ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:24 PM

ಆಳ ನೀರಿನ ಭತ್ತ

Posted by ekanasu

ಪುಸ್ತಕ ಪರಿಚಯ

ಯುವಾ
ನೆರೆ ಪೀಡಿತ ಪ್ರದೇಶಗಳಲ್ಲಿ ನೆಲೆ ಮಾಡಿಕೊಂಡು ಬೆಳೆಯುವ ಆಳ ನೀರಿನ ಭತ್ತದ ತಳಿಗಳು, ಜೀವವೈವಿಧ್ಯದ ದೃಷ್ಟಿಯಿಂದ ವಿಶೇಷ ಮಹತ್ವವನ್ನು ಪಡೆದಿವೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳ, ಗೋಧಾವರಿ ನದಿ ಪಾತ್ರ ಮತ್ತು ಪೂರ್ವ ಘಟ್ಟದ ಕಾಡು ಪ್ರದೇಶಗಳಷ್ಟೇ ಕಂಡು ಬರುವ ಇಂತಹ ಭತ್ತಗಳನ್ನು ಇಂದು ಕರ್ನಾಟಕದ ವರದಾ ನದಿಯ ಪ್ರಾಂತ್ಯದಲ್ಲಿ ಕಾಣಬಹುದಾಗಿದೆ.


ನೆರೆಯನ್ನು ಸಮರ್ಥವಾಗಿ ಎದುರಿಸಬಲ್ಲ "ನೆರೆಗುಳಿ" ಇಲ್ಲಿ ಕಂಡು ಬರುವಂತಹ ಪ್ರಮುಖ ಭತ್ತದ ತಳಿಯಾಗಿದೆ.
ವರದಾ ನದಿಯ ದಂಡೆಯ ಮೇಲೆ ನೆರೆಗದ್ದೆಗಳಂತ ಸೂಕ್ಷ್ಮ ಪರಿಸರಕ್ಕೆ ಹೊಂದಿಕೊಳ್ಳುವ ತಳಿಗಳನ್ನು ವಿಜ್ಞಾನಿಗಳು ತಯಾರಿಸುವುದಿಲ್ಲ. ನೂರಾರು ವರ್ಷಗಳಿಂದ ನೆರೆಯೊಂದಿಗೆ ಸೆಣೆಸಿದ ನಿಸರ್ಗವೇ ರೂಪಿಸುತ್ತದೆ. ಇಂತಹ ತಳಿಗಳ ಕುತಾಗಿ ರಚಿತವಾಗಿರು ಪುಸ್ತಕವೇ "ಆಳ ನೀರಿನ ಭತ್ತ" ವರದೆಯ ಮಡಿಲಿನ ಅಚ್ಚರಿ.

ಸಾವಯವ ಕೃಷಿಕರ ಬಳಗವಾದಂತಹ "ಸಹಜ ಸಂಮೃದ್ದ" ಈ ಪುಸ್ತಕವನ್ನು ಪ್ರಕಟಿಸಿದೆ. ಜಿ. ಕೃಷ್ಣಪ್ರಸಾದ್, ಪೂರ್ಣಪ್ರಜ್ಞ ಬೇಳೂರು, ರಘುನಂದನ್ ಭಟ್ ಈ ಪುಸ್ತಕವನದನು ಸಂಪಾದಿಸಿದ್ದಾರೆ. 27 + 6 ಪುಟಗಳನ್ನು ಹೊಂದಿರುವ ಈ ಪುಸ್ತಕದ ಬೆಲೆ 20 ರೂಪಾಯಿಗಳು.

- ದರ್ಶನ್ ಬಿ.ಎಂ

0 comments:

Post a Comment