ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಂದರ್ಭ ಪಡುಬಿದ್ರಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಬೈಪಾಸ್ ಯೋಜನೆ ವಿರೋಧಿಸಿ ಪಡುಬಿದ್ರಿಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಗುರುದೇವ್ ಟಾಕೀಸ್ ಬಳಿ ಈ ಬ್ಯಾನರ್ ಅಳವಡಿಸಲಾಗಿದ್ದು, ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಪಾದೆಬೆಟ್ಟು ಪರಿಶಿಷ್ಠ ಕಾಲನಿ, ರಾಮನಗರ, ದೀನ್ಸ್ಟ್ರೀಟ್ ವ್ಯಾಪ್ತಿಯ 60ಕ್ಕೂ ಅಧಿಕ ಕುಟುಂಬಗಳು ಬೈಪಾಸ್ ಯೋಜನೆ ವಿರೋಧಿಸಿದ್ದಾರೆ.
ಹೆದ್ದಾರಿ ಅಗಲೀಕರಣ ಸಂದರ್ಭ ಎಲ್ಲಿಯೂ ಬೈಪಾಸ್ ಜಾರಿಗೊಳಿಸಿಲ್ಲ. ಅದಾಗ್ಯೂ ಪಡುಬಿದ್ರಿಗ್ಯಾಕೆ ಬೈಪಾಸ್ ಎಂದಿರುವ ನಾಗರೀಕರು ಈ ಹಿಂದೆ ಬೈಪಾಸ್ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದಾಗಿ ಇಲ್ಲಿನ ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡರು ನಮ್ಮನ್ನು ಭೇಟಿಯಾಗಿ ಕನಿಷ್ಠ 4 ಮನೆಗಳು ಹೋಗುವುದಿದ್ದರೂ ನನ್ನ ವಿರೋಧವಿದೆ. ಹಾಗೂ ನಿಮ್ಮೊಂದಿಗೆ ನಾನಿದ್ದೇನೆ ಎಂದಿದ್ದು, ಇದೀಗ ಮುಖ್ಯಮಂತ್ರಿಯಾದ ತಕ್ಷಣ ಬೈಪಾಸ್ ಜಾರಿಗೊಳಿಸಿ ನಮಗೆ ತೀವ್ರ ಅನ್ಯಾಯವೆಸಗಿದ್ದಾರೆ ಎಂದು ನಾಗರೀಕರ ಪರವಾಗಿ ದಿವಾಕರ್ ಭಟ್ ತಿಳಿಸಿದ್ದಾರೆ.

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ.

0 comments:

Post a Comment