ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:23 PM

ಮರೀಚಿಕೆ

Posted by ekanasu

ಸಾಹಿತ್ಯ
ಸೀತೆ ಪಡೆದೆಳು ತಾನು
ಬಯಸಿದಾ ಗಂಡನನ್ನ
ಮರ್ಯಾದಾ ಪುರುಷೋತ್ತಮನ

ಆದರೂ ಕೇಳಿದನು
ಎಲ್ಲ ಪ್ರಶ್ನೆಗಳನ್ನ

ಅಹಲ್ಯೆ ಕಲ್ಲಾಗಿ ಕಾದು ಗಾರಾಗಿ
ಪಾದ ಸ್ಪರ್ಶದಿ ಎಚ್ಚೆತ್ತಳಂತೆ
ಯುಗಯುಗದ ಕಾಯುವಿಕೆ
ಒಂದು ಕ್ಷಮೆಗೆ
ಕುರೂಪಿ ಮಂಥರೆಯ
ಸ್ವೇಚ್ಛೆ ಶೂರ್ಪನಖಿಯ
ಹೃದಯದೊಳಡಗಿತ್ತೆ
ಒಂದು ಪ್ರೀತಿಯ ಮೊಳಕೆ
ಓ ಹೆಣ್ಣೆ ಏನನ್ನೂ ಬಯಸದಿರು ನೀನು
ಬಾನ ಕರೆಯನ್ನು ಭುವಿಯ ಸೆಲೆಯನ್ನು
ನಿರ್ಲಿಪ್ತ ಮೌನವಿದು
ಶಾಂತಿ: ಶಾಂತಿ:

- ಜಯಶ್ರೀ ಬಿ ಕದ್ರಿ
ಮಂಗಳೂರು

3 comments:

Anilkumar Alalamath said...

ಸೊಗಸಾದ ಸಾಲುಗಳು....

ಗಿರಿ said...

:)

ಗಿರಿ said...

:)

Post a Comment