ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಬೆಂಗಳೂರು : ವಿಶ್ವವಿದ್ಯಾಲಯ ಅನುದಾನ ಆಯೋಗ-ಯುಜಿಸಿ ನೆಟ್ ಪರೀಕ್ಷೆಗೆ ದೇಶದಾದ್ಯಂತ ಅಭ್ಯರ್ಥಿಗಳಿದ್ದರೂ ಇದೀಗ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಯುಜಿಸಿ ಅಭ್ಯರ್ಥಿಗಳ ಮೊಣಕೈಗೆ ತುಪ್ಪ ಸವರುತ್ತಿದೆಯೇ ಎಂಬ ಸಂದೇಹ ಮೂಡಿಸಿದೆ. ಕಾರಣ ಈ ಬಾರಿ ಯುಜಿಸಿ - ನೆಟ್ ಪರೀಕ್ಷೆಗಳ ಮೂರೂ ಪ್ರಶ್ನೆ ಪತ್ರಿಕೆಗಳು ಆಬ್ಜೆಕ್ಟಿವ್ ಆಗಿ ಪರಿವರ್ತನೆಗೊಂಡ ಹಿನ್ನಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಸಂಖ್ಯೆ ಅಧಿಕ.ಆದರೆ ಈ ಎಲ್ಲಾ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ನೋಂದಣಿ ನಡೆಸಬೇಕಾಗಿದ್ದು ಕಳೆದ ಕೆಲ ದಿನಗಳಿಂದ ಸಂಬಂಧಿಸಿದ ವೆಬ್ ನಿರಂತರ ಕೈಕೊಡುತ್ತಿದೆ. ಪರಿಣಾಮ ಅಭ್ಯರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಪರೀಕ್ಷೆಗೆ ಕೇವಲ ಆನ್ ಲೈನ್ ಮೂಲಕ ಮಾತ್ರ ಅಭ್ಯರ್ಥಿಗಳು ನೋಂದಣಿ ನಡೆಸಲು ಅವಕಾಶವಿದೆ.http://www.ugcnetonline.in ಎಂಬ ಈ ಜಾಲತಾಣದ ಮೂಲಕ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಸಲ್ಲಿಸಿ ನೋಂದಣಿ ಪಡೆದುಕೊಳ್ಳಬಹುದು.ಆದರೆ ಕ್ಲಿಷ್ಟಕರ ರೀತಿಯ ಈ ನೋಂದಣಿಗೆ ಇದೀಗ ತೊಡಕುಂಟಾಗಿದೆ. ರಾಷ್ಟ್ರದಾದ್ಯಂತ ಅಭ್ಯರ್ಥಿಗಳು ನಿರಂತರವಾಗಿ ಪ್ರವೇಶಪಡೆಯಲು ಹವಣಿಸುತ್ತಿರುವ ಹಿನ್ನಲೆಯಿಂದಾಗಿ ಈ ತಾಣ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.ಪರಿಣಾಮ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ.


ಈ ಹಿಂದೆ ಇದೇ ಏ.30 ಅಭ್ಯರ್ಥಿಗಳ ಪ್ರವೇಶಕ್ಕೆ ಕೊನೆಯ ದಿನ ಎಂದು ನಿಗಧಿಯಾಗಿತ್ತು.ಇದೀಗ ಹಠಾತ್ ಈ ದಿನವನ್ನು ಮುಂದೂಡಿ ಮೇ.2ಕೊನೆಯ ದಿನ ಎಂಬುದಾಗಿ ಪ್ರಕಟಿಸಲಾಗಿದೆ.ಏನೇ ಆದರೂ ಅಭ್ಯರ್ಥಿಗಳು ನಿರಂತರ ಪರದಾಡುತ್ತಿದ್ದಾರೆ.ಯುಜಿಸಿ ವೆಬ್ ಮಾತ್ರ ಅಭ್ಯರ್ಥಿಗಳಿಗೆ ನಿರಂತರ ಕೈ ಕೊಡುತ್ತಲೇ ಬಂದಿದೆ.

- ಟೀಂ ಈ ಕನಸು.

0 comments:

Post a Comment