ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮಂಗನ ಬಾವು,ಗದ್ದಕಟ್ಟು, ಗದ್ದಬಾವು, ಕೆಪ್ಪಟೆರಾಯ ಮೊದಲಾದ ಹೆಸರಿನಲ್ಲಿ ಕರೆಸಿಕೊಳ್ಳುವ ಈ ಬಾವು ರೋಗ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರವಾಗಿ ಕಾಡತೊಡಗಿದೆ. ಇದೊಂದು ಸಾಂಕ್ರಾಮಿಕ ರೋಗ. ಎಳೆಯ ಮಕ್ಕಳಿಂದ ತೊಡಗಿ ವಯಸ್ಕರ ತನಕ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ತೀವ್ರ ತೊಂದರೆ ಕಾಣತೊಡಗಿದೆ.


ಕೆಪ್ಪಟೆರಾಯ ಇದೊಂದು ವೈರಸ್ ನಿಂದ ಬರುವಂತಹ ಹಾಗೂ ಹರಡುವಂತಹ ಕಾಯಿಲೆ. ಮನುಷ್ಯರಿಗೆ ಅತ್ಯಂತ ವೇಗವಾಗಿ ಈ ಖಾಯಿಲೆ ಹರಡುತ್ತದೆ. ಮಂಪ್ಸ್ ವೈರಸ್ ಎಂಬ ವೈರಸ್ ಇದನ್ನು ಹರಡುವಂತೆ ಮಾಡುತ್ತದೆ. ಬಾಲ್ಯಕಾಲದಲ್ಲಿ ಮಕ್ಕಳಿಗೆ ಬರುವಂತಹ ಖಾಯಿಲೆಗಳ ಪೈಕಿ ಈ ಕೆಪ್ಪಟೆರಾಯನೂ ಒಂದು. ಬಹುತೇಕ ಎಲ್ಲಾ ಕಡೆಗಳಲ್ಲೂ ಕಾಣಸಿಗುವ ಈ ಖಾಯಿಲೆಯಿಂದ ಜನತೆ ಇಂದು ದಿಕ್ಕೆಡುವಂತಾಗಿದೆ.

ಅತ್ಯಂತ ನೋವು ಹಾಗೂ ಕೆನ್ನೆಯ ಭಾಗದಲ್ಲಿ ಬಾಪು ಕಾಣಿಸುವ ಮೂಲಕ ಈ ರೋಗ ಹೊರನೋಟಕ್ಕೆ ಕಂಡುಬರುತ್ತದೆ. ಕೆಲವೊಬ್ಬರಿಗೆ ಎರಡೂ ಕೆನ್ನೆಗಳಲ್ಲಿ ಬಾವು ಕಾಣಿಸಿಕೊಂಡು ಅತ್ಯಂತ ನೋವನ್ನುಂಟುಮಾಡುತ್ತದೆ.

ಹರಡುವ ರೋಗ


ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂತಹ ರೋಗ. ರೋಗಗ್ರಸ್ಥ ವ್ಯಕ್ತಿ ಸೀನುವ, ಅಥವಾ ಕೆಮ್ಮುವ ಸಂದರ್ಭದಲ್ಲೋ ಆ ವ್ಯಕ್ತಿಯ ಸನಿಹ ನಿಂತ ವ್ಯಕ್ತಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ರೋಗ ಗ್ರಸ್ಥ ವ್ಯಕ್ತಿಯು ಸೇವಿಸಿ ಉಳಿದ ಆಹಾರವನ್ನು ಸೇವಿಸಿದರೂ ಈ ರೋಗ ಹರಡುವ ಸಾಧ್ಯತೆಗಳಿರುತ್ತವೆ. ಸುಮಾರು 14- 25 ದಿನಗಳ ಕಾಲ ಈ ರೋಗ ಕಾಣಿಸಿಕೊಳ್ಳುವುದು. ರೋಗದ ಪ್ರಾರಂಭದಲ್ಲಿ ಕಿವಿಯಭಾಗದಲ್ಲಿ ನೋವು ಆರಂಭಗೊಳ್ಳುತ್ತದೆ. ಜ್ವರ, ನೋವಿನ ಲಕ್ಷಣಗಳು ಈ ರೋಗದ ಪ್ರಾರಂಭಿಕ ಲಕ್ಷಣಗಳಾಗಿರುತ್ತವೆ.

0 comments:

Post a Comment