ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:31 PM

ಭಾಗ - 3

Posted by ekanasu

ಬರಡು ಭೂಮಿಯಲ್ಲೊಂದು ಹಸಿರ ಕ್ರಾಂತಿ...
ನಿನ್ನೆಯಿಂದ...

ಪುರುಷೋತ್ತಮ ಭಟ್ಟರು ಸುಮ್ಮನೆ ಕೂರುವ ಜಾಯಮಾನದವರಲ್ಲ.ಒಂದರೆಕ್ಷಣವಿದ್ದರೂ ಅವರ ತಲೆಯಲ್ಲಿ ಸಾವಿರ ಯೋಚನೆಗಳು ಹೊರಳುತ್ತಿರುತ್ತವೆ. ಆ ಕಾರಣಕ್ಕಾಗಿಯೇ ಪುರುಷೋತ್ತಮ ಭಟ್ಟರ ಭೂಮಿ ಬರಡಾಗದೆ ಉಳಿಯದೆ ಅದೊಂದು ಹಸನಾಗಿ ಕಾಣುತ್ತಿದೆ.ಭಟ್ಟರ ಹಟ್ಟಿಯ ತುಂಬಾ ಜಾನುವಾರುಗಳು. ಆ ಜಾನುವಾರುಗಳೇ ಭಟ್ಟರ ಭೂಮಿ ಹಸನಾಗಲು ಒಂದು ಪ್ರಮುಖ ಕಾರಣವೂ ಹೌದು... ಆ ಕೊಟ್ಟಿಗೆಯಲ್ಲಿ ಶೇಖರಣೆಗೊಂಡ ಸೆಗಣಿ, ಗಂಜಲು, ಇತರೆ ವಸ್ತುಗಳನ್ನು ಬಯೋಡೈಜೆಸ್ಟರ್ ಮೂಲಕ ಕೃಷಿಗೆ ಬಳಸುವುದೇ ಈ ಭಟ್ಟರ ಕೃಷಿಯ ಯಶೋಗಾಥೆಯ ಪ್ರಮುಖ ಅಂಶ.

ಸೂರ್ಯನ ಶಾಖಕ್ಕೆ ತೆರೆದಿಟ್ಟ ಬಯೋಡೈಜೆಸ್ಟರ್ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾಲ್ಕು ವಿವಿಧ ಗುಂಡಿಗಳ ಮೂಲಕ ಈ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಗೊಬ್ಬರದ ಗುಂಡಿಯಲ್ಲಿ ಶೇಖರಣೆಗೊಂಡ ವಸ್ತುಗಳು ಕೊಳೆತು ರಸರೂಪದಲ್ಲಿ ಕೊನೆಯ ಗುಂಡಿಯಲ್ಲಿ ಶೇಖರಣೆಗೊಂಡು ಬಳಕೆಗೆ ರೆಡಿಯಾಗಿರುತ್ತದೆ.
ಇವರ ಗೋ ಶಾಲೆಯಲ್ಲಿರುವ ಕುದುರೆಯ ಮೂತ್ರವನ್ನೂ ಈ ಬಯೋಡೈಜೆಸ್ಟರ್ ಗೆ ಬಳಸಲಾಗುತ್ತದೆ.ಇದು ಹೆಚ್ಚು ಪೊಟಾಷ್ ಅಂಶವನ್ನು ಒಳಗೊಂಡಿದೆ.ಆ ಕಾರಣಕ್ಕೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಭಟ್ಟರ ವಾದ.


