ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಇತ್ತೀಚಿನ ಆಧುನಿಕ ಜೀವನ ಶೈಲಿಯ ವಿಧಾನದಿಂದ ಯುವ ಜನತೆಗೆ ಕೆಲವೊಮ್ಮೆ ವ್ಯಾಯಾಮದ ಕೊರತೆ ಕಂಡು ಬರುತ್ತದೆ. ಈ ವ್ಯಾಯಾಮದ ಕೊರತೆಯನ್ನು ನಿಗಿಸಲು ಯೋಗಾಸನಗಳು ತುಂಬಾ ಸಹಕಾರಿಯಾಗುತ್ತದೆ. ಸ್ವಾಮಿ ವಿವೇಕಾನಂದರು ಒಂದೆಡೆ ಈ ರೀತಿ ಹೇಳುತ್ತಾರೆ.

ಪ್ರತಿಯೊಬ್ಬ ಜೀವಿಯಲ್ಲಿ ದಿವ್ಯತೆ ಇದೆ. ಪ್ರತಿಭೆ ಇದೆ. ಸೂಕ್ತ ಪ್ರತಿಭೆಯನ್ನು ವಿಕಸನಗೊಳ್ಳಲು ಯಾವುದಾರರೂ ಒಂದು ರೀತಿಯಲ್ಲಿ ಸಾಧನೆಯನ್ನು ಮಾಡಿ ಎಂದು ಹೇಳುತ್ತಾರೆ. (ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ) ಇದರಲ್ಲಿ ರಾಜ ಯೋಗದಲ್ಲಿ ಚಿತ್ತ ಚಾಂಚಲ್ಯತೆಯನ್ನು ನಿರೋಧಿಸಿ ಸ್ಥಿರತೆಯನ್ನು ಸಾಧಿಸಲು ಯೋಗ ಎಂದು ಹೇಳುತ್ತಾರೆ. ಸ್ವಾಮಿ ವಿವೇಕಾನಂದರು ಯೋಗದ ಬಗ್ಗೆ ತನ್ನ ಸಂಪೂರ್ಣ ವಿಕಾಸವನ್ನು ಕೆಲವು ತಿಂಗಳಲ್ಲಿ ಅಥವಾ ಕೆಲವು ಗಂಟೆಗಳಲ್ಲಿ ಮಾನವನು ಸಾಧಿಸುವ ಸಾಧನೆಯನ್ನು ಯೋಗ ಎಂದು ಹೇಳುತ್ತಾರೆ.

ಯುವ ಜನತೆಯು ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ಪತಂಜಲಿ ಋಷಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗಗಳನ್ನು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ತನ್ನ ಜೀವನದಲ್ಲಿ ಅಳವಡಿಸಿಕೊಡಾಗ ಜೀವನ ಶೈಲಿಯು ಉತ್ತಮಗೊಳ್ಳುವುದು.

ಯೋಗದ ಮೊದಲ ಮೆಟ್ಟಿಲು ಯಮವನ್ನು ಆಚರಿಸಿದರೆ ಮಾನಸಿಕ ಶುದ್ಧಿಯಾಗಿ ನೈತಿಕ ಸುಧಾರಣೆಯಾಗುವುದು. ಇದು ವ್ಯಕ್ತಿಗೆ ಮತ್ತು ಸಮಾಜಕ್ಕೆ ಅನ್ವಯವಾಗುತ್ತದೆ.

ಯೋಗ ಸಾಧನೆಯ ಎರಡನೇ ಮೆಟ್ಟಿಲು ನಿಯಮ ಶಾರೀರಿಕ ಹಾಗೂ ಮಾನಸಿಕ ನಡವಳಿಕೆಯ ಮೂಲಕ ದೈಹಿಕ ಮತ್ತು ಮಾನಸಿಕ ಏಳಿಗೆಯಾಗಿ ಆರೋಗ್ಯ ವರ್ಧನೆಯಾಗುವುದು.

ಯೋಗ ಸಾಧನೆಯ ಮೂರನೇಯ ಮೆಟ್ಟಿಲು ಆಸನ ಸ್ಥಿರಂ, ಸುಖಂ, ಆಸನಂ, ಅಂದರೆ ಸ್ಥಿರವಾದ ಸುಖಕರವಾದ ಶರೀರದ ವಿವಿಧ ಭಂಗಿಗಳು.
ಯೋಗಾಭ್ಯಾಸದಲ್ಲಿ ದೇಹವನ್ನು ಶಿಸ್ತು ಬದ್ಧವಾಗಿ ಕ್ರಮಬದ್ಧವಾಗಿ ನಿಧಾನವಾಗಿ ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ, ಇತ್ಯಾದಿ ಮಾಡುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ, ನರಮಂಡಲಕ್ಕೂ, ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ, ನರಮಂಡಲವೂ ಮಾಂಸಖಂಡಗಳೂ ಪೆಡಸಾಗದೆ ಶಕ್ತಿಯುತವಾಗುವುವು. ಮತ್ತು ಚೈತನ್ಯಭರಿತವಾಗುವುವು.

