ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:02 PM

ಭಾಗ - 1

Posted by ekanasu

ವೈವಿಧ್ಯ


ಅದು ಮಟ ಮಟ ಮಧ್ಯಾಹ್ನ... ಗಂಟೆ ಒಂದರ ಹತ್ತಿರವಾಗಿತ್ತು. ಸೂರ್ಯ ನೆತ್ತಿಯ ಮೇಲೇರಿದ್ದ... ಸುಡು ಬಿಸಿಲು ಬೇರೆ... ಕಾಲಲ್ಲಿ ಚಪ್ಪಲಿಯೂ ಹಾಕಿರಲಿಲ್ಲ... ಅಲ್ಲಿ ಮಣ್ಣು ಕೆಂಪಾಗಿದ್ದಿರಲಿಲ್ಲ... ಬಿಳಿ ಮಿಶ್ರಿತ ಮಣ್ಣು...ಮೇಲ್ನೋಟಕ್ಕೆ ಜೇಡಿ ಮಣ್ಣು ಅನ್ನುತ್ತೇವಲ್ಲಾ ಆ ರೀತಿಯ ಮಣ್ಣು ಕಂಡುಬರುತ್ತಿತ್ತು. ಮಣ್ಣಿನೊಂದಿಗಿದ್ದ ದೊಡ್ಡ ದೊಡ್ಡ ಕಲ್ಲಿನ ತುಂಡುಗಳನ್ನು ನೋಡಬೇಕಾದರೆ ಯಾವುದೋ ಲೋಹದ ಅಂಶ ಆ ತುಂಡುಗಳಲ್ಲಿ ಗೋಚರಿಸುತ್ತಿತ್ತು. ಭೂಮಿಯ ಕಾವು ಕಾಲನ್ನು ಸುಡುತ್ತಿತ್ತು. ಸೂರ್ಯನ ಶಾಖ ತಲೆಯ ಮೇಲೆ ಒಂದೇ ಸವನೆ ಬೀಳುತ್ತಿತ್ತು... ಹೌದು ಅವರು ಹೆಜ್ಜೆ ಹಾಕುತ್ತಿದ್ದರು...ನಮ್ಮ ಟೀಂ ಅವರನ್ನು ಹಿಂಬಾಲಿಸುತ್ತಿತ್ತು... ನಡೆದಷ್ಟೂ ಮುಗಿಯದ ಪಯಣ...ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆಂಬ ಕಾತರ...ಹೌದು... ಅದೊಂದು ಯಶೋಗಾಥೆ... ಅದು ಮುಗಿಯದ ಕಥೆ...ಕಥೆಯೊಳಗಣ ವ್ಯಥೆ...ವ್ಯಥೆಯೇ ಈ ಕಥೆಯ ಮುಖ್ಯ ವಸ್ತು...ಅರ್ಥಾತ್ ಕೇಂದ್ರ ಬಿಂದು...

ಅದು ಯಾವ ಸಿನೆಮಾದ ರೀಲು ಬಿಚ್ಚಿಟ್ಟರೂ ಕಂಡುಬರದಂತಹ ಕಥೆ... ಅದು ಕೇವಲ ಕಥೆಯಲ್ಲ...ಸಾಧನೆಯ ಎಳೆ... ಬರಡು ಭೂಮಿಯಲ್ಲಿ ಹಸಿರ ಹೊದಿಕೆ ಹೊದೆಸಿದ ಕಥೆ... ಏನೊಂದೂ ಪೌಷ್ಟಿಕಾಂಶವಿಲ್ಲದ ಪಾಳು ಭೂಮಿಯನ್ನು ಹಸನುಗೊಳಿಸಿದ ಕಥೆ... ಅಲ್ಲಿನ ಪ್ರತೀ ಹಸಿರ ಕಣದಲ್ಲೂ ಬೆವರ ಹನಿಗಳಿದ್ದವು...ಸಾಧನೆಯ ಶ್ರಮ ಎದ್ದು ಕಾಣುತ್ತಿದ್ದವು... ಬರಡು ಭೂಮಿ ಹಸಿರಾದ ದೃಶ್ಯಕಾವ್ಯ ಕಂಡುಬರುತ್ತಿತ್ತು... ಅದಕ್ಕೆ ಸಾಕ್ಷಿಯೇ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಸೊಂಪಾಗಿ ಬೆಳೆದು ನಿಂದ ವೈವಿಧ್ಯ ಕೃಷಿ.

ಟೀಂ ಈ ಕನಸು ತನ್ನ ಐದನೇ ವರುಷದ ಸಂಭ್ರಮಾಚರಣೆಯ ಶುಭಾವಸರದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಸಾಧನೆಗಳತ್ತ ಬೆಳಕು ಚೆಲ್ಲುವ ಕಾಯಕಕ್ಕೆ ಮುಂದಡಿಯಿಟ್ಟಿತು. ಅದರ ಫಲವೇ "ಬರಡು ಭೂಮಿಯಲ್ಲೊಂದು ಹಸಿರ ಕ್ರಾಂತಿ"ಯ ಸಾಧನೆಯ ಅನಾವರಣ. ಅದು ಭೂ ಲೋಕದ ಸ್ವರ್ಗ. ಇದು ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ. ಸ್ವರ್ಗದ ಕಲ್ಪನೆಯ ಸಾಕಾರ.ಇದು ಈ ಸಾಧನೆಯ ಅಂತರಾಳ ಅನುಭವಿಸಿದವರಿಗೆ ಮಾತ್ರ ತಿಳಿಯಲು ಸಾಧ್ಯ...
ಹೌದು...ಅದರ ವಿಸ್ತಾರ ಬಹುವಾಗಿದೆ...ನಿಮಗೆ ತಿಳಿಸುತ್ತೇವೆ...ಆದರೆ ಒಂದಷ್ಟು ಕಾದು ನೋಡಿ...ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿವರಗಳು....

ಬರಹ: ಹರೀಶ್ ಕೆ.ಆದೂರು
ಟೀಂ ಈ ಕನಸು ಜೊತೆ.

0 comments:

Post a Comment