ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:47 PM

ಮನಮೋಹಕ ಮದರಂಗಿ

Posted by ekanasu

ವೈವಿಧ್ಯ
ನಾಗರ ಪಂಚಮಿ ಮಲೆನಾಡಿನ ಹೆಣ್ಣು ಮಕ್ಕಳಿಗೆ ಏನೋ ಸಂಭ್ರಮ.ಹ್ಞಾಂ ಅದೇನು ಹಬ್ಬಕ್ಕೆ ಮಾಡುವ ಸಿಹಿ ತಿನೆಸುಗಳಿಗಲ್ಲ.ಆದರೆ ಹಬ್ಬದಂದು ರಾತ್ರಿ ಗೋರಂಟಿ ಸೊಪ್ಪು ಬೀಸಿ ಹಚ್ಚುವ ಮದರಂಗಿಗಾಗಿ.

ಸಂಜೆಯೇ ಗಿಡದಿಂದ ಸೊಪ್ಪು ಬಿಡಿಸಿ ವೀಳ್ಯದೆಲೆ,ಅಡಿಕೆ,ಸುಣ್ಣವನ್ನೆಲ್ಲಾ ಹಾಕಿ ರುಬ್ಬಿಟ್ಟ ಮೆಹೆಂದಿಯ ಈ ಪರಿಮಳ ಹೆಣ್ಣುಮಕ್ಕಳನ್ನು ಇನ್ನಷ್ಟು ಕಾತರರನ್ನಾಗಿಸುತ್ತದೆ.ರಾತ್ರಿ ಕೈ,ಕಾಲು ಉಗುರು,ಬೆರಳುಗಳಿಗೆಲ್ಲಾ ಮದರಂಗಿ ಹಚ್ಚಿಸಿಕೊಂಡು ಮರುದಿನ ಕೆಂಪು ಕೆಂಪಾಗಿ ಕಾಣುವ ಕೈ ಕಾಲುಗಳ ಚಂದ ನೆನೆಸುತ್ತಾ ಕನಸು ಕಾಣ ಹೊರಟವರಿಗೆ ನಿದ್ದೆ ಬಂದರೆ ತಾನೆ?!..ಯಾವಾಗ ಬೆಳಗಾಗಿ ಮನೆ-ಊರ ಮಂದಿಗೆಲ್ಲಾ ಕೆಂಪು ಕೈಯ ಚಿತ್ತಾರ ತೋರಿಸೇವೆಂಬ ಆಸೆ ನಿರೀಕ್ಷೆ ನಿದ್ದೆಯನ್ನು ಅರ್ಧ ಓಡಿಸಿರುತ್ತದೆ.

ಓಹ್! ಇದೆಲ್ಲಾ ಈಗ ಮರೀಚಿಕೆ.ಈ ಖುಷಿಯ ಪದ್ದತಿಯೆಲ್ಲಾ ಮರೆಯಾಗುತ್ತಿರುವುದು ನಮ್ಮ ಗಡಿಬಿಡಿಯ ಬದುಕಿನ ಪಯಣದ ಓಟವನ್ನು ಜ್ಙಾಪಿಸುತ್ತದೆ.ಕನಸು ಕಾಣಲೂ ಪುರುಸೊತ್ತಿಲ್ಲದ ಜಂಜಡದ ಬದುಕಿಗೆ ಯಾರಿಗಾದರೂ ಸೊಪ್ಪು ತಂದು ರುಬ್ಬುವ ಪುರುಸೊತ್ತೆಲ್ಲಿ,ಹಚ್ಚಸಿಕೊಳ್ಳಲು ಮನೆಗಳಲ್ಲಿ ಹಿರಿಯರೆಲ್ಲಿ???

ಬಹಳ ಫಾಸ್ಟ ಜಮಾನವಿದು.ಆಧುನಿಕ ಯುಗ ಎಲ್ಲದಕ್ಕೂ ಪರ್ಯಾಯವನ್ನು ನೀಡಿರುವಂತೇ ಇದಕ್ಕೆ ಸಹಾ ನೀಡಿದೆ. .ಬಗೆ ಬಗೆಯ ಮೆಹೆಂದಿ ರೆಡಿ ಕೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರಿಗೂ ಇಂದು ಪ್ರಾಕೃತಿಕ ಪ್ರಾಡಕ್ಟ್ ಬೇಡವಾಗಿದೆ.ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಈ ಕೋನ್ಗಳು ಹಚ್ಚಲೂ ಬಹಳ ಸುಲಭ.ಹಚ್ಚಿದ ಅರ್ಧ ಗಂಟೆಯಲ್ಲಿ ರಂಗು ಮೂಡಿಸುವ ಕೋನ್ಗಳಿಗೆ ಮರುಳಾಗದವರಿದ್ದಾರೆಯೇ?!


