ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಜಿತೇಂದ್ರ ಹಿಂಡುಮನೆ ಇದೀಗ ಈ ಕನಸು.ಕಾಂ ನ ಬ್ಲಾಗ್ ಲೋಕ ಸೇರಿಕೊಂಡಿದ್ದಾರೆ. http://hindumane.blogspot.in ಇವರ ಬ್ಲಾಗ್. ಹಲವು ವೈವಿಧ್ಯಮಯ ಲೇಖನಗಳಿವೆ. ಇವರ ಬ್ಲಾಗ್ ನೊಳಗಿದ್ದ ಎರಡು ಲೇಖನಗಳನ್ನು ಈ ಕನಸು.ಕಾಂ ಓದುಗರಿಗಾಗಿ ನೀಡುತ್ತಿದ್ದೇವೆ. ಓದಿ...ಅಭಿಪ್ರಾಯಿಸಿ...


ಉತ್ತರಕನ್ನಡದ ಗೋಕರ್ಣದಿಂದ ಸುಮಾರು ೧೧ ಕಿಮೀ ದೂರ ಹಾಗು ಹೆದ್ದಾರಿಯಿಂದ ೦.೫ ಕಿಮೀ ದೂರದಲ್ಲಿ ಮಿರ್ಜಾನ್ ಇದೆ.
ನಾವು ಕಾಣಬಹುದಾದ ಉತ್ತಮ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯೂ ಒಂದು. ಚರಿತ್ರೆಯಿಂದ ತಿಳಿದು ಬರುವುದೇನೆಂದರೆ, ಗೇರುಸೊಪ್ಪೆಯ ರಾಣಿ ಚೆನ್ನಾಭೈರಾದೇವಿ ಮಿರ್ಜಾನ್ ಕೋಟೆಯನ್ನು ೧೬ನೇ ಶತಮಾನದಲ್ಲಿ ನಿರ್ಮಿಸಿದಳು. ಆಕೆ ಸುಮಾರು ೫೪ ವರ್ಷಗಳ ಕಾಲ ಮಿರ್ಜಾನೆ ಕೋಟೆಯನ್ನು ಕೇಂದ್ರವಾಗಿಟ್ಟಕೊಂಡು ಆಡಳಿತ ನಡೆಸಿದಳು.


ಆಕೆಯ ಕಾಲದಲ್ಲಿ ಕಾರವಾರದಿಂದ ೩೨ ಕಿಮೀ ದೂರವಿರುವ ಮಿರ್ಜಾನ್ ಬಂದರಿನಿಂದ ಕಾಳು ಮೆಣಸು, ಉಪ್ಪು ಅಡಿಕೆ ಹಾಗೂ ಇತರೇ ಸಂಬಾರ ಪದಾರ್ಥಗಳು ವಿದೇಶಕ್ಕೆ ರಫ್ತಾಗುತ್ತಿದ್ದವು.ಇದರಿಂದಾಗಿ ಚೆನ್ನಾಭೈರಾದೇವಿಯನ್ನು ಪೋರ್ಚುಗೀಸರು ಕಾಳುಮೆಣಸಿನ ರಾಣಿ ಎಂದೂ ಕರೆದರು.ಚರಿತ್ರ್ರೆಯಲ್ಲಿ ಮಿರ್ಜಾನ ಕೋಟೆಯ ನಿರ್ಮಾತೃವಿನ ಬಗ್ಗೆ ಹಲವಾರು ಭಿನ್ನ ಅಭಿಪ್ರಾಯಗಳಿವೆ.
ಕೋಟೆಯನ್ನು ಇಬ್ನಬಟೂಟ ಎಂಬ ನವಾಯತ ರಾಜ ಕ್ರಿ.ಶ. ೧೨೦೦ರಲ್ಲಿ ಕಟ್ಟಿದ ಹಾಗೂ ಇದು ಕ್ರಮೇಣ ವಿಜಯನಗರದ ಆಳ್ವಿಕೆಗೆ ಒಳಪಟ್ಟಿತು ಮತ್ತು ಕ್ರಿ.ಶ. ೧೬೦೮ರಲ್ಲಿ ಪೂರ್ವಕರಾವಳಿಯ ಮಿರ್ಜಾನಲ್ಲಿ ಪುನರನಿರ್ಮಾಣವಾಯಿತು.

