ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:09 PM

ಭಾಗ - 2

Posted by ekanasu

ನಿನ್ನೆಯಿಂದ...

ಅಲ್ಲಿ ಹೆಜ್ಜೆ ಹೆಜ್ಜೆಗೆ ತಳಿ ವೈವಿಧ್ಯ...ಇದು ಕೃಷಿಗಷ್ಟೇ ಸೀಮಿತ ಎಂದುಕೊಳ್ಳಬೇಡಿ... ಮಿಶ್ರ ಬೆಳೆ/ವ್ಯವಸಾಯ/ಉದ್ಯಮ! ಹೌದು...ಓರ್ವ ಸಾಧಕನ ಚಿಂತನೆಯೆಂದರೆ ಹಾಗೇನೇ...ಅದು ತಿಳಿಯಬೇಕಾದರೆ ಸಾಗರದಿಂದ ಕೊಂಚ ದೂರದಲ್ಲಿರುವ ತಾಳಗುಪ್ಪ ಸಮೀಪದ ಐಗಳಕೊಪ್ಪಕ್ಕೆ ಹೋಗಿ ನೋಡಿದರೆ ಸಾಕು. ಅಲ್ಲಿರುವ ಪುರುಷೋತ್ತಮ ಗಣಪತಿ ಭಟ್ ಅವರ ಹತ್ತೆಕ್ಕರೆ ಕೃಷಿ ಭೂಮಿಯನ್ನೊಮ್ಮೆ ಸುತ್ತಿ ಬಂದರೆ ಇದೆಲ್ಲವೂ "ಹೌದು" ಎಂಬ ಅರಿವು ಯಾರಿಗಾದರೂ ಆಗಿಯೇ ಆಗುತ್ತದೆ. ಹಾಗಿದೆ ಪುರುಷೋತ್ತಮ ಗಣಪತಿ ಭಟ್ಟರ ಸಾಧನೆ...ಭಟ್ಟರು ಬರಡು ಬೂಮಿಯನ್ನು ಹಸನುಗೊಳಿಸಿದ ರೀತಿಯೇ ಒಂದು ಬೆರಗು...ಹೆಬ್ಬಾವಿನಂತೆ ಉದ್ದಕ್ಕೆ ಸಾಗಿದ ಕರ್ರಗಿನ ಟಾರು ರಸ್ತೆಗೆ ತಾಗಿದಂತಿರು ಬೃಹದಾಕಾರದ ಕಮಾನಿನ ಒಳಹೊಕ್ಕರೆ ಅಲ್ಲೊಂದು ಪ್ರಶಾಂತವಾದ ವಾತಾವರಣ.ಅಲ್ಲಿ ಲಕ್ಷ್ಮೀ ವೆಂಕಟರಮಣನ ಸಾನಿಧ್ಯ. ಅದು ಕೇವಲ ಒಂದು ದೇಗುಲ ಮಾತ್ರವಲ್ಲ. ಪ್ರಸನ್ನವಾದ ಕ್ಷೇತ್ರ. ಪಕ್ಕದಲ್ಲೇ ಸಭಾಮಂಟಪ. ಅದರ ವಿರುದ್ಧ ದಿಕ್ಕಿನಲ್ಲಿ ಭೋಜನಶಾಲೆ. ವಿಶಾಲವಾದ ಭೋಜನ ಶಾಲೆಯಲ್ಲಿ ಕುಳಿತು ಊಟಮಾಡಲು ಸುಸಜ್ಜಿತ ಸೌಕರ್ಯ. ಇದು ಇರಲಿ...ಅದಕ್ಕಿಂತಲೂ ಮುಖ್ಯವಾದ ವಿಚಾರ ಇಲ್ಲೊಂದಿದೆ. ಮದುವೆ, ಮುಂಜಿ ಕಾರ್ಯಕ್ರಮದ ಸಂದರ್ಭ ಊಟ ತಯಾರಿಸಲು ಯಾವುದೇ ಸಂದರ್ಭದಲ್ಲೂ ಇಲ್ಲಿ ಸರ್ವ ರೀತಿಯ ದಿನಸಿ ದಾಸ್ತಾನು ಸಿದ್ಧವಾಗಿರುತ್ತವೆ.ಇದರಿಂದ ಕಾರ್ಯಕ್ರಮ ಆಯೋಜಕರಿಗೆ ತುರ್ತು ಸಂದರ್ಭದಲ್ಲೂ ನೆರವು ನೀಡಲು ಸಾಧ್ಯ. ಇದು ವೈವಿಧ್ಯ.

