ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪುಸ್ತಕ ಪರಿಚಯ
ಭಗವಾನ್ ಎಂಬ ಕಾವ್ಯನಾಮದಿಂದ ಪ್ರಸಿದ್ದಿ ಪಡೆದವರು ಎಸ್,ದತ್ತಾತ್ರಿ. ಇವರು ಬರೆದಿರುವ ಈ ಪುಸ್ತಕವೇ "ಕರ್ನಾಟಕ ಕೃಷಿ ಮುಕುಟ". ದೇಶದ ಪ್ರಸಿದ್ದ ಕೃಷಿಕ ಡಾ. ಪ್ರಫುಲ್ಲ ಚಂದ್ರರವರು ಕೃಷಿಯಲ್ಲಿ ಮಾಡಿದ ಜೀವಮಾನ ಸಾಧನೆಯ ಕುರಿತಾದ ಪುಸ್ತಕ ಇದಾಗಿದೆ.

ನಿಸ್ವಾರ್ಥ ಈ ರೈತನ ಸಾಧನೆ, ಸಂಶೋಧನೆಯ ನೋಟವನ್ನು ಈ ಪುಸ್ತಕ ತಿಳಿಸುತ್ತದೆ. ನಿರಂತರ ನಲವತ್ತು ವರ್ಷ ಕೃಷಿ ಸಾಧನೆ. ಎಲ್ಲಾ ಇದ್ದು ಇತರರಿಗೆ ತಲೆ ಒಪ್ಪಿಸಿ, ಎಲ್ಲಾ ಕಳೆದುಕೊಂಡು ಸೊನ್ನೆಯಿಂದ ಮೇಲೆ ಬಂದ ಡಾ. ಪ್ರಫುಲ್ಲಚಂದ್ರ ಸೊನ್ನೆ ಹೂಡಿಕೆ ವ್ಯವಸಾಯಕ್ಕೆ, ಕೃಷಿಯ ತ್ಯಾಜ್ಯಗಳ ಮರುಬಳಕೆಗೆ ಮತ್ತೊಂದು ಹೆಸರು. ಅವರ ನಲವತ್ತು ವರ್ಷದ ಕೂಳೆಕೊಬ್ಬು ಜಾಗತಿಕ ದಾಖಲೆ. ರೈತರ ಹೆಜ್ಜೆ, ಶ್ರಮ ಸಮಯದ ಉಳಿತಾಯದತ್ತ ಚಿಂತಿಸುವ ಈ ಚಿಂತಕ, ಸಂಶೋಧಕ, ವಿಜ್ಞಾನಿ, ಇಂಜಿನಿಯರ್, ಪ್ರಗತಿಪರ ರೈತರ ಸಾಧನೆ, ಅನುಭವದ ದರ್ಪಣ ಈ ಕೃತಿ ಎಂದು ಸ್ವತಃ ಪ್ರಕಾಶಕರೇ ಅಭಿಪ್ರಾಯ ಪಡುತ್ತಾರೆ.

ಡಾ.ಪ್ರಫುಲ್ಲಚಂದ್ರ ಇತರ ರೈತರಿಗೆ ಮಾದರಿ. ವರ್ಷಗಳಿಂದ ಇವರ ಕೃಷಿ ಸಂಪದ ಒಂದು ವಿಶ್ವವಿದ್ಯಾನಿಲಯವಾಗಿ, 20 ಸಾವಿರಕ್ಕೂ ಮಿಗಿಲಾಗಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ರೈತರು, ಗಣ್ಯರು, ವಿದೇಶಿಗರು ಈ ಸಾಧಿತ ರೈತನಲ್ಲಿಗೆ ಬಂದಿದ್ದಾರೆ.

ಈ ಮಹಾನ್ ರೈತನಿಗೆ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ಒಲಿದಿವೆ. ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರೊಫೆಸರ್ ಆಗಿ ಹಲವು ಮುಖಗಳಲ್ಲಿ ಬೆಳಗಿದ್ದಾರೆ. ಇವರ ಸಾಧನೆ ಕುರಿತು ಪತ್ರಿಕೆಗಳ್ಲಿ 300 ಕ್ಕೂ ಅಧಿಕ ಲೇಖನಗಳು ಪ್ರಕಟವಾಗಿವೆ.

ಸ್ವತಃ ಚಂದ್ರರವರೇ 100 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 200ಕ್ಕೂ ಹೆಚ್ಚು ಸಭೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಪ್ರಜಾವಾಣಿಯಲ್ಲಿ ಒಂದು ವರ್ಷ ಪ್ರಫುಲ್ಲರ ಅಂಕಣ ಪ್ರಕಟವಾಗಿದೆ. ಈ ಅಪೂರ್ವ ಸಾಧಕನ ಲಿಖಿತ ರೂಪವೇ ಈ ಪುಸ್ತಕ.
ಬೆಂಗಳೂರಿನ ಶ್ರೀನಿವಾಸ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅಳಿಲು ಸೇವಾ ಸಂಸ್ಥೆ ಈ ಪುಸ್ತಕದ ಪ್ರಕಟಣೆಯಲ್ಲಿ ಸಹಕಾರ ನೀಡಿದೆ. 128+4 ಪುಟಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕದ ಬೆಲೆ 55 ರೂಪಾಯಿಗಳಾಗಿವೆ.

- ದರ್ಶನ್ ಬಿ.ಎಂ

0 comments:

Post a Comment