ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:57 PM

ವಿಮರ್ಶೆ - 2

Posted by ekanasu

ಸಾಹಿತ್ಯ

ತಂಬೂರಿ ವಿಮರ್ಶೆ: ಅನು ಬೆಳ್ಳೆ. ಕಾದಂಬರಿ ಗಾರರು. ಉಪನ್ಯಾಸಕರು.
ತಂಬೂರಿಯ ಶೃತಿಯೊಂದಿಗೆ...

`ತಂಬೂರಿ' ಇದು ಸುಮತಿ ಕೆ ಸಿ ಭಟ್, ಅದೂರು ಅವರ ಮೊದಲ ಕಥಾ ಸಂಕಲನ. ಇಲ್ಲಿಯ ಕಥೆಗಳನ್ನು ಓದುವಾಗ ಇದು ಲೇಖಕಿಯ ಮೊದಲ ಕಥಾ ಸಂಕಲನವೆಂದರೆ ಆಶ್ಚರ್ಯವಾಗುತ್ತದೆ. ಇಲ್ಲಿಯ ಕಥೆಗಳೆಲ್ಲ `ಮೆಚ್ಯೂರ್ಡ್ ' ಅನಿಸಿರುವುದರಿಂದ ಒಬ್ಬ ಕಥೆಗಾರ್ತಿಯಾಗಿ ಗುರುತಿಸಿಕೊಳ್ಳುವಲ್ಲಿ ಸಫಲರಾಗಿದ್ದರೆ ಎಂದರೆ ಸುಳ್ಳಲ್ಲ.

ಜನಪ್ರಿಯ ಕಥಾಶೈಲಿಯು ಓದುಗನನ್ನು ಹಿಡಿದಿಟ್ಟು ಓದಿಸುವಂತೆ ಪ್ರೇರೆಪಿಸುತ್ತದೆ. ಈ ರೀತಿಯ ಸೆಳೆತ ಇಲ್ಲಿಯ ಎಲ್ಲಾ ಕಥೆಗಳಲ್ಲಿರುವುದರಿಂದ ಓದುಗನಿಗೆ ಕುತೂಹಲವನ್ನುಂಟು ಮಾಡುತ್ತದೆ. ಸಾಮಾಜಿಕ ಕಥನ ಶೈಲಿಯಲ್ಲಿ ಕಥೆಗಳು ಓದುಗನಲ್ಲಿ ಉಳಿಯಬೇಕಾದರೆ ಯಾವುದಾದರೊಂದು ಪಾತ್ರ ಅನುಕಂಪವನ್ನು ಗಿಟ್ಟಿಸುವಂತಿರುವುದು ಕಥೆಗಾರಿಕೆಯ ಒಂದು ತಂತ್ರ ಮಾತ್ರ.

ಇಲ್ಲಿಯ ಬಹುತೇಕ ಎಲ್ಲಾ ಕಥೆಗಳಲ್ಲಿ `ಅನುಕಂಪ' ಹುಟ್ಟಿಸುವ ಪಾತ್ರಗಳು ಸೃಷ್ಟಿಯಾಗಿವೆ. ಇವು ಓದುಗನನ್ನು ತಲುಪಬಲ್ಲವಾದರೂ ಎಲ್ಲಾ ಕಥೆಗಳು ಸಕ್ಸಸ್ ಆಗಲಾರವು. ಆದರೆ ಇಲ್ಲಿ ದು:ಖಾಂತ್ಯವಾಗಿರುವ ಕಥೆಗಳು ಕೂಡ ಮೆಚ್ಚುಗೆಯಾಗುವಂತೆ ಇವೆ. ಅನುಕಂಪ ಯಾವಾಗ ಉದ್ಭವವಾಗುತ್ತದೆಯೆಂದರೆ ಎಲ್ಲಿ ಸಮಸ್ಯೆಯೊಂದಕ್ಕೆ ಸರಿಯಾದ ಪರಿಹಾರ ಸಿಗದೆ ಹೋಗುತ್ತದೋ ಆಗ ಮಾತ್ರ ಅನ್ನುವುದು ನನ್ನ ಅನಿಸಿಕೆ.

