ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರುಚಿ...
ಸೆಖೆ...ಸೆಖೆ...ಸೆಖೆ...ಇದು ಸರ್ವೇ ಸಾಮಾನ್ಯ ಪದ. ಎಷ್ಟು ನೀರು ಕುಡಿದರೂ ಸಾಲದಪ್ಪಾ...ಏನು ಖಾರ ಈ ಬಾರಿಯ ಬಿಸಿಲು...ಇದೆಲ್ಲಾ ಮಾತುಗಳು ಕೇಳಿಬರುತ್ತವೆ. ತಣ್ಣನೆಯದ್ದೇನಾದರೂ ಇದ್ದರೆ ಕೊಡಿ ಎಂಬುದು ಇಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿ ಬರುವಂತಹುದು.ನೀರಿಗೂ ರುಚಿಇಲ್ಲ...ಈ ಹಾಳು ಸೆಖೆಯಿಂದಾಗಿ ಎನ್ನುತ್ತಾರಲ್ಲಾ...ಹಾಗಾದರೆ ನೀರು ಬೇಡ...ಪಾನೀಯವಾದರೂ ಕುಡಿಯೋಣ... ಇದು ಮಾವಿನ ಹಣ್ಣಿನ ಸೀಸನ್ . ಮಾವು ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು .


ಮಿಲ್ಕ್ ಶೇಕ್ ಗೆ ಬೇಕಾಗುವ ಸಾಮಗ್ರಿಗಳು

ಸಿಹಿ ಮಾವಿನ ಹಣ್ಣು ೧
ಸಕ್ಕರೆ ಸ್ವಲ್ಪ
ಏಲಕ್ಕಿ ಪುಡಿ ೧ ಚಮಚ
ಐಸ್ ಕ್ಯೂಬ್ ೧ (ಬೇಕಿದ್ದಲ್ಲಿ)
ಹಾಲು ೧ ಕಪ್

ಮಾವಿನ ಹಣ್ಣನ್ನು ಹೋಳುಗಳನ್ನಾಗಿ ಹೆಚ್ಚಿಕೊಳ್ಳಿ . ಮಿಕ್ಸೆರ್ ನಲ್ಲಿ ಹೆಚ್ಚಿಟ್ಟ ಹೋಳುಗಳನ್ನು ಹಾಕಿ ಸಕ್ಕರೆ, ಏಲಕ್ಕಿ ಪುಡಿ ಹಾಕಿ ರುಬ್ಬಿ . ಬೇಕಿದ್ದಲ್ಲಿ ಐಸ್ ಕ್ಯೂಬ್ ಅನ್ನು ಸೇರಿಸಿಕೊಳ್ಳಬಹುದು . ಈಗ ಕಾದ ಹಾಲನ್ನು ತಣಿಸಿ ತಣ್ಣಗಿರುವ ಹಾಲನ್ನು ಸೇರಿಸಿ . ಈಗ ರುಚಿಯಾದ ಮಿಲ್ಕ್ ಶೇಕ್ ರೆಡಿ
ಅರ್ಪಿತಾ ಹರ್ಷ

0 comments:

Post a Comment