ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಪತ್ರಕರ್ತ ಎ.ಆರ್ ಮಣಿಕಾಂತ್ ಬರೆದಿರುವ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ 25 ಮುದ್ರಣಗಳನ್ನು ಕಂಡಂತಹ ಒಂದು ಅಪೂರ್ವ ಪುಸ್ತಕ. ಇದರಲ್ಲಿ ಒಂದು ಮಗು ಹುಟ್ಟಿದಾಗಿನಿಂದ ಸಾಯುವವರೆಗೆ ತಾಯಿ ಹೇಳುವ ಮಮತೆಯ ಎಂಟು ಸುಳ್ಳುಗಳನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಲಾಗಿದೆ. ಪುಸ್ತಕದ ಮುಖ್ಯ ವಿಷಯ ಇದಾದರೂ ಸಹ ಅನೇಕ ಬೇರೆ ಬೇರೆ ರೀತಿಯ ಅದ್ಭುತ ಸ್ವಾರಸ್ಯಕರ ಕಥೆಗಳನ್ನು ಇಲ್ಲಿ ಕಾಣಬಹುದಾಗಿದೆ.


ಕಾಲಿಲ್ಲದ ವ್ಯಕ್ತಿ ಮಾಡಿದ ಸಾಧನೆ, ತಂದೆ ಮಗಳಿಗೆ ಬರೆದ ಪತ್ರ, ಅವಳು ಸತ್ತ ನಂತರವೂ ಮಾತನಾಡಿದಳು, ಸೈಕಲ್ ರಿಕ್ಷಾದವನ ಮಗ ಐಎಎಸ್ ಮಾಡಿದ್ದು, ಕೋಟ್ಯಾಧಿಪತಿ ಗುಡಿಸಲಲ್ಲೇ ಉಳಿದದ್ದು, ಸಂಕ್ರಾಂತಿಯಂದು ಸುಖ - ದುಖಃ, ಅವನ ಒಳಗಣ್ಣಿಗೆ ನಾಟ್ಯ ಒಲಿದದ್ದು, ಕೈಗಳಿಲ್ಲದ ಹುಡುಗಿ ವಿಮಾನ ಹಾರಿಸಿದಳು, ಕೆಟ್ಟ ಅಮ್ಮಂದಿರಿಲ್ಲ ಜಗದೊಳಗೆ, ದುಡ್ಡು ಅವನಿಗೆ ಸಂತೋಷ ಕೊಡಲಿಲ್ಲ, ಸುಭಾಷಿಣಿಯ ಕಥೆ ಹೀಗೆ ಒಟ್ಟು 35 ಕಥೆಗಳನ್ನು ಇಲ್ಲಿ ಕಾಣಬಹುದಾಗಿದೆ.

ನೀಲಿಮಾ ಪುಸ್ತಕ ಪ್ರಕಾಶನದಿಂದ 2009 ರಲ್ಲಿ ಪ್ರಕಟಗೊಂಡು ಒಟ್ಟು ಇಲ್ಲಿವರೆಗೆ 25 ಮುದ್ರಣಗಳನ್ನು ಕಂಡಿದೆ. ಅನಂತ ಚಿನಿಯಾರ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. 150 ಪುಟಗಳಿರುವ ಈ ಪುಸ್ತಕದ ಬೆಲೆ 90 ರೂಪಾಯಿಗಳು. ಒಟ್ಟಾರೆ ಅಮ್ಮ ಹೇಳಿದ ಎಂಟು ಸುಳ್ಳುಗಳನ್ನು ಎಲ್ಲರೂ ಓದಲೇ ಬೇಕು.

ಮಣಿಕಾಂತ್ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆಯಿತನಹಳ್ಳಿಯವರು. ಓದಿದ್ದು ಇಂಜಿನಿಯರಿಂಗ್, ಬಂದದ್ದು ಪತ್ರಿಕೋದ್ಯಮಕ್ಕೆ. ಹಾಯ್ ಬೆಂಗಳೂರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ವಿಜಯ ಕರ್ನಾಟಕದ ಮುಖ್ಯ ಉಪಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದವರು. ಈ ಗುಲಾಬಿಯೂ ನಿನಗಾಗಿ, ಉಭಯಕುಶಲೋಪರಿ ಸಾಂಪ್ರತ, ಮರೆಯಲೀ ಹ್ಯಾಂಗ ಮತ್ತು ಹಾಡು ಹುಟ್ಟಿದ ಸಮಯ ಇವರ ಅಂಕಣಗಳು.

- ದರ್ಶನ್ ಬಿ.ಎಂ

0 comments:

Post a Comment