ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಏನೇ ಹೇಳಿ ಮಾವಿನ ಹಣ್ಣೊಂದು ತಿಂದಿಲ್ಲಾಂದ್ರೆ ಸಾಧ್ಯನೇ ಇಲ್ಲ... ಏನೇ ಆಗ್ಲಿ ಮಾವಿನ ಹಣ್ಣು ಬೇಕೇ ಬೇಕು ಎಂಬಷ್ಟರ ಮಟ್ಟಿಗೆ ಅ ಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ "ಮಾವು ಪ್ರಿಯರೇ" ಆಗಿರುತ್ತಾರೆ...

ಮಾವಿನ ಬಗ್ಗೆ ಇನ್ನೊಂದಿಷ್ಟು ಅರಿಯೋಣ... ಮಾವು (ಮ್ಯಾಂಗಿಫೆರ ಇಂಡಿಕ)ಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ.ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಢ.ಇದರ ೩೦ ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ.ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದಲ್ಲಿ ವ್ಯವಸಾಯದಲ್ಲಿದ್ದು,ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್ನ ಪ್ರವಾಸಿಗರು ಇದನ್ನು ಪಶ್ಚಿಮದ ಉಷ್ಣವಲಯ ದೇಶಗಳಲ್ಲಿ ಪ್ರಸರಿಸಿದರು.

ಮಾವು ಅನಕಾರ್ಡಿಯೆಸೆಕುಟುಂಬಕ್ಕೆ ಸೇರಿದ್ದು,ಇದರ ಸಸ್ಯಕುಲ(Genus)ಮ್ಯಾಂಗಿಫೆರಆಗಿರುತ್ತದೆ.ಭಾರತದಲ್ಲಿ ವ್ಯಾಪಕವಾಗಿರುವ ತಳಿ ಸಸ್ಯನಾಮ ಮ್ಯಾಂಗಿಫೆರ ಇಂಡಿಕ. ಮಾವಿನ ಹಣ್ಣು ಅತ್ಯಂತ ರುಚಿಕರವಾಗಿದ್ದು,ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ.ಮಾವಿನ ಹಣ್ಣಿನ ಅನೇಕ ತಳಿಗಳಿದ್ದು ಪ್ರತಿವರುಷವೂ ಹೊಸತಾದ ತಳಿಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.ಇದರಲ್ಲಿ ಹೆಚ್ಚಿನವುಗಳು ತಿನ್ನಲು ಯೋಗ್ಯವಾದವುಗಳಾಗಿದ್ದು,ಕೆಲವು ಪಾನೀಯ ತಯಾರಿಕೆ ಉಪಯುಕ್ತ.ಕಾಡು ಮಾವಿನ ಜಾತಿಗಳಲ್ಲಿ ಕೆಲವು ಉಪ್ಪಿನಕಾಯಿತಯಾರಿಕೆಗೆ ಉಪಯೋಗಿಸುತ್ತಾರೆ.ಮಾವು ದೊಡ್ಡಪ್ರಮಾಣದ ನಿತ್ಯಹರಿದ್ವರ್ಣಮರ.ಅಚ್ಚ ಹಸಿರಿನ ದಟ್ಟವಾದ ಎಲೆಗಳು ಇದ್ದು,ಇದು ತೇವಾಂಶವಿರುವ ಮಿಶ್ರಪರ್ಣಪಾತಿ(Mixed Deciduous)ಹಾಗೂ ಅರೆ ನಿತ್ಯಹರಿದ್ವರ್ಣ(Semi evergreen)ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.ಇಂತಹ ಕಾಡುಗಳಲ್ಲಿ ಬೆಳೆಯುವ ಮಾವು ಎತ್ತರೆವಾಗಿ ಸುಮಾರು ೬೦ ಅಡಿಗಳವರೇಗೂ ಬೆಳೆಯುತ್ತದೆ.ಇದರ ದಾರುವು ಮೃದುವಾಗಿದ್ದು ಮರಗೆಲಸಕ್ಕೆ ಸುಲಭವಾಗಿರುತ್ತದೆಯಾದರೂ ಬಾಳಿಕೆಯುತವಲ್ಲ.ಇದನ್ನು ಪದರಹಲಗೆ(plywood)ತಯಾರಿಕೆಯಲ್ಲಿ,ಕೆಲವು ತತ್ಕಾಲೀನ ಉಪಯೋಗದ ಕೆಲಸಗಳಿಗೆ ಹಲಗೆಗಳಾಗಿ ಉಪಯೋಗಿಸಬಹುದು.ಕಸಿ ಮಾಡಲ್ಪಟ್ಟ ಅನೇಕ ತಳಿಗಳು ಕೇವಲ ರುಚಿಕರ ಹಣ್ಣಿಗಾಗಿ ಬೆಳೆಸಲ್ಪಡುತ್ತರಸಪೂರಿ,ಮಲ್ಗೋವ,ಬಾದಾಮ್,ಮಲ್ಲಿಕ,ನೆಕ್ಕರೆ,ತೊತಾಪುರಿ,ಅಪ್ಪೆಮಿಡಿ,ನೀಲಂ,ಕಾಟುಮಾವು ಮೊದಲಾದ ಮಾವುಗಳು ಈ ಭಾಗದಲ್ಲಿ ದೊರೆಯುತ್ತಿದೆ.

(ಸಂಗ್ರಹ...)

8 comments:

Anonymous said...

umm bayili neeru thumbithu

Anonymous said...

wow super article,,,

Arpitha Harsha

Ranga said...

ಹಣ್ಣುಗಳು ಮಹಾರಾಜ ಅಂದ್ರೆ ಸುಮ್ನೆನಾ ..... ಪೋಟೋ ನೋಡತ್ತಿದ್ರೆನೆ ತಿನ್ನ ಬೇಕು ಅನಿಸುತ್ತಿದೆ ಅಲ್ವಾ..?

nagarathna said...

wahvoo!

nagarathna said...

wavhoo!
nagarathna
vinaya
lalitha

nagarathna said...

wavhoo!

Anonymous said...

Wow... very very nice...
inna season start agatte.....

Anonymous said...

wow.. very nice ..
inna season start agtte..
Darshan..

Post a Comment