ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ 15ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕುಂಟಾರು ಸುಬ್ರಾಯ ತಂತ್ರಿಯವರ ನಿರ್ದೇ ಶನದಂತೆ, ಬ್ರಹ್ಮಶ್ರೀ ರವೀಶ ತಂತ್ರಿಯವರ ಮಾರ್ಗದರ್ಶನದೊಂದಿಗೆ, ಬ್ರಹ್ಮಶ್ರೀ ಗುರುರಾಜ ತಂತ್ರಿ ಹಾಗೂ ಮುರಳೀಧರ ತಂತ್ರಿಯವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಸಂಪನ್ನಗೊಂಡಿತು. ಮೀನಗದ್ದೆ ಗಣೇಶ್ ಭಟ್ ಮತ್ತು ಕೊರೆಕ್ಕಾನ ನಾರಾಯಣ ಭಟ್ ಅವರಿಂದ ರುದ್ರ ಪಾರಾಯಣ ನಡೆಯಿತು. ಕಾರ್ಯಕ್ರಮದಂಗವಾಗಿ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ರುದ್ರ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಗೌರವಾರ್ಪಣೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು ಬಂತು. ಆಗಮಿಸಿದ ಭಕ್ತಾಧಿಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ.ಡಿ.ರಾಮಭಟ್ ಹಾಗೂ ಸಹೋದರರಾದ ಡಿ. ಮಹಾಲಿಂಗೇಶ್ವರ ಭಟ್ ಮತ್ತು ಶ್ರೀ. ಡಿ. ವೆಂಕಪ್ಪಯ್ಯ ಭಟ್, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸ್ವಾಗತಿಸಿ ಬರಮಾಡಿಕೊಂಡರು.

0 comments:

Post a Comment