ಇಲ್ಲೊಂದು ಗೋಶಾಲೆಯಿದೆ. ಸುಮಾರು 70ಜಾನುವಾರುಗಳು ಇಲ್ಲಿವೆ. ಜೊತೆಗೊಂದು ಕುದುರೆಯೂ ಇದೆ. ಗೋಶಾಲೆಯ ಆರಂಭದಲ್ಲೇ ಕುದೆಯ ದರುಷನ.ಸೊಂಪಾಗಿ ಬೆಳೆದು ನಿಂತ ಈ ಕುದುರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ವಿವಿಧ ತಳಿಗಳ ಗೋವುಗಳು ದಷ್ಟಪುಷ್ಟವಾಗಿ ಬೆಳೆದುನಿಂತಿವೆ.

ಮನಕ್ಕೆ ನೆಮ್ಮದಿ ನೀಡುವ ದೇಗುಲ, ಪಕ್ಕದಲ್ಲೇ ಗೋ ಶಾಲೆ...ಗೋಶಾಲೆಯಿಂದ ಹೊರ ಬರುವ ಗೋ ಮೂತ್ರ, ಸೆಗಣಿಯಿಂದ ಗೊಬ್ಬರ ತಯಾರಿ, ಅದರಿಂದ ಕೃಷಿ, ಕೃಷಿಯಿಂದ ಖುಷಿ...ಇದು ಭಟ್ಟರ ಸಾಧನೆಯ ಒಟ್ಟಾರೆ ನೋಟ...

ಹೌದು...ಬರಡು ಭೂಮಿ ಹಸನಾದದ್ದೇ ಈ ಗೊಬ್ಬರ ತಯಾರಿಕೆಯಿಂದ...ಅಂದರೆ ನೀವು ನಂಬುತ್ತೀರಾ... ಬಿಡಿ...ಎರಡು ವರುಷ ಪ್ರಾಯದ ಮಾವಿನ ಗಿಡಗಳು ಮೈ ತುಂಬಾ ಮಾವಿನ ಮಿಡಿಗಳಿಂದ ಶೃಂಗರಿಸಿಕೊಂಡಿವೆ ಎಂದರೆ ನೀವು ನಂಬಲು ಸಾಧ್ಯವೇ...? ಎರಡಡಿ ಎತ್ತರದ ಜೋಳದ ಗಿಡದ ಬುಡದಲ್ಲಿ ಯಾವುದೇ ರಸಗೊಬ್ಬರವೂ ಇಲ್ಲದೆ,ಆರೋಗ್ಯವಂತ ಆರರಿಂದ ಎಂಟು ಜೋಳದ ಕುಂಡಿಗೆಗಳು ಸೊಂಪಾಗಿ ಬೆಳೆದು ಮೈದುಂಬಿ ನಿಂತಿದೆ ಎಂದರೆ ನೀವು ನಂಬುವಿರಾ...? ಇದಕ್ಕೆಲ್ಲಾ ಉತ್ತರ "ಹೌದು..." ಅದಕ್ಕೆ ಕಾರಣವೇನಿರಬಹುದು...? ಭಟ್ಟರ ಸಾಧನೆ ಇನ್ನೇನಿರಬಹುದು...? ಇದರ ಹಿಂದೆ ಎಂತಹ ರಹಸ್ಯ ಅಡಗಿರಬಹುದು...? ಇವೆಲ್ಲ ಪ್ರಶ್ನೆಗೆ ನಾಳಿನ ಸಂಚಿಕೆಯಲ್ಲಿ ಉತ್ತರವಿದೆ...!

ಬರಹ: ಹರೀಶ್ ಕೆ.ಆದೂರು
ಟೀಂ ಈ ಕನಸು ಜೊತೆ.

1 comments:

Unknown said...

I know purushotthamanna.. i know his hard work.. he has the capacity to grow gold in dust.. Hatsoff to him.. write his achievements in detail..

Post a Comment