ಮತ್ತೊಂದು ವಾದದ ಪ್ರಕಾರ ಕ್ರಿ.ಶ. ೧೫೫೨-೧೬೦೬ ರ ಕಾಲದಲ್ಲಿ ರಾಣಿ ಚೆನ್ನಭೈರಾದೇವಿ ಮಿರ್ಜಾನ್ ಕೋಟೆಯನ್ನು ಕಟ್ಟಸಿದಳು.
ಅವಳು ತುಳುವ-ಸಾಳುವ ವಂಶಸ್ಥಳಾಗಿದ್ದು ದೀರ್ಘ ೫೪ ವರ್ಷಗಳ ಕಾಲ ವಿಜಯನಗರ ಸಾಮಂತ ರಾಣಿಯಾಗಿ ಆಡಳಿತ ನಡೆಸಿದಳು.
ಆಕೆ ಜೈನ ಧರ್ಮವನ್ನು ಪಾಲಿಸುತ್ತಿದ್ದು ತನ್ನ ಕಾಲದಲ್ಲಿ ಹಲವಾರು ಜೈನ ಬಸದಿಗಳನ್ನು ಕಟ್ಟಿಸಿದಳು.

ಕೇರಳ ಹಾಗೂ ಕೊಂಕಣ ಸೀಮೆಯಲ್ಲಿ ಪ್ರಚಲಿತವಿದ್ದ ಮಾತೃ ಸಂತಾನದಿಂದ ಅವಳು ರಾಣಿಯಾದಳೆಂದು ತಿಳಿದುಬರುತ್ತದೆ.
ಆಕೆಯ ಆಡಳಿತಕ್ಕೆ ಉತ್ತರ-ದಕ್ಷಿಣಕನ್ನಡ ಜಿಲ್ಲೆಗಳು ಹಾಗೂ ಗೋವಾದ ದಕ್ಷಿಣ ಭಾಗ ಸೇರಿತ್ತು. ಆಗಿನ ಪ್ರಮುಖ ಬಂದರುಗಳು, ಮಲ್ಪೆ, ಮಿರ್ಜಾನ್, ಹೊನ್ನಾವರ ಅಂಕೋಲ ಮತ್ತು ಕಾರವಾರ ಸೇರಿದ್ದವು. ಇಲ್ಲಿಂದ ಸಂಬಾರು ಪದಾರ್ಥಗಳು ಐರೋಪ್ಯ ದೇಶಗಳಿಗೆ ರಫ್ತಾಗುತ್ತಿದ್ದವು.

ತಾಳಿಕೋಟೆ ಕದನದ ನಂತರ ವಿಜಯನಗರ ಪತನವಾಯಿತು ಹಾಗೂ ರಾಣಿಯೂ ಹಿನ್ನೆಡೆ ಅನುಭವಿಸಿ ಶರಾವತಿಯ ಸುರಕ್ಷಿತ ನಡುಗಡ್ಡೆ ಗೇರುಸೊಪ್ಪಯನ್ನು ಸೇರಿದಳೆಂದ ಇತಿಹಾಸದಿಂದ ತಿಳಿದುಬರುತ್ತದೆ.ಮತ್ತೊಂದು ವಾದದ ಪ್ರಕಾರ ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಮಿರ್ಜಾನ್ ಕೋಟೆಯನ್ನು ಕಟ್ಟಿಸಿದನೆಂದೂ, ಇದನ್ನು ೧೬೦೮-೧೬೪೦ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಲಾಯಿತೆಂದು ಹೇಳುತ್ತಾರೆ..

ಇನ್ನೊಂದು ವಾದದ ಪ್ರಕಾರ ಇದು ವಿಜಯನಗರ ಆಳ್ವಿಕೆಗೆ ಒಳಪಟ್ಟಿದ್ದು, ವಿಜಯನಗರ ಪತನಾನಂತರ ಬಿಜಾಪುರ ಸುಲ್ತಾನರು ಇದನ್ನು ವಶಪಡಿಸಿಕೊಂಡು ಗೋವಾದ ಆಡಳಿತಗಾರನಾಗಿದ್ದ ಶರೀಫ್ ಉಲ್ ಮುಲ್ಕ್‌ನ ವಶಕ್ಕೆ ಕೊಟ್ಟರು.
೧೭ನೇ ಶತಮಾನದಲ್ಲಿ ಕೆಳದಿ ಅರಸರ ಆಡಳಿತಕ್ಕೆ ಒಳಪಟ್ಟು ಬಿದನೂರನ್ನು ರಾಜಧಾನಿಯನ್ನಾಗಿ ಹೊಂದಿದ್ದರು. ೧೬೭೬ರಲ್ಲಿ ಕೆಳದಿ ಚೆನ್ನಮ್ಮ ಮಿರ್ಜಾನ್ ವರೆಗಿನ ಪ್ರದೇಶವನ್ನು ಆಳಿದಳು.

