ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವೇಣೂರು: ಪರಿಸರದಲ್ಲಿ ಬೇಸಿಗೆಯ ಜಡಿಮಳೆಯಾಗಿದೆ. ಇಂದು ಮುಂಜಾನೆ ನಾಲ್ಕರ ಸುಮಾರಿಗೆ ಅಬ್ಬರದ ಮಳೆ ಸುರಿದಿದೆ. ಗಾಳಿ,ಗುಡುಗು,ಸಿಡಿಲಬ್ಬರವಿಲ್ಲದೆ ಕೇವಲ ರಭಸದ ಮಳೆಹನಿಗಳು ಧರೆಯನ್ನಪ್ಪಳಿಸಿವೆ. ಕಾದ ಇಳೆಗೆ ಮಳೆಯ ಸಿಂಚನ ತಂಪು ಮೂಡಿಸಿದೆ.ಕಳೆದ ಕೆಲದಿನಗಳಿಂದ ಸಾಯಂಕಾಲದ ಹೊತ್ತಿಗೆ ಮಳೆಯಾಗುತ್ತಿತ್ತು. ಈ ವರುಷದಲ್ಲಿ ಇದೇ ಮೊದಲ ಬಾರಿಗೆ ಮುಂಜಾನೆಹೊತ್ತಲ್ಲಿ ಮಳೆಸುರಿದಿದ್ದು ಹವಾಮಾನದಲ್ಲಿ ತಂಪು ಮೂಡುವಂತೆ ಮಾಡಿದೆ. ಸುಮಾರು ಅರ್ಧ ತಾಸುಗಳ ಕಾಲ ಉತ್ತಮ ಮಳೆಯಾಗಿದೆ.ಸವಿ ನಿದ್ದೆಯ ಹೊತ್ತಲ್ಲಿ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

0 comments:

Post a Comment