ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿ ಸಿಂಚನ
ಸಾಗರ: ಜಗದೊಳಿತಿಗೆ ಜಗದ್ಗುರುವಿನೆಡೆಗೆ "ಶಂಕರಪಂಚಮೀ"...ಹೌದು...ಅದು ಅಕ್ಷರಶಃ ಸತ್ಯ. ಶ್ರೀ ಸಂಸ್ಥಾನಗೋಕರ್ಣ - ಶ್ರೀ ರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ದಿವ್ಯಸಂಕಲ್ಪದೊಂದಿಗೆ ಏಪ್ರಿಲ್ 25ರಿಂದ 28ರ ತನಕ ಲೋಕಗುರುವಿನುತ್ಸವ ಅತ್ಯಂತ ವೈಭವದಿಂದ ಉತ್ತರಕನ್ನಡ ಜಿಲ್ಲೆಯ ಶ್ರೀರಾಮದೇವ ಬಾನ್ಕುಳಿಮಠದಲ್ಲಿ ನಡೆಯಿತು.ನಯನ ಮನೋಹರವಾದ 121 ಯಜ್ಞ ವೇದಿಕೆಯಲ್ಲಿ 200 ತೇಜಸ್ವೀ ಋತ್ವಿಜರು ಹಾಗೂ 1200 ಸಾತ್ತ್ವಿಕ ಗೃಹಸ್ಥರು ಸಮ್ಮಿಲಿತರಾಗಿ ನಡೆಸಿದ ಅತಿರುದ್ರ ಮಹಾಯಾಗ, ಮಾತೃಸಮೂಹದಿಂದ ಏಕಕಂಠದಲ್ಲಿ ಮೊಳಗುವ ಸೌಂದರ್ಯಲಹರೀ ಪಾರಾಯಣ.ಲಲಿತಾ ಸಹಸ್ರನಾಮಪೂರ್ವಕ ಕುಂಕುಮಾರ್ಚನೆ , ವಿಶೇಷವಾಗಿ ಸಾಮೂಹಿಕ ಬೃಹತ್ ಶ್ರೀ ಶಂಕರಗುರುಪೂಜಾ ಕಾರ್ಯಕ್ರಮಗಳು ಅಮೋಘ ಅನುಭವವನ್ನು ಕಟ್ಟಿಕೊಟ್ಟಿತು. ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಪುನೀತರಾದರು. ಕಾರ್ಯಕ್ರಮದ ದಿವ್ಯ ಸಂಕಲ್ಪ ವಹಿಸಿದ್ದ ಪೂಜ್ಯ ಶ್ರೀಗಳು ಸಂತೃಪ್ತಿಯಿಂದ ಧನ್ಯತೆಯ ಅನುಗ್ರಹಾಶೀರ್ವಾದ ನೀಡಿದರು.

0 comments:

Post a Comment