಗುತ್ತದೆ ಮುಂತಾದ ಕುತೂಹಲಗಳನ್ನು ಬಿಚ್ಚಿಡುವುದರ ಜೊತೆಗೆ ಪತಿ ಪತ್ನಿಯರು ಪರಸ್ವರ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕಾದ ಸಂದರ್ಭದಲ್ಲಿ ತಾಳ್ಮೆ ಎಷ್ಟು ಅವಶ್ಯಕ, ಪರಸ್ವರ ಅರ್ಥೈಕ್ಯತೆ ಎಷ್ಟು ಮುಖ್ಯ ಎನ್ನುವುದನ್ನು ಸಾರುವ ಕೃತಿ. ಈಗ ಡಿಟಿಪಿ ಹಂತದಲ್ಲಿದೆ. ಸಪ್ನ ಸಂಸ್ಥೆಯ ವತಿಯಿಂದ ಬಹಶ: ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಬಹುದು.

Post a Comment