ಕೋನ್ಗಳು ದೊರೆತಂತೆ ಇಂದು ಮಾರುಕಟ್ಟೆಯಲ್ಲಿ ವಿವಿಧ ಮೆಹೆಂದಿ ಡಿಸೈನ್ಗಳೂ ಲಭ್ಯ.ಅರೇಬಿಕ್,ಪಾಕ್ ಮೆಹೆಂದಿ ಡಿಸೈನ್ಗಳು ಬಹಳಷ್ಟೇ ಪ್ರಸಿದ್ಧಿ.ಮದುವೆಗಳಲ್ಲಿ ಮದುಮಗಳಿಗೆ ಬ್ಯೂಟಿ ಪಾರ್ಲರಿನ ಜನ ಹಾಕುವ ಮೆಹೆಂದಿ ಅತ್ಯಂತ ಪ್ರಿಯವಾಗಿದೆ.ವಿವಿಧ ದೇಶಗಳ ವಿಶಿಷ್ಟ ಮೆಹೆಂದಿ ಮದುಮಗಳ ಕೈ ಅಲಂಕರಿಸಿ ನೋಡುಗರ ಕಣ್ಮನ ಸೆಳೆಯುತ್ತವೆ.ರಂಗು ರಂಗಿನ ಕೆಂಪು,ಕಪ್ಪು ಮೆಹೆಂದಿ ಬಣ್ಣ ಕೈ-ಕಾಲುಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.ಆದರೆ ಈ ಸೌಂದರ್ಯ ಪ್ರಸಾದನ ಎಷ್ಟು ಉಪಕಾರಿ?

ಕೆಲವು ಕಂಪನಿಗಳು ಕೋನ್ ತಯಾರಿಕೆಗೆ ಕೆಳ ದರ್ಜೆಯ ರಾಸಾಯನಿಕ ಬಳಸುವುದರಿಂದ ಅದು ಚರ್ಮದ ಅಲರ್ಜಿ ಯನ್ನುಂಟು ಮಾಡುವ ಸಾಧ್ಯತೆ ಬಹಳಷ್ಟಿರುತ್ತದೆ.ಹಾಗಾಗಿ ಆದಷ್ಟು ಪ್ರಕೃತಿ ದತ್ತ ಮದರಂಗಿಯನ್ನು ಉಪಯೋಗಿಸುವುದೊಳಿತು ಅಥವಾ ಅದಷ್ಟು ಒಳ್ಳೆಯ ಕಂಪನಿಯ ಕೋನ್ಗಳ ಬಳಕೆ ಒಳಿತು.

ನಿಮ್ಮ ಕೈ ಕಾಲುಗಲ ಸೌಂದರ್ಯ ಹೆಚ್ಚಿಸುವ ಭರದಲ್ಲಿ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ


* ಉಗುರುಗಳಿಗೆ ಸಾಧ್ಯವಾದಷ್ಟು ಮದರಂಗಿ ಸೊಪ್ಪನ್ನೇ ಉಪಯೋಗಿಸಿ.ಇದು ಔಷಧೀಯ ಗುಣಗಳನ್ನು ಒಳಗೊಂಡಿದೆ.
* ಮಾರುಕಟ್ಟೆಯಲ್ಲಿ ಲಭ್ಯವಿರುವ ಮೆಹೆಂದಿ ಕೋನ್ಗಳಲ್ಲಿ ರಾಸಾಯನಿಕವೇ ಅಧಿಕವಾಗಿರುವುದರಿಂದ ಬಳಕೆ ಸೀಮಿತವಾಗಿರಲಿ.
* ಮಕ್ಕಳ ಕೈ ಕಾಲುಗಳಿಗೆ ಇದನ್ನು ಆದಷ್ಟು ಕಡಿಮೆ ಬಳಸಿ- ಸೌಮ್ಯ ಆದೂರು.

1 comments:

Anonymous said...

Congrates mam very nice article about MehendI...

Darshan...

Post a Comment