ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೇ 12 ಮತ್ತು 13ರಂದು ಮೂಡಬಿದಿರೆಯಲ್ಲಿ ಬೃಹತ್ ಉದ್ಯೋಗ ಮೇಳ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಆಳ್ವಾಸ್ ಪ್ರಗತಿ - 2012 ಬೃಹತ್ ಉದ್ಯೋಗ ಮೇಳ ಮೇ. 12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ಸುಮಾರು 150ರಷ್ಟು ವಿವಿಧ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು ಬೃಹತ್ ಸಂಖ್ಯೆಯ ಉದ್ಯೋಗಾವಕಾಶಗಳು ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗಲಿದೆ.ಆಳ್ವಾಸ್ ಸಮೂಹ ಸಂಸ್ಥೆ ಸಂಪೂರ್ಣ ಉಚಿತವಾಗಿ ಈ ಮೇಳವನ್ನು ಆಯೋಜಿಸುತ್ತಿದ್ದು ಇದು ಯಶಸ್ವೀ ಮೂರನೇ ವರುಷದ ಉದ್ಯೋಗಮೇಳವಾಗಿ ಮೂಡಿಬರಲಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಡಬ್ಲ್ಯು ಡಬ್ಲ್ಯು ಡಬ್ಲ್ಯು. ಆಳ್ವಾಸ್ ಪ್ರಗತಿ .ಕಾಂ ಎಂಬ ಉದ್ಯೋಗಮೇಳದ ಮಾಹಿತಿಗಳನ್ನೊಳಗೊಂಡ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿ ಮಾತನಾಡಿದರು.

150 ಕಂಪೆನಿಗಳ ನಿರೀಕ್ಷೆ

ಈ ಬಾರಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ವಿವಿಧ ಸ್ತರಗಳ 150 ಕಂಪೆನಿಗಳು ಭಾಗವಹಿಸಲಿದ್ದು ಬೃಹತ್ ಸಂಖ್ಯೆಯ ಉದ್ಯೋಗಾವಕಾಶಗಳು ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗಲಿದೆ. ಸುಮಾರು 25ಸಾವಿರ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಗತಿ - 2012ರ ತಂಡ ಕಾರ್ಯೋನ್ಮುಖವಾಗಿದ್ದು ವಿವಿಧ ಹಂತಗಳಲ್ಲಿ ಸಂಪರ್ಕ ಕಾರ್ಯಗಳು, ತರಬೇತಿ ಪೂರಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ತರಬೇತಿ - ಕಾರ್ಯಾಗಾರ


ಆಳ್ವಾಸ್ ಎಜುಕೇಷನ್ ಫೌಂಡೇಷನ್ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಪೂರಕ ಮಾಹಿತಿಗಳನ್ನು , ಸಮಗ್ರ ತರಬೇತಿಯನ್ನು ನೀಡುವ ಮೂಲಕ ಔದ್ಯಮಿಕ ವಲಯದಲ್ಲಿ ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಸರ್ವತೋಮುಖ ಪ್ರಯತ್ನಗಳನ್ನು ಕೈಗೊಳ್ಳಿತ್ತಿದೆ. ಇದಕ್ಕಾಗಿ ನಿರಂತರ ಶ್ರೇಷ್ಠ ತರಬೇತುದಾರರಿಂದ ತರಬೇತಿ, ಮಾಹಿತಿ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಕ್ಯಾಂಪಸ್ ಪ್ಲೇಸ್ ಮೆಂಟ್ ನಡೆಸುವ ಕಾರ್ಯವೂ ಸಂಸ್ಥೆಯಲ್ಲಿ ನಿರಂತರ ನಡೆಯುತ್ತಿದೆ.


ಯಶಸ್ವೀ ಉದ್ಯೋಗಮೇಳ
ಕಳೆದ ವರುಷ ಆಳ್ವಾಸ್ ಪ್ರಗತಿ -2011 ಯಶಸ್ವಿಯಾಗಿ ಪೂರೈಸಿದ್ದು ಸುಮಾರು 143 ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. 300ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ 15,000ಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಿದ್ದರು. ಸುಮಾರು 3 ಸಾವಿರ ಮಂದಿಗೆ ಉದ್ಯೋಗಮೇಳದಲ್ಲಿ ಉದ್ಯೋಗ ಪ್ರಾಪ್ತವಾಗಿದ್ದು ಸಂತಸ ತಂದಿದೆ ಎಂದು ಡಾ. ಆಳ್ವ ತಿಳಿಸಿದರು.

