ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:47 PM

ಗಝಲ್...

Posted by ekanasu

ಸಾಹಿತ್ಯ
ಕನಸ ಕನಸೊಳಗೆ ಕತ್ತಲಾದೆ ಸಾಕಿ
ಕಣ್ಣೀರ ಹೂಜಿಯೊಳಗೆ ಮೀನಾದೆ ಸಾಕಿ
ಮನಸ ಮಳಲೊಳಗೆ ಮರುಳಾದೆ
ನನಸ ನೆರಳೊಳಗೆ ಬಿಸಿಲಾದೆ ಸಾಕಿ


ಮಾತು ಮಾತೊಳಗೆ ಬರುಡಾದೆ
ಮೌನದ ಎದುರೊಳಗೆ ಮೂಕಾದೆ ಸಾಕಿ

ಪುಟ ಪುಟಗಳೊಳಗೆ ಕಥೆಯಾದೆ
ಚರಿತ್ರೆ ಪುಟದೊಳಗೆ ಗುರುತಾದೆ ಸಾಕಿ

ಮೇಣದ ಉರಿಯೊಳಗೆ ಬೆಳಕಾಗಲೋದೆ
ಕಪರ್ೂರದ ಕಂಪೊಳಗೆ ತಂಪಾದೆ ಸಾಕಿ

ಹುಣ್ಣಿಮೆಯ ಚಂದ್ರನೊಳಗೆ ಕಲೆಯಾದೆ
ಆಕಾಶದ ಚುಕ್ಕೆಗಳೊಳಗೆ ಒಂದಾದೆ ಸಾಕಿ

ಪ್ರಕಾಶ.ಬಿ.ಜಾಲಹಳ್ಳಿ

2 comments:

Anonymous said...

very nilce line. Laxmi. haveri

ಅನೀಲಕುಮಾರ ಆಲಾಳಮಠ said...

tumba sundaravad saalugalannu bareddiri

Post a Comment