ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಮೈಸೂರು: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೇ 12 ಮತ್ತು 13ರಂದು ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಆಯೋಜಿಸುತ್ತಿರುವ ಉದ್ಯೋಗಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಭಾಗವಹಿಸುವ ಕಂಪೆನಿಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಮಾಧ್ಯಮ ಸಂಪರ್ಕಾಧಿಕಾರಿ, ಹಾಗೂ ಉಪನ್ಯಾಸಕ ಹರೀಶ್ ಕೆ.ಆದೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವಿಕಲಚೇತನರಿಗೂ ಈ ಮೇಳದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎರಡು ಕಂಪೆನಿಗಳು ಕೇವಲ ವಿಕಲ ಚೇತನರನ್ನೇ ಮುಂದಿಟ್ಟಿಕೊಂಡು ನೇಮಕಾತಿ ನಡೆಸಲಿದೆ ಎಂದವರು ಹೇಳಿದರು.ಭಾರತೀಯ ಸೇನೆಯೂ ಈ ಬಾರಿಯ ಉದ್ಯೋಗಮೇಳದಲ್ಲಿ ಭಾಗವಹಿಸಲಿದೆ.ಸುಮಾರು 150ರಷ್ಟು ಕಂಪೆನಿಗಳು, 25ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೀನಿಯರ್ ಪ್ಲೇಸ್ ಮೆಂಟ್ ಆಫೀಸರ್ ಅಮಿತ್ ಶೆಟ್ಟಿ, ಉಪನ್ಯಾಸಕಿ ಸೌಮ್ಯ ಹರೀಶ್ ಉಪಸ್ಥಿತರಿದ್ದರು. ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಈ ಕನಸು.ಕಾಂ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗಮೇಳದ ಮಾಧ್ಯಮ ಸಹಭಾಗಿತ್ವ ಹೊಂದಿದೆ.

1 comments:

ಕೆ ಜಿ ಎನ್ said...

ಇದರಲ್ಲಿ ಭಾಗವಹಿಸಲು ಆನ್ ಲೈನ್ ರಿಜಿಸ್ಟ್ರೇಶನ್ ವ್ಯವಸ್ಥೆ ಇದೆಯೇ?

Post a Comment