ಮುಕ್ತ ಅವಕಾಶ
ಉದ್ಯೋಗ ಮೇಳ ಕೇವಲ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿರದೆ, ಸಮಾಜದ ಎಲ್ಲಾ ಸ್ತರಗಳ, ಎಲ್ಲಾ ಆಸಕ್ತ ಉದ್ಯೋಗಾಕಾಂಕ್ಷಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನೇಮಕಾತಿಯನ್ನು ಚುರುಕುಗೊಳಿಸುವ ಕಾರ್ಯವನ್ನು ಸಂಸ್ಥೆಯ ಉದ್ಯೋಗಮಾಹಿತಿ ಕೇಂದ್ರ ನಡೆಸುತ್ತಿದ್ದು, ಅಭ್ಯರ್ಥಿಗಳಿಗೆ ಬೇಕಾದ ಸೂಕ್ತ ಮಾಹಿತಿ, ಮಾರ್ಗದರ್ಶನಗಳನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತಿದೆ. ತಾಂತ್ರಿಕ ತರಬೇತಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಶೈಕ್ಷಣಿಕ ವರ್ಷದುದ್ದಕ್ಕೂ ಆಳ್ವಾಸ್ ಸಂಸ್ಥೆಯ ವಿದ್ಯಾಥರ್ಿಗಳಿಗೆ ನಾಯಕತ್ವ, ಸಾಫ್ಟ್ ಸ್ಕಿಲ್, ಆಫ್ಟಿಟ್ಯೂಡ್ ಸ್ಕಿಲ್ಸ್, ಸೇರಿದಂತೆ ಇತರೆ ತರಬೇತಿಗಳು ಲಭ್ಯವಾಗುತ್ತಿವೆ.

ವ್ಯವಸ್ಥಿತ ಮೇಳ
ಆಳ್ವಾಸ್ ಪ್ರಗತಿ ಎಂಬುದು ಒಂದು ವ್ಯವಸ್ಥಿತ ಹಾಗೂ ಅಷ್ಟೇ ಪಾರದರ್ಶಕವಾದಂತಹ ಉದ್ಯೋಗ ಮೇಳವಾಗಿದೆ. ಮೇಳಕ್ಕೆ ಬರುವ ಕಂಪೆನಿಗಳಿಂದ ಮುಂಚಿತವಾಗಿಯೇ ಉದ್ಯೋಗಾವಕಾಶಗಳ ಲಭ್ಯತೆಯ ಪಟ್ಟಿಯನ್ನು ಸಂಗ್ರಹಿಸಲಾಗುತ್ತಿದ್ದು ಇದರಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಸ್ಪಷ್ಟ ಚಿತ್ರಣ ಲಭಿಸಿದಂತಾಗುತ್ತದೆ. ವಿವಿಧ ಕಂಪೆನಿಗಳು ಒಂದೇ ಸೂರಿನಡಿ ಬಂದು ಸೇರುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ಸಾಮಥ್ರ್ಯಕ್ಕನುಗುಣವಾದ ಉದ್ಯೋಗವನ್ನು ಆಯ್ಕೆಮಾಡಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿ ಈ ಮೇಳ ಮೂಡಿಬರಲಿದೆ.


ವೈಶಿಷ್ಠ್ಯತೆ

* ಉದ್ಯೋಗಮೇಳದಲ್ಲಿ ಭಾಗವಹಿಸಲಿಚ್ಛಿಸುವವರು ಆನ್ ಲೈನ್ ಮೂಲಕ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಆಳ್ವಾಸ್ ಪ್ರಗತಿ.ಕಾಂ ಲಾಗ್ ಇನ್ ಮಾಡುವ ಮೂಲಕ ಅರ್ಜಿ ಸಲ್ಲಿಸಲಬಹದು. ಅಥವಾ ಇ ಮೇಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ದೂರವಾಣಿ ಮೂಲಕ ನೋಂದಾಯಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ : 08258 - 237104 (ಎಕ್ಸ್ಟೆಂಷನ್ 237)/7353756207 ಸಂಪರ್ಕಿಸಬಹುದು.
* ಉದ್ಯೋಗಮೇಳ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
* ಉದ್ಯೋಗಮೇಳದಲ್ಲಿ ಭಾಗವಹಿಸಲಿಚ್ಛಿಸುವ ಉದ್ಯೋಗಾಕಾಂಕ್ಷಿಗಳು ಸ್ವ ಪರಿಚಯ, ಅಂಕಪಟ್ಟಿಗಳ ಝೆರಾಕ್ಸ್ ಪ್ರತಿ, ಭಾವಚಿತ್ರ ಹಾಗೂ ಇತರೆ ದಾಖಲೆಗಳ ಐದು ಪ್ರತಿಗಳನ್ನು ತರಬೇಕಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಟ್ರಸ್ಟಿ ವಿವೇಕ್ ಆಳ್ವ, ಉಪನ್ಯಾಸಕ ಹಾಗೂ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಪ್ಲೇಸ್ ಮೆಂಟ್ ಆಫೀಸರ್ ಅಮಿತ್ ಶೆಟ್ಟಿ, ಪ್ಲೇಸ್ ಮೆಂಟ್ ಕೋ - ಆರ್ಡಿನೇಟರ್ (ಐಟಿ) ಅರುಣ್ ಡಿ'ಸೋಜ, ಬ್ಯಾಂಕಿಂಗ್ ಫೈನಾನ್ಶಿಯಲ್ ಸರ್ವೀಸಸ್ ಪ್ಲೇಸ್ ಮೆಂಟ್ ಕೋ - ಆರ್ಡಿನೇಟರ್ ಮಿಧೀಶ್ , ರವಿಚಂದ್ರನ್ , ಶರತ್ ಉಪಸ್ಥಿತರಿದ್ದರು.

0 comments:

Post a Comment