ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಕರಾವಳಿಯ ಹಲವು ಭಾಗಗಳಲ್ಲಿ ಇಂದೂ "ಬೇಸಿಗೆ ಮಳೆಯ"ಒಡ್ಡೋಲಗದ ಅಬ್ಬರ.ಗುಡುಗು ಗುಡುಗಿದೆ...ಮಿಂಚು ಮಿಂಚಿದೆ...ವಿದ್ಯುತ್ ಕಣ್ಣಾಮುಚ್ಚಾಲೆಯಾಡಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯ ಹಲವು ಭಾಗಗಳಲ್ಲಿ ಮಳೆಯ ಸಿಂಚನವಾಗಿದ್ದು ಆ ಭಾಗಗಳೆಲ್ಲವೂ ಬಿಸಿಲ ಬೇಗೆಗೆ ಹೊತ್ತಿ ಉರಿದಂತಾಗಿದೆ.ಉಷ್ಣಾಂಶದಲ್ಲಿ ತೀವ್ರ ಏರಿಕೆಯಾಗಿರುವುದರಿಂದಾಗಿ ಜನ ಅಕ್ಷರಶಃ ದಿಕ್ಕೆಟ್ಟುಹೋಗಿದ್ದಾರೆ.ದೇಹಪೂರ್ತಿ ಬೆವರು ಸುರಿಸುತ್ತಾ ಕಾಲಕಳೆಯುವಂತಾಗಿದೆ.


ಈ ಬಾರಿ ಬಿಸಿಲ ಬೇಗೆ ಜಾಸ್ತಿ ಎಂಬುದು ಹಲವರ ವಾದ.ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ನೀರಿನ ಕೊರತೆ ಎದ್ದುಕಾಣತೊಡಗಿದೆ. ಯಾವೊಂದು ನದಿಯಲ್ಲೂ ನೀರ ಹರಿವು ಕಾಣುತ್ತಿಲ್ಲ... ಬತ್ತಿ ಬರಡಾದ ನದಿಗಳು, ಹೊಳೆ, ಕೆರೆಗಳು ಕಂಡುಬರುತ್ತವೆ. ಗಟ್ಟದ ಮೇಲ್ಭಾಗದ ಪ್ರದೇಶಗಳ ಸ್ಥಿತಿಯೇ ಇದೀಗ ಗಟ್ಟದ ಕೆಳಭಾಗದಲ್ಲೂ ಕಾಣುವಂತಾಗಿದೆ. ಆಗೊಮ್ಮೆ ಈಗೊಮ್ಮೆ ಬಾನಲ್ಲಿ ಮೂಡಿಮರೆಯಾಗುವ ಮಿಂಚು ಗುಡುಗುಗಳು ನಿರೀಕ್ಷೆ ಮೂಡಿಸುತ್ತವೆ...ಮಳೆ ಬರಬಹುದೇ...? ಬಂದರೆ ಉತ್ತಮ ಮಳೆಯಾಗಬಹುದೇ...ಅಥವಾ ಮತ್ತೆ ಸೆಖೆ ಹೆಚ್ಚಿಸಲು ನಾಲ್ಕು ಹನಿ ಬಿದ್ದು ಹೋಗಬಹುದೇ...? ಎಂಬುದಾಗಿ. ಚರಿಪಿರಿ ಮಳೆಯಿಂದ ಕೃಷಿಗೆ ಹಾನಿ.ಇದ್ದ ಫಸಲೂ ಹಾಳಾಗುವ ಭಯ. ಅಡಿಕೆ ಸಿಂಗಾರಗಳು ಬೆಂದು ಹೋಗುವ ಹೆದರಿಕೆ. ಅಂಗಳದಲ್ಲಿಡುವ ಅಡಿಕೆಯನ್ನು ಒಳಗೊಯ್ಯುವುದು ಹೊರಗೆ ಹಾಕುವುದೇ ಕೆಲಸ ಎಂಬ ಕೃಷಿಕರ ಅಳಲು...ಇವೆಲ್ಲದರ ನಡುವೆ ವರುಣ ದೇವ ನಿರ್ಧಾರ ಮಾಡಬೇಕು.ಯಾವ ರೀತಿಯ ಮಳೆ ಸುರಿಸಬೇಕೆಂಬುದಾಗಿ...!

ದಕ್ಷಿಣ ಕನ್ನಡದ ಕೇಂದ್ರ ಸ್ಥಾನ ಮಂಗಳೂರಿನಲ್ಲಂತೂ ನೀರಿಗೆ ತೀವ್ರ ತತ್ವಾರ. ಜಿಲ್ಲೆಯ ಇತರೆ ತಾಲೂಕುಗಳ ಸ್ತಿತಿಯೂ ಇದರಿಂದ ಹೊರತೇನಲ್ಲ.
ಗ್ರಾಮೀಣ ಪ್ರದೇಶದಲ್ಲೂ ಈಗ ತೋಟಕ್ಕೆ ನೀರು ಹಾಕಲು ತೊಂದರೆಯಿದೆ. ಕುಡಿಯುವ ನೀರಿಗೆ ತೊಂದರೆಯಿಲ್ಲ...ಎಂಬಂತಹ ಸ್ಥಿತಿ. ಹಲವು ತೋಟಗಳು ನೀರಿಲ್ಲದೆ ಅರೂಪವಾಗಿವೆ.

ಕಳೆದ ಮೂರ್ನಾಲ್ಕು ದಿನಗಳಿಂದ ಬೆಳ್ತಂಗಡಿ ತಾಲೂಕಿನ ಹಲವು ಭಾಗ, ಕಾರ್ಕಳ ತಾಲೂಕಿನ ಕೆಲ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಳೆಯಾದರೂ ಭೂಮಿಯಲ್ಲಿ ಮಳೆನೀರು ಇಂಗಿ ಹೋಗಿದೆ. ಇದೀಗ ಮತ್ತೆ ಭೂಮಿ ಬಾಯ್ದೆರೆದು ಕಾದಿದೆ.ಎಲ್ಲಿ ಮಳೆಹನಿ ಸೋಕುವುದೋ ಎಂದು...

ಇಂದೂ ಬಾನಲ್ಲಿ ಗುಡುಗು ಗುಡುಗಿದೆ. ಮಿಂಚು ಮಿಂಚಿದೆ... ವಿದ್ಯುತ್ ಕೈ ಕೊಡುವ ಹಂತದಲ್ಲಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಯ ಪರ್ವದಲ್ಲೇ ಈ ಅನಾಹುತಗಳೂ ಬಿಡದೆ ಕಾಡುತ್ತಿದೆ...ಇದು ಈವರ್ಷಕ್ಕೆ ಮುಗಿದಿಲ್ಲ...ಕಳೆದ ವರುಷದ ಕಥೆಯೂ ಹೀಗೆನೇ...ಮುಂದೆಯೂ ಕೂಡಾ...!

- ನಾಡೋಡಿ.

0 comments:

Post a Comment