ಅಷ್ಟಾಂಗ ಯೋಗದ ನಾಲ್ಕನೇಯ ಮೆಟ್ಟಿಲು ಪ್ರಾಣಯಾಮ ಪ್ರಾಣಕ್ಕೆ ಹೊಸತನವನ್ನು ನೀಡುವ ಆಯಾಮವೇ ಪ್ರಾಣಯಾಮ. ಉಸಿರಾಟದ ಮೇಲೆ ಹಿಡಿತ ತರುವುದೇ ಪ್ರಾಣಾಯಾಮ. ಉಸಿರಿನ ಮೂಲಕ ಪಂಚ ಪ್ರಾಣಗಳ ಹಾಗೂ ಮನಸ್ಸಿನ ಹತೋಟಿಯನ್ನು ಸಾಧಿಸುವುದೇ ಪ್ರಾಣಯಾಮ. ಶ್ವಾಸಕೋಶದ ಮತ್ತು ನರಮಂಡಲ ಸಾಮಥ್ರ್ಯವನ್ನು ಹೆಚ್ಚಿಸುವುದು. ಇದು ದೇಹ ಹಾಗೂ ಮನಸ್ಸಿನ ಮೆಲೆ ನಿಯತ್ರಂಣವನ್ನು ಸಾಧಿಸಲು ಸಹಾಯವಾಗುತ್ತದೆ. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ನಿವಾರಣೆಯಾಗುವುದು, ಸಂಯಮ ಉಂಟಾಗುವುದು.

ಅಷ್ಟಾಂಗ ಯೋಗದ ಐದನೇ ಮೆಟ್ಟಿಲು ಪ್ರತ್ಯಾಹಾರ ವು ಪಂಚೇಂದ್ರಿಯಗಳನ್ನು
ಹತೋಟಿಯಲ್ಲಿರುತ್ತದೆ.

ಆರನೇ ಮೆಟ್ಟಿಲಾದ ಧಾರಣ ದಿಂದ ಮನಸ್ಸನ್ನು ಒಂದೇ ವಸ್ತುವಿನಿ ಮೇಲೆ ಸ್ಥಿರವಾಗಿ ದೀರ್ಘ ಸಮಯ ಪೂರ್ಣವಾಗಿ ನೆಲೆ ನಿಲ್ಲಿಸಲು ಸಾಧ್ಯವಾಗುತ್ತದೆ.

ಯೋಗದ ಏಳನೇ ಮಾರ್ಗವೇ ಧ್ಯಾನ ಧ್ಯಾನ ಎಂದರೆ ಯಾವುದೇ ರೀತಿಯ ಚಿಂತೆಗಳಿಲ್ಲದೆ ವಿಷಯರಹಿತ ಮನಸ್ಸಿನ ಸ್ಥಿತಿಯಾಗಿದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಇಲ್ಲಿ ಧ್ಯಾನ ಎಂದರೆ ತಲ್ಲೀನತೆ ಸ್ವಪರಿಚಯ, ಕಲೆ, ತನ್ನದೇ ಪ್ರತಿಬಿಂಬ ಧೀರ್ಘ ಅವಲೋಕನ ತನ್ನ ಆತಂರ್ಯಗಳನ್ನು ಕೂಲಂಕುಷವಾಗಿ ಪರೀಕ್ಷಿಸಿಕೊಳ್ಳುವ ಸಾಧನವಾಗಿದೆ. ಧ್ಯಾನ ಎಂದರೆ ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದು ಎಂದರ್ಥ.

ಧ್ಯಾನದಿಂದ ಮನಸ್ಸಿನ ಒತ್ತಡ ನಿವಾರಣೆಯಾಗಿ ಮನಸ್ಸು ಹಗುರ, ಶಾಂತವಾಗಿ, ಲವಲವಿಕೆಯು, ಆನಂದಮಯವಾಗುವುದು. ಮನೋಬಲ, ಆತ್ಮಬಲ ಹೆಚ್ಚುವುದು.

ಅಷ್ಟಾಂಗ ಯೋಗದ ಎಂಟನೇ ಮೆಟ್ಟಿಲು ಸಮಾಧಿ ಧ್ಯಾನದಿಂದ ನಿರ್ಮಲಗೊಂಡ ಮನಸ್ಸು ಸಮಾಧಿ ಸ್ಥಿತಿಯನ್ನು ತಲುಪುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯಬಹುದಾಗಿದೆ.

ಯುವ ಜನತೆಯು ಯೋಗವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಯೋಗವು ವ್ಯಕ್ತಿಯ ಬಾಹ್ಯ ಆರೋಗ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಆತಂರಿಕ ಆರೋಗ್ಯಕ್ಕೆ ನೀಡುತ್ತದೆ. ಸುಪ್ತ ಸಾಮಥ್ರ್ಯವನ್ನು ಪ್ರಕಟಿಸುವ ಸಾಧನವು ಇದಾಗಿದೆ. ಪ್ರತಿಭೆಗಳು ಅರಳಲು ಸಹಾಯಕವಾಗಿದೆ.
ಯೋಗವು ಗುರು ಮಖೇನನೆ ಕಲಿತು ಅಭ್ಯಾಸ ಮಾಡಬೇಕು.

ನಮ್ಮ ಹಿರಿಯರು ಹೇಳುವಂತೆ ಯೋಗ ಇರುವುದು ಆಧ್ಯಾತ್ಮಿಕ ಸಾಧನೆಗೆ, ಆತ್ಮ ಸಾಕ್ಷ್ಯಾತ್ಕಾರಕ್ಕೆ, ಭಂಗವಂತನ ದರ್ಶನಕ್ಕೆ ಎಂಬುದಾಗಿದೆ.'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟ್ರೀಯ ಯೋಗ

0 comments:

Post a Comment