ಕೆಳದಿ ಬಸಪ್ಪ ನಾಯಕನ ಮರಣಾ ನಂತರ ಆತನ ಹೆಂಡತಿ ತನ್ನ ೧೭ ವಯಸ್ಸಿನ ದತ್ತು ಪುತ್ರ ಚನ್ನಬಸಪ್ಪನನ್ನು ರಾಜನಾಗಿ ಘೋಷಿಸಿದಳು. ಆದರೆ ಆತ ರಾಜಕಾರಣದಲ್ಲಿ ತಾಯಿಯ ಹಸ್ತಕ್ಷೇಪ ಸಹಿಸದೇ ತನ್ನ ದತ್ತು ತಾಯಿಯನ್ನು ಕೊಲೆ ಮಾಡಿಸಿದ. ಇದರಿಂದ ಆತ ಸ್ಥಳೀಯರ ವಿರೋಧ ಕಟ್ಟಿಕೊಂಡು, ಕೋಟೆ ಮರಾಠರ ಕೈ ವಶವಾಗಲು ಕಾರಣವಾಯಿತು.
ನಂತರ ೧೭೮೩- ೧೭೮೪ರಲ್ಲಿ ಬ್ರಿಟಿಷ್ ಮೇಜರ್ ಟೋರಿನೋ ಹೊನ್ನಾವರ ಹೋಗುವ ಮಾರ್ಗದಲ್ಲಿ ಮಿರ್ಜಾನ್ ಕೋಟೆಯನ್ನು ವಶಪಡಿಸಿಕೊಂಡನು.


ಕೋಟೆಯ ಭೌಗೋಲಿಕ ಲಕ್ಷಣಗಳು:
ಅಘನಾಶಿನಿ ನದಿಯ ದಂಡೆಯಮೇಲೆ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದೆ.. ಕುಮಟಾ ಪಟ್ಟಣದಿಂದ ೮ ಕಿಮೀ ದಕ್ಷಿಣ ದಿಕ್ಕಿನಲ್ಲಿದೆ. ಮಿರ್ಜಾನ್ ಕೋಟೆಯ ವಿಸ್ತೀರ್ಣ ಸಮಾರು ೧೦ ಎಕರೆ.
ಒಂದು ಮುಖ್ಯ ದ್ವಾರ ಹಾಗೂ ಮೂರು ಉಪ ದ್ವಾರಗಳನ್ನು ಹೊಂದಿದೆ. ಕೋಟೆಯ ಸುತ್ತ ಕಂದರವಿದ್ದು ಅಪಾಯ ಸಂದರ್ಭಗಳಲ್ಲಿ ನೀರು ತುಂಬಲಾಗುತ್ತಿತ್ತು.
ಹಲವು ಗುಪ್ತ ದ್ವಾರಗಳು, ದರ್ಬಾರ ಹಾಲ್, ಮಾರುಕಟ್ಟೆ ಹಾಗೂ ಹಿಂದೂ ದೇವರುಗಳ ಭಗ್ನ ಪ್ರತಿಮೆಗಳ ಅವಶೇಷಗಳನ್ನು ನಾವು ಕಾಣಬಹುದು.ಮೊದಲು ಬ್ರಿಟಿಷರು ಹಾಗೂ ಸ್ವಾತಂತ್ರ್ಯ ನಂತರ ಸರ್ಕಾರ ಕೋಟೆಎಯ ಪುನರ್ ನಿರ್ಮಾಣ ಕಾರ್ಯ ಮಾಡಿದ್ದು ಹಳೆಯ ನೆನಪುಗೆಳೊಂದಿಗೆ ಮಿರ್ಜಾನ್ ಕೋಟೆ ವಿರಾಜಮಾನವಾಗಿದೆ.

0 comments:

Post a Comment