ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:21 PM

ಹಠಾತ್ ಭೇಟಿ

Posted by ekanasu

ಪ್ರಾದೇಶಿಕ ಸುದ್ದಿ
ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ ಉಲ್ಭಣ,ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯ ವೈದ್ಯರು ಗೈರು, ಕುಡಿಯುವ ನೀರಿಗೆ ಹಾಹಾಕಾರ,ಶುಚಿತ್ವದ ಸಮಸ್ಯೆ ಮುಂತಾದ ದೂರು ದುಮ್ಮಾನಗಳಿಗೆ ತಕ್ಷಣ ಸ್ಪಂದಿಸಿ ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಈಶ್ವರ ಕಟೀಲು ಮಂಗಳವಾರ ಮುಂಜಾನೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ರಾತ್ರಿ ಪಾಳಿಯ ವೈದ್ಯರಿಲ್ಲದೆ ಸಮಸ್ಯೆಗಳಾಗುತ್ತಿದೆ.ಒಂದು ವಾರವಾದರೂ ಬೆಡ್ ಶೀಟ್ ಬದಲಾಯಿಸಿಲ್ಲ ಶೌಚಾಲಯ ದುರ್ನಾತ ಬೀರುತ್ತಿದೆ. ನೀರಿನ ಸಮಸ್ಯೆಯಾಗಿದೆ ಕುಡಿಯಲು ಹೊರಗಿನಿಂದ ಬಾಟ್ಲಿನೀರು ತರುತ್ತಿದ್ದೇವೆ ಎಂದು ರೋಗಿಗಳು ಈಶ್ವರ್ ಅವರಲ್ಲಿ ದೂರಿದರು.ಈ ಬಗ್ಗೆ ವಿಚಾರಿಸಿದಾಗ ರಾತ್ರಿ ಪಾಳಿಯ ಎರಡು ನರ್ಸ್ ಗಳು ಮತ್ತು 2ಡಿಗ್ರೂಪ್ ನೌಕರರರು ಮಾತ್ರ ಡ್ಯೂಟಿ ಮಾಡುತ್ತಿದ್ದು ಅಗತ್ಯ ಬಂದಾಗ ನರ್ಸ್ ಗಳು ಕಾಲ್ ಮಾಡಿದರೆ ಡಾಕ್ಟರ್ ಬರುತ್ತಾರೆ ಸಮಸ್ಯೆಯಾವುದಿಲ್ಲ ಎಲ್ಲವೂ ಸರಿಯಾಗಿದೆ ಎಂಬ ಉತ್ತರ ಬಂದಿತು.

ಮೂಲ್ಕಿಯಲ್ಲಿ ಮಲೇರಿಯಾ ಹಾವಳಿಯಿದ್ದು ಕಳೆದ ತಿಂಗಳು 7ಜನ ಈ ತಿಂಗಳಲ್ಲಿ ಈವರೆಗೆ 20ಜನ ಅಡ್ಮಿಟ್ ಆಗಿದ್ದಾರೆ ಹೆಚ್ಚಿನವರು ಮೂಲ್ಕಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣದ ಕಾರ್ಮಿಕರು ಎಂದು ಡ್ಯೂಟಿ ನರ್ಸ್ ತಿಳಿದರು.
ನೀರಿನ ಸಮಸ್ಯೆ ಕಳೆದ 2ದಿನದಿಂದ ವಿಪರೀತವಾಗಿದ್ದು ಬೋರ್ನಲ್ಲಿ ನೀರಿಲ್ಲ ಬಾವಿಯ ನೀರು ಕಾಲುಗಂಟೆ ಮಾತ್ರ ಲಭ್ಯ ಈ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ತಿಳಿಸಿದ್ದು ಅವರು ಮೂಲ್ಕಿ ನಗರ ಪಂಚಾಯತ್ನ್ನು ಸಂಪರ್ಕಿಸಿದ್ದಾರೆ ಎಂದರು.
ಸ್ತಳೀಯ ಆರೋಗ್ಯ ಸಮಿತಿ ನಿಷ್ಕ್ರೀಯವಾಗಿದ್ದು ನೂತನ ಸಮಿತಿ ನಿರ್ಮಾಣಕ್ಕೆ ಈಶ್ವರ್ ರವರಲ್ಲಿ ಸ್ಥಳಿಯರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಈಶ್ವರ್ ತಿಳಿಸಿದರು.
ಈಗಾಗಲೇ ಹೆರಿಗೆ ವಿಭಾಗದ ಛಾವಣಿ ದುರಸ್ತಿಗೆ ಅನುಮೋದನೆ ನೀಡಲಾಗಿದ್ದು ಶೀಘ್ರ ದುರಸ್ತಿಯಾಗುವುದು ಕುಡಿಯುವ ನೀರಿಗೂ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭ ಮೂಲ್ಕಿ ನಗರ ಪಂಚಾಯತ್ ಸದಸ್ಯ ಸುನಿಲ್ ಆಳ್ವಾ ಉಪಸ್ಥಿತರಿದ್ದರು.
ವರದಿ:ಭಾಗ್ಯವಾನ್ ಮುಲ್ಕಿ.

0 comments:

Post a Comment