ಬಯೋಡೈಜೆಸ್ಟರ್ ನಲ್ಲಿ ರೂಪುಗೊಂಡ ಲಿಕ್ವಿಡ್ ಕೃಷಿಭೂಮಿಗೆ ಸಿಂಪಡಿಸಿದರೆ ಅಲ್ಲಿ ಫಲಸು ಜಾಸ್ತಿ. ಹುಲುಸಾಗಿ ಬೆಳೆ ಬೆಳೆಯುತ್ತದೆ. ತೆಂಗು,ಕಂಗು, ಬಾಳೆ, ಜೋಳ, ಮಾವು, ನೇಪಿಯರ್, ವಿವಿಧ ರೀತಿಯ ತರಕಾರಿ ಹೀಗೆ ಹತ್ತು ಹಲವು ಕೃಷಿಗೆ ಈ ಬಯೋಡೈಜೆಸ್ಟರ್ ಲಿಕ್ವಿಡ್ ಬಳಸಿ ಭಟ್ಟರ ತೋಟದಲ್ಲಿ ಬೆಳೆತೆಗೆಯಲಾಗುತ್ತದೆ. ಈ ಲಿಕ್ವಿಡ್ ಬಳಕೆಯಿಂದಾಗಿ ಇಳುವರಿಯೂ ಜಾಸ್ತಿ.ಖರ್ಚೂ ಕಡಿಮೆ.ಈ ಲಿಕ್ವಿಡ್ ಸರ್ವ ಬೆಳೆಗೆ ಬಹೂಪಯೋಗಿ ಎಂಬುದು ಭಟ್ಟರ ಮಾತು.
ಮಣ್ಣಿಗೆ ನೇರವಾಗಿ ಸಾರ ನೀಡುವುದು ಈ ಲಿಕ್ವಿಡ್ ಮೂಲಕ ಸಾಧ್ಯ. ಕಳೆದ ನಾಲ್ಕು ವರುಷಗಳಿಂದ ಈ ಲಿಕ್ವಿಡ್ ನ್ನು ಸಾಗರದ ವಿವಿಧ ತೋಟಗಳಿಗೆ ಸಿಂಪಡಿಸುವ ಕಾರ್ಯವನ್ನು ಭಟ್ಟರ ತಂಡ ಯಶಸ್ವಿಯಾಗಿ ನಿರ್ವಹಿಸುತ್ತದೆ. ಇದರಿಂದಾಗಿ ತೋಟದ ನಿರ್ವಹಣೆ ಬಹಳ ಸುಲಭ.ತೋಟದ ಮಾಲಿಕನೂ ನಿಶ್ಚಿಂತೆಯಿಂದ ಇರಬಹುದು. ಈ ಲಿಕ್ವಿಡ್ ಬಳಸಿದ ನಂತರ ಇತರೆ ಗೊಬ್ಬರ ತೋಟಕ್ಕೆ ನೀಡುವ ಅಗತ್ಯವಿಲ್ಲ. ಇದಕ್ಕೆ ತಗಲುವ ಖರ್ಚು ಕಡಿಮೆ.ಇಳುವರಿ ಹಲವು ಪಟ್ಟು ಜಾಸ್ತಿ.ಇದನ್ನು ಪ್ರಾಯೋಗಿಕವಾಗಿ 25ಕ್ಕೂ ಅಧಿಕ ಕುಟುಂಬದವರು ಅನುಭವಿಸಿದ್ದಾರೆ. ಈ ರೀತಿ ಭಟ್ಟರ ಯೋಜನೆಗಳು ಸಾಗುತ್ತಿವೆ.

ಯಾವುದೇ ಉದ್ಯಮವಾಗಲಿ ಜವಾಬ್ದಾರಿ ಎಂಬುದು ಅತೀ ಮುಖ್ಯ. ಆ ಜವಾಬ್ದಾರಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿದರೆ ಉದ್ಯಮದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಭಟ್ಟರ ವಾದ.ಅದನ್ನು ಅವರು ಮಾಡಿ ತೋರಿಸಿದ್ದಾರೆ. ಆ ಮೂಲಕ ಸಾಧಕನೆನಿಸಿಕೊಂಡಿದ್ದಾರೆ.
ಪುರುಷೋತ್ತಮ ಭಟ್ಟರನ್ನು ಸಂಪರ್ಕಿಸಲು 9448814508ದೂರವಾಣಿಯನ್ನು ಸಂಪರ್ಕಿಸಬಹುದು...

- ಹರೀಶ್ ಕೆ.ಆದೂರು
ಟೀಂ ಈ ಕನಸು ಜೊತೆ.

0 comments:

Post a Comment