ಇದು ಕೆಲವೊಮ್ಮೆ ಪಾತ್ರಗಳ ಸೋಲಿಗೂ ಕಾರಣವಾಗಬಹುದು. ಓದುಗ ಹೀಗಾಗಬಾರದಿತ್ತು, ಹೀಗೂ ಪಾತ್ರಕ್ಕೆ ಪರಿಹಾರ/ ನ್ಯಾಯ ಒದಗಿಸಬಹುದಿತ್ತು ಎಂದು ಸೂಚಿಸುತ್ತಾನೆ. ಈ ದ್ವಂದ್ವತೆಯು ಕಥೆಯನ್ನು ಇನ್ನೂ ಪರಿಣಾಮಕಾರಿಯಾಗಿಯೂ ಬರೆಯಬಹುದಿತ್ತು ಅನಿಸುವಂತೆ ಮಾಡುತ್ತದೆ. ಆದರೆ ಆದೂರು ಅವರಿಗೆ ಅವೆಲ್ಲವನ್ನೂ ಮೀರಿ ಓದುಗರನ್ನು ಪಡೆದುಕೊಳ್ಳುವ ಶೈಲಿಯೂ ಗೊತ್ತು. ಹಾಗಾಗಿ ಇಲ್ಲಿಯ ಕಥೆಗಳೆಲ್ಲ ಓದುಗನನ್ನು ತಲುಪುವುದಲ್ಲಿ ಎರಡು ಮಾತಿಲ್ಲ.


ಇಲ್ಲಿಯ ಕಥೆಗಳೆಲ್ಲವೂ ಸಾಮಾಜಿಕ ಕಥನಗಳಾದರೂ ಇವು ಸಮಾಜಮುಖಿಯಾಗದೆ ಕೌಟುಂಬಿಕ ಚೌಕಟ್ಟಿನೊಳಗೆ ಉಳಿದು ಬಿಡುತ್ತವೆ. ಅದೂ ಹೆಣ್ಣು ಎದುರಿಸುವ ಸವಾಲುಗಳಿಗೆ ಮುಖ ಮಾಡುತ್ತಾ ಅವುಗಳು ಸಮಸ್ಯೆಯಿಂದ ಜಾರಿಕೊಳ್ಳುವುದು ಸುಲಭವಲ್ಲ. ಕೆಲವೊಂದು ಕಥೆಗಳು ಇಂತಹ ಕ್ಲಿಷ್ಟತೆಯನ್ನು ಬಹಳ ಮಾರ್ಮಿಕವಾಗಿ ಚಿತ್ರಿಸಿ ಪಾತ್ರಗಳಿಗೆ ನ್ಯಾಯ ಒದಗಿಸಿರುವುದನ್ನು ಕಾಣುತ್ತೇವೆ. ಇನ್ನು ಕೆಲವು ಕಥೆಗಳಲ್ಲಿ ಓದುಗನ ನಿರೀಕ್ಷೆಯನ್ನು ಮೀರಿ ತಿರುವು ಪಡೆಯುತ್ತವಾದರೂ ಇವು ಪೂರ್ವ ನಿರ್ಧರಿತವಾದಂತೆ `quick end’ ಕಾಣುತ್ತವೆ. ಇಲ್ಲಿ ಕಥೆಗಳನ್ನು ಇನ್ನೂ ಬೆಳೆಸಬಹುದಿತ್ತೇನೋ ಅನಿಸುತ್ತದೆ.

ಇನ್ನೊಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಲ್ಲಿಯ ಕಥೆಗಳ ಕ್ಯಾನ್ವಾಸ್. ಒಂದೊಂದು ಕಥೆಯೂ ಒಂದೊಂದು ಒಳ್ಳೆಯ ಕಾದಂಬರಿಯ ವ್ಯಾಪ್ತಿಯನ್ನು ಹೊಂದಿದೆ. ಬಹುಷ: ಲೇಖಕಿ ಕಾದಂಬರಿ ಬರೆಯುವ ಪ್ರಯತ್ನವನ್ನು ಮಾಡಿದಿದ್ದರೆ ಓದುಗರಿಗೆ ಒಳ್ಳೊಳ್ಳೆಯ ಕಾದಂಬರಿಗಳು ಸಿಗುತ್ತಿದ್ದವೆನೋ. ಅಂತಹ ಶ್ರೀಮಂತಿಕೆ ಮತ್ತು ವ್ಯಾಪ್ತಿ ಇವರ ಕಥೆಗಳಲ್ಲಿವೆ.

ಜನಪ್ರಿಯ ಶೈಲಿಯ ಕಥೆಗಳಿಗೆ ಅದರದೇ ಆದ ಮಾನದಂಡಗಳಿರುವುದರಿಂದ ಇಲ್ಲಿಯ ಕಥೆಗಳೆಲ್ಲವೂ ಓದುಗವರ್ಗವನ್ನು ಸೃಷ್ಟಿಸಿಕೊಡುವಂತಹವುಗಳು. ಮಾತ್ರವಲ್ಲ, ಓದುಗ ವರ್ಗವನ್ನು ಗೆದ್ದುಕೊಂಡಿರುವಂತಹವುಗಳು. ಲೇಖಕಿಯವರಿಂದ ಇನ್ನಷ್ಟು ಕೃತಿಗಳನ್ನು ಬಯಸೋಣ ಅನ್ನುವ ಆಶಯ ನಮ್ಮದು.

0 comments